ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ಹೋರಾಟದಲ್ಲಿ ವಿಶ್ವ ಸಂಸ್ಥೆ ಏನು ಮಾಡುತ್ತಿದೆ: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮೋದಿ ಪ್ರಶ್ನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ವಿಶ್ವಸಂಸ್ಥೆ ಸಾಮಾನ್ಯ ಸಭೆಯ 75ನೇ ಸದನವನ್ನು ಉದ್ದೇಶಿಸಿ ಇಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಿದರು. ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು ಎಂದು ಭಾರತ ಹೆಮ್ಮೆಪಡುತ್ತದೆ ಎಂದಿದ್ದಾರೆ.

"ಕಳೆದ 75 ವರ್ಷಗಳಲ್ಲಿ ಯುಎನ್‌ನ ಕಾರ್ಯಕ್ಷಮತೆಯ ಬಗ್ಗೆ ನಾವು ವಸ್ತುನಿಷ್ಠ ಮೌಲ್ಯಮಾಪನ ಮಾಡಬೇಕಾದರೆ, ನಾವು ಹಲವಾರು ಸಾಧನೆಗಳನ್ನು ನೋಡುತ್ತೇವೆ. ಆದರೆ ಅದೇ ಸಮಯದಲ್ಲಿ, ಕೆಲಸದ ಬಗ್ಗೆ ಗಂಭೀರವಾದ ಆತ್ಮಾವಲೋಕನದ ಅಗತ್ಯವನ್ನು ಸೂಚಿಸುವ ಹಲವಾರು ನಿದರ್ಶನಗಳಿವೆ. "ಎಂದು ಯುಎನ್‌ಜಿಎ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದರು.

PM Narendra Modi Speech at UNGA Highlight in Kannada

ಪ್ರಧಾನಿ ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಏನೆಲ್ಲಾ ಮಾತನಾಡಿದರು ಎಂಬುದರ ಹೈಲೈಟ್ಸ್ ಈ ಕೆಳಗಿದೆ:

* ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು ಎಂದು ಭಾರತ ಹೆಮ್ಮೆಪಡುತ್ತದೆ. ಈ ಐತಿಹಾಸಿಕ ಸಂದರ್ಭದಲ್ಲಿ, ಭಾರತದ 1.3 ಶತಕೋಟಿ ಜನರ ಭಾವನೆಗಳನ್ನು ಹಂಚಿಕೊಳ್ಳಲು ನಾನು ಈ ಜಾಗತಿಕ ವೇದಿಕೆಗೆ ಬಂದಿದ್ದೇನೆ.

* ನಾವು ಮೂರನೇ ವಿಶ್ವ ಯುದ್ಧ ತಡೆದಿದ್ದೇವೆ, ಆದರೆ ಬೇರೆ ಬೇರೆಎ ರೂಪದಲ್ಲಿ ಯುದ್ಧ ಸಂಭವಿಸಬಹುದು. ಭಯೋತ್ಪಾದನೆಯು ವಿಶ್ವವನ್ನು ನಲುಗಿಸುತ್ತಿದೆ. ಎಲ್ಲರೂ ಶಿಖಾರಿಯಾಗುತ್ತಿದ್ದಾರೆ ಎಂದು ಮೋದಿ ಗಂಭೀರತೆಯನ್ನು ಎಚ್ಚರಿಸಿದ್ದಾರೆ.

* ಕಳೆದ 7-8 ತಿಂಗಳಿನಿಂದ ನಾವು ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ವಿಶ್ವ ಸಂಸ್ಥೆ ಎಲ್ಲಿದೆ ಏನು ಮಾಡುತ್ತಿದೆ. ಕೊರೊನಾ ವಿರುದ್ಧದ ಸಮರದಲ್ಲಿ ವಿಶ್ವಸಂಸ್ಥೆ ಪಾತ್ರವೇನು, ವಿಶ್ವಸಂಸ್ಥೆ ಏನು ಮಾಡುತ್ತಿದೆ ಎಂದು ಮೋದಿ ಪ್ರಶ್ನಿಸಿದ್ದಾರೆ.

* ಭಾರತ ಸಶಕ್ತವಾಗಿರುವಾಗ ನಾವು ಆಕ್ರಮಣ ಮಾಡಿಲ್ಲ, ದುರ್ಬಲ ಆಗಿದ್ದಾಗ ಹೊರೆಯಾಗಿಲ್ಲ ಆದರೂ ವಿಶ್ವಸಂಸ್ಥೆಯ ನಿರ್ಧಾರ ಕೈಗೊಳ್ಳುವ ಸಂರಚನೆಯಿಂದ ಇನ್ನೂ ಎಷ್ಟು ಸಮಯ ಭಾರತವನ್ನು ಹೊರಗಿಡಲಾಗುತ್ತದೆ? ಎಂದು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

* ಭಾರತ ಎಂದಿಗೂ ವಿಶ್ವ ಶಾಂತಿ, ಮಾನವೀಯತೆ ರಕ್ಷಣೆಗೆ ನಿಲ್ಲಲಿದೆ. ಭಯೋತ್ಪಾದನೆ ವಿರುದ್ಧ, ಡ್ರಗ್ಸ್ ಹಾಗೂ ಮನಿ ಲಾಂಡರಿಂಗ್ ವಿರುದ್ಧ ಹೋರಾಡಲಿದೆ ಎಂದು ಪ್ರಧಾನಿ ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.

* ಭಾರತ ಎಂದಿಗೂ ವಿಕಾಸಶೀಲ ದೇಶದ ಪರವಾಗಿ ನಿಲ್ಲಲಿದೆ, ಭಾರತದಲ್ಲಿ ಬಹಿರ್ದೆಸೆ ಮುಕ್ತ, ಎಲ್ಲರಿಗೂ ಸಿಲಿಂಡರ್ ಕೊಟ್ಟಿದೆ. ಭಾರತ ಡಿಜಿಟಲ್ ಕ್ರಾಂತಿಯತ್ತ ಹೆಜ್ಜೆ ಇಟ್ಟಿದೆ

* ಶುದ್ಧಜಲ ನೀರು ಪೂರೈಕೆ ಯೋಜನೆ ಆರಂಭಿಸಿದ್ದೇವೆ, ದೇಶದ ಪ್ರತಿ ಹಳ್ಳಿಗೂ ಕುಡಿಯುವ ನೀರಿನ ಯೋಜನೆ ತಲುಪಲಿದೆ, ಆತ್ಮ ನಿರ್ಭರ ಭಾರತ್ ಅಭಿಯಾನದಿಂದ ಜಾಗತಿಕ ಆರ್ಥಿಕತೆಗೆ ಬಲ ದೊರೆಯಲಿದೆ

* ಕೊವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ 150 ದೇಶಗಳಿಗೆ ಭಾರತ ವೈದ್ಯಕೀಯ ಉಪಕರಣಗಳ ಹಾಗೂ ವೈದ್ಯಕೀಯ ನೆರವು ನೀಡಲಾಗಿದೆ ಎಂದು ಪ್ರಧಾನಿ ಭಾರತದ ಪರೋಪಕಾರ ಸ್ವಭಾವವನ್ನು ಸ್ಮರಿಸಿದ್ದಾರೆ.

English summary
PM Narendra Modi Speech at UNGA: Here are the Highlights of Prime Minister Narendra Modi speech in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X