ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ-ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಹತ್ವದ ಮಾತುಕತೆ

|
Google Oneindia Kannada News

ನವದೆಹಲಿ, ನವೆಂಬರ್ 28: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಶುಕ್ರವಾರ ದೂರವಾಣಿ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮುಂದಿನ ಹತ್ತು ವರ್ಷಗಳಲ್ಲಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಬೆಳೆಸುವ ಕುರಿತು ಚರ್ಚಿಸಿದರು. ವ್ಯಾಪಾರ ಮತ್ತು ಹೂಡಿಕೆಯ ವಲಯಗಳು, ರಕ್ಷಣೆ ಮತ್ತು ಕೊರೊನಾ ವೈರಸ್ ಪಿಡುಗಿನ ವಿರುದ್ಧದ ಹೋರಾಟದ ವಲಯಗಳಲ್ಲಿ ಪರಸ್ಪರ ಸಹಕಾರದ ಕುರಿತು ಮಾತುಕತೆ ನಡೆಸಿದರು.

'ನನ್ನ ಸ್ನೇಹಿತ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಉತ್ತಮ ಚರ್ಚೆ ನಡೆಸಿದೆ. ಇದು ಮುಂದಿನ ದಶಕಕ್ಕೆ ಭಾರತ-ಬ್ರಿಟನ್ ಸಂಬಂಧದ ಮಹತ್ವಾಕಾಂಕ್ಷಿ ರಹದಾರಿಯಾಗಲಿದೆ. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಹವಾಮಾನ ವೈಪರೀತ್ಯ ಮತ್ತು ಕೋವಿಡ್ 19 ವಿರುದ್ಧದ ಹೋರಾಟ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ನಮ್ಮ ಸಹಕಾರವನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನಾವು ಒಪ್ಪಿಕೊಂಡಿದ್ದೇವೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಹವಾಮಾನ ವೈಪರೀತ್ಯ ಮತ್ತು ಆರೋಗ್ಯ ವಲಯ ಸೇರಿದಂತೆ ಭಾರತ ಮತ್ತು ಬ್ರಿಟನ್ ನಡುವಿನ ಸಂಬಂಧವನ್ನು ತೀವ್ರಗೊಳಿಸುವ ಮತ್ತು ಬಲಪಡಿಸಲು 2021ರ ವರ್ಷವನ್ನು ತಳಹದಿಯನ್ನಾಗಿ ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ.

PM Narendra Modi Speaks To UK PM Boris Johnson To Discuss Deepen Relationship

'ಧನ್ಯವಾದಗಳು ನರೇಂದ್ರ ಮೋದಿ. ನಿಮ್ಮೊಂದಿಗೆ ಮಾತನಾಡಿದ್ದು ಖುಷಿಯಾಯಿತು. ಭಾರತ ಮತ್ತು ಬ್ರಿಟನ್ ಸಂಬಂಧವನ್ನು 2021 ಮತ್ತು ಅದರಾಚೆಗೆ ತೀವ್ರಗೊಳಿಸುವ ಮತ್ತು ಬಲಪಡಿಸುವುದಕ್ಕೆ ನಾನು ಬಹಳ ಕಾತರದಿಂದ ಕಾದಿದ್ದೇನೆ' ಎಂದು ಬೋರಿಸ್ ಟ್ವೀಟ್ ಮಾಡಿದ್ದಾರೆ.

2021ರ ಜನವರಿ 1ರಿಂದ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಸಂಪೂರ್ಣವಾಗಿ ಹೊರಬರಲಿದೆ. ಹೀಗಾಗಿ ಅದು ಜಗತ್ತಿನಾದ್ಯಂತ ಹೊಸ ಸಂಬಂಧಗಳನ್ನು ಬೆಳೆಸಲು ಮತ್ತು ಹಾಲಿ ಇರುವ ಸಂಬಂಧಗಳನ್ನು ಬಲಪಡಿಸಲು ಮುಂದಾಗುತ್ತಿದೆ. ಮುಖ್ಯವಾಗಿ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಹೊಂದಲು ಬಯಸುತ್ತಿದೆ.

'ಇಬ್ಬರೂ ಪ್ರಧಾನಿಗಳು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಹರಿವನ್ನು ಸುಧಾರಿಸುವ ಮಹತ್ವವನ್ನು ಒತ್ತಿ ಹೇಳಿದರು. ಇದುವರೆಗೆ ನಡೆದಿರುವ ಸತತ ಪ್ರಯತ್ನಗಳನ್ನು ಉಭಯ ನಾಯಕರು ಸ್ವಾಗತಿಸಿದರು. ಜತೆಗೆ ಆರ್ಥಿಕ ಸಂಬಂಧವನ್ನು ವೃದ್ಧಿಸುವ ಸಂಬಂಧ ಆಕಾಂಕ್ಷೆ ಹಂಚಿಕೊಂಡರು' ಎಂದು ಬ್ರಿಟನ್ ಪ್ರಧಾನಿ ವಕ್ತಾರರು ತಿಳಿಸಿದ್ದಾರೆ.

English summary
Prime Minister Narendra Modi spoke to UK PM Boris Johnson and discussed ambitious roadmap for India-UK relationship in next decade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X