ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಆಸಿಯಾನ್ ಸಂಪರ್ಕ ವೃದ್ಧಿ ನಮ್ಮ ಆದ್ಯತೆ: ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ನವೆಂಬರ್ 11: ಆಗ್ನೇಯ ಏಷ್ಯಾ ದೇಶಗಳ ಸಂಘಟನೆ (ಏಷಿಯಾನ್) ಜತೆ ಸಂಪರ್ಕ ವೃದ್ಧಿಸುವುದು ಭಾರತದ ಮೊದಲ ಆದ್ಯತೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು. ಅವರು ಆನ್‌ಲೈನ್ ಮೂಲಕ ಆಸಿಯಾನ್-ಭಾರತ ಸಮಾವೇಶದಲ್ಲಿ ಮಾತನಾಡಿದರು.

'ಭಾರತ ಮತ್ತು ಆಸಿಯಾನ್ ಕಾರ್ಯತಂತ್ರ ಸಹಭಾಗಿತ್ವವು ನಮ್ಮ ಐತಿಹಾಸಿಕ, ಭೌಗೋಳಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಹಂಚಿಕೆಯ ಆಧಾರದಲ್ಲಿದೆ. ಆಸಿಯಾನ್ ಸಮೂಹವು ನಮ್ಮ ಆಕ್ಟ್ ಈಸ್ಟ್ ನೀತಿಯ ಆರಂಭದಿಂದಲೂ ಮುಖ್ಯಭಾಗದಲ್ಲಿದೆ. ಭಾರತದ ಇಂಡೋ ಪೆಸಿಫಿಕ್ ಸಾಗರ ಯೋಜನೆಗಳು ಮತ್ತು ಆಸಿಯಾನ್‌ನ ಇಂಡೋ ಪೆಸಿಫಿಕ್ ನಿಲುವುಗಳ ನಡುವೆ ಅನೇಕ ಸಾಮ್ಯತೆಗಳಿವೆ' ಎಂದರು.

ತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಯೆಡೆಗೆ ಸಾಗಿದ ಭಾರತ: ಮೋದಿತೆರಿಗೆ ಭಯೋತ್ಪಾದನೆಯಿಂದ ತೆರಿಗೆ ಪಾರದರ್ಶಕತೆಯೆಡೆಗೆ ಸಾಗಿದ ಭಾರತ: ಮೋದಿ

ಭಾರತ ಮತ್ತು ಆಸಿಯಾನ್ ನಡುವಿನ ಎಲ್ಲಾ ಮಾದರಿಯ ದೈಹಿಕ, ಆರ್ಥಿಕ, ಸಾಮಾಜಿಕ, ಡಿಜಿಟಲ್, ಹಣಕಾಸಿನ, ಸಾಗರೋತ್ತರ ಸಂಪರ್ಕಕ್ಕಗಳನ್ನು ವೃದ್ಧಿಸುವುದು ನಮಗೆ ಪ್ರಮುಖ ಆದ್ಯತೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಎಲ್ಲ ಪ್ರದೇಶಗಳಲ್ಲಿಯೂ ನಾವು ಸಮೀಪಕ್ಕೆ ಬಂದಿದ್ದೇವೆ ಎಂದು ಹೇಳಿದರು.

PM Narendra Modi Says Enhancing Connectivity Between India And ASEAN Our Priority

ಬಿಹಾರದಲ್ಲಿ ಬಿಜೆಪಿ ಗೆಲುವಿನ 'ವೋಟ್ ಸೀಕ್ರೆಟ್' ತಿಳಿಸಿದ ಮೋದಿಬಿಹಾರದಲ್ಲಿ ಬಿಜೆಪಿ ಗೆಲುವಿನ 'ವೋಟ್ ಸೀಕ್ರೆಟ್' ತಿಳಿಸಿದ ಮೋದಿ

ಭಾರತ ಮತ್ತು 10 ಆಸಿಯಾನ್ ದೇಶಗಳ ನಡುವೆ ನಡೆದ ವರ್ಚುವಲ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಉಪಾಧ್ಯಕ್ಷರಾಗಿದ್ದು, ಜಾಗತಿಕ ಆರ್ಥಿಕ ತಳಮಳಗಳು ಮತ್ತು ಕೊರೊನಾ ವೈರಸ್ ಪಿಡುಗಿನ ಬಿಕ್ಕಟ್ಟು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಯಿದೆ.

English summary
Prime Minister Narendra Modi said enhancing connectivity between India and ASEAN is a top priority for India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X