ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇದಿಕೆಯಲ್ಲಿ ಬಿಹಾರದ ಸಿಎಂಗೆ ಆದ ಮೋದಿ ಜನಪ್ರಿಯತೆಯ ಅನುಭವ

|
Google Oneindia Kannada News

'ಮೋದಿ.. ಮೋದಿ ಏ ಕ್ಯಾ ಮೋದಿ.. ಮೋದಿ' ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕಳೆದ ಬಿಹಾರ ಅಸೆಂಬ್ಲಿ ಚುನಾವಣೆಯ ಕಿಂಗ್ ಮೇಕರ್ ಲಾಲೂ ಪ್ರಸಾದ್ ಯಾದವ್, ಮೋದಿ ಶೈಲಿಯಲ್ಲೇ ಲೇವಡಿ ಮಾಡಿದ್ದುಂಟು.

ಈಗ ಮೋದಿ ಜನಪ್ರಿಯತೆಯ ಖುದ್ದು ಅನುಭವ ಬಿಹಾರದ ಹಾಜೀಪುರದಲ್ಲಿ ನಡೆದ ಸರಕಾರೀ ಸಮಾರಂಭದ ವೇದಿಕೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಆಗಿದೆ. (ಮೋದಿ ದೇಶಕ್ಕೆ ನೀಡಿದ 2 ಅಪ್ರತಿಮ ಉಡುಗೊರೆಗಳು)

ಬಿಹಾರ ಸರಕಾರ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನಿತೀಶ್ ಮತ್ತು ಪ್ರಧಾನಿ ನರೇಂದ್ರ ಮೋದಿ ಒಂದೇ ವೇದಿಕೆಯಲ್ಲಿದ್ದರು. ಸಿಎಂ ನಿತೀಶ್ ಮಾತನಾಡಲು ಆರಂಭಿಸುತ್ತಿದ್ದಂತೇ, ನೆರೆದಿದ್ದ ಸಾವಿರಾರು ಜನ ಮೋದಿ ಜಪ ಆರಂಭಿಸಿದ್ದಾರೆ.

ನಿತೀಶ್ ಭಾಷಣದ ಮಧ್ಯೆ ನೆರೆದಿದ್ದ ಸಭಿಕರಿಂದ 'ಮೋದಿ.. ಮೋದಿ' ಜಪ ತಾರಕಕ್ಕೇರಿದೆ. ಬೇರೆ ವಿಧಿಯಿಲ್ಲದೇ ನಿತೀಶ್ ಭಾಷಣವನ್ನು ಸ್ವಲ್ಪ ಹೊತ್ತು ನಿಲ್ಲಿಸ ಬೇಕಾಯಿತು. (ದೇಶ ವಿನಾಶದತ್ತ ಸಾಗುತ್ತಿರುವುದಕ್ಕೆ ಬಿಜೆಪಿ ಹೊಣೆ)

ಆಗ ಮೋದಿ ಎದ್ದು ಜನರನ್ನು ಸುಮ್ಮನಿರುವಂತೆ ಸೂಚಿಸಿ, ಭಾಷಣ ಕೇಳುವಂತೆ ಜನರಲ್ಲಿ ಸೂಚಿಸಿ ರಾಜಕೀಯ ಪ್ರಬುದ್ದತೆ ಮೆರೆದಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ಕಿಸಿ..

ಹಾಜೀಪುರದಲ್ಲಿ ನಡೆದ ಕಾರ್ಯಕ್ರಮ

ಹಾಜೀಪುರದಲ್ಲಿ ನಡೆದ ಕಾರ್ಯಕ್ರಮ

ರೈಲ್ವೆ ಇಲಾಖೆ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳನ್ನು ಬಿಹಾರದ ಹಾಜೀಪುರದಲ್ಲಿ ಮತ್ತು ಬಿಹಾರದ ಇತರ ನಗರಗಳಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಭಾಗವಹಿಸರಲಿಲ್ಲ. ಲಾಲೂ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ ಎನ್ನಲಾಗಿದೆ.

ಚುನಾವಣೆಯ ನಂತರ ಮೊದಲ ಬಾರಿಗೆ

ಚುನಾವಣೆಯ ನಂತರ ಮೊದಲ ಬಾರಿಗೆ

ಬಿಹಾರದ ಜಿದ್ದಾಜಿದ್ದಿನ ಚುನಾವಣೆಯ ನಂತರ ಮೊದಲ ಬಾರಿಗೆ ಒಂದೇ ವೇದಿಕೆ ಹಂಚಿಕೆ ಕೊಂಡ ಮೋದಿ ಮತ್ತು ನಿತೀಶ್, ಬೇಗುಸರಾಯಿ, ವೈಶಾಲಿ ಮತ್ತು ಹಾಜೀಪುರದಲ್ಲಿ ರಾಜ್ಯ ಸರಕಾರ ಮತ್ತು ರೈಲ್ವೆ ಇಲಾಖೆ ಆಯೋಜಿಸಿದ್ದ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಿತೀಶ್ ಭಾಷಣದ ಮಧ್ಯೆ ಮೋದಿ ಜಪ

ನಿತೀಶ್ ಭಾಷಣದ ಮಧ್ಯೆ ಮೋದಿ ಜಪ

ಪ್ರಧಾನಿ ಮೋದಿ ಭಾಷಣದ ನಂತರ ಬಿಹಾರದ ಸಿಎಂ ನಿತೀಶ್ ಕುಮಾರ್ ಭಾಷಣ ಮಾಡಲಾರಂಭಿಸಿದರು. ಆಗ ನೆರೆದಿದ್ದ ಸಭಿಕರು ಮೋದಿ.. ಮೋದಿ.. ಘೋಷಣೆ ಕೂಗಲಾರಾಂಭಿಸಿದರು. ನಿತೀಶ್ ಸುಮ್ಮನಿರುವಂತೆ ಸೂಚಿಸಿದರೂ, ಮೋದಿ ಮಂತ್ರ ಮುಂದುವರಿದಿತ್ತು. ಇದರಿಂದ ಭಾಷಣವನ್ನು ನಿತೀಶ್ ನಿಲ್ಲಿಸಿದರು, ಆಗ ಕೂಡಲೇ ಎದ್ದ ಪ್ರಧಾನಿ ಮೋದಿ ಜನರನ್ನು ಸುಮ್ಮನಿರುವಂತೆ ಸೂಚಿಸಿದರು. ನಂತರ, ನಿತೀಶ್ ಭಾಷಣ ಮುಂದುವರಿಸಿದರು.

ರೈಲ್ವೆ ಸೇತುವೆ ಉದ್ಘಾಟನೆ

ರೈಲ್ವೆ ಸೇತುವೆ ಉದ್ಘಾಟನೆ

ಬೇಗುಸರಾಯಿ ಜಿಲ್ಲೆಯ ಮುಂಗರ್ ನಲ್ಲಿ ದಿಘಾ - ಸೋಲೇಪುರ ರೈಲ್ವೆ ಮತ್ತು ರಸ್ತೆ ಸೇತುವೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಅಟಲ್ ಪ್ರಧಾನಿಯಾಗಿದ್ದಾಗ ನಿತೀಶ್ ಕುಮಾರ್ ರೈಲ್ವೆ ಸಚಿವರಾಗಿದ್ದರು. ಆಗ ಶಂಕುಸ್ಥಾಪನೆಗೊಂಡಿದ್ದ ಸೇತುವೆಯನ್ನು ಇಂದು ನಾನು ಉದ್ಘಾಟಿಸಿಸುತ್ತಿರುವುದು ನನ್ನ ಭಾಗ್ಯ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಮೋದಿ ಸ್ವಾಗತಿಸಿದ ನಿತೀಶ್

ಬಿಹಾರಕ್ಕೆ ಆಗಮಿಸಿದ ಪ್ರಧಾನಿಯನ್ನು ಆತ್ಮೀಯವಾಗಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ನಿತೀಶ್, ತನ್ನ ಹುಟ್ಟುಹಬ್ಬಕ್ಕೆ ಟ್ವೀಟ್ ಮೂಲಕ ಶುಭಾಶಯ ಕೋರಿದ್ದ ಮೋದಿಗೆ ನೀವು ಬಿಹಾರಕ್ಕೆ ಬರುವುದನ್ನು ಎದುರು ನೋಡುತ್ತಿದ್ದೇನೆಂದು ನಿತೀಶ್ ರಿಟ್ವೀಟ್ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಬಿಹಾರಕ್ಕೆ ಬರುತ್ತಿರಿ ಎಂದು ನಿತೀಶ್, ಮೋದಿಯನ್ನು ಬೀಳ್ಕೊಟ್ಟಿದ್ದಾರೆ.

English summary
Prime Minister Narendra Modi stepped in to silence his supporters at an event in Hajipur, Bihar on Saturday (Mar 12) after they chanted ‘Modi, Modi’ while Bihar chief minister Nitish Kumar was speaking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X