ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನ್ ಕೀ ಬಾತ್ ನಲ್ಲಿ 'ಆತ್ಮನಿರ್ಭರ್' ಮಂತ್ರ ಜಪಿಸಿದ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಜೂನ್.28: ಕೊರೊನಾವೈರಸ್ ನಿಯಂತ್ರಿಸುವುದರ ಜೊತೆಗೆ ಸಂಕಷ್ಟದ ಸಂದರ್ಭದಲ್ಲಿ ನಾವು ಅಭಿವೃದ್ಧಿಯ ಜೊತೆಗೆ ಹೆಜ್ಜೆ ಇಡಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಪ್ರಜೆಗಳಿಗೆ ಕರೆ ನೀಡಿದ್ದಾರೆ.

ಭಾನುವಾರ 66ನೇ ಸಂಚಿಕೆಯ ಮನ್-ಕೀ-ಬಾತ್ ರೇಡಿಯೋ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದರು. ಹಲವಾರು ಜನರು 2020ನೇ ವರ್ಷವು ಶುಭವಾಗಿಲ್ಲ ಎನ್ನುತ್ತಿದ್ದಾರೆ. ಇದೆಲ್ಲಾ ಯಾವಾಗ ಮುಗಿಯುತ್ತದೆ ಎಂದು ಕೇಳುತ್ತಿದ್ದಾರೆ. ಫೋನ್‌ನಲ್ಲಿ ಮಾತನಾಡುವಾಗಲೂ ಇದನ್ನೇ ಪ್ರಶ್ನೆ ಮಾಡುತ್ತಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಪ್ರಜೆಗಳ ಸ್ಪಂದನೆಗೆ ಪ್ರಧಾನಿ ವಂದನೆಕೊರೊನಾ ವೈರಸ್ ವಿರುದ್ಧ ಪ್ರಜೆಗಳ ಸ್ಪಂದನೆಗೆ ಪ್ರಧಾನಿ ವಂದನೆ

6 ತಿಂಗಳ ಹಿಂದೆ ಈ ವರ್ಷದ ಬಗ್ಗೆ ಯಾವುದೇ ಸಂಕಟ ಇರಲಿಲ್ಲ. ನೆರೆಯ ರಾಷ್ಟ್ರದಿಂದಾಗಿ ನಮ್ಮ ರಾಷ್ಟ್ರಕ್ಕೆ ಸಂಕಷ್ಟ ಎದುರಾಯಿತು. ಇಂತಹ ಸಮಯದಲ್ಲಿ ದೇಶ ಒಂದಾಗಿದೆ. ಗಡಿಯಲ್ಲಿ ಸೈನಿಕರು ದೇಶದ ರಕ್ಷಣೆಗೆ ನಿಂತಿದ್ದಾರೆ. ಕೆಲವು ಯೋಧರು ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ. ಅವರಿಗೆ ನಾವು ನಮನ ಸಲ್ಲಿಸುತ್ತೇವೆ ಎಂದು ಮೋದಿ ಹೇಳಿದರು.

Live Updates: ಭಾರತ ಲಾಕ್ ಡೌನ್ ನಿಂದ ಹೊರ ಬಂದಿದೆ; ಮೋದಿ

ಆತ್ಮನಿರ್ಭರ್ ಬಗ್ಗೆ ಉಲ್ಲೇಖಿಸಿದ ಮೋದಿ:

ಆತ್ಮ ನಿರ್ಭರವೇ ಭಾರತದ ಗಡಿಯಲ್ಲಿರುವ ಸೈನಿಕರಿಗೆ ನಾವು ಕೊಡುವ ಗೌರವವಾಗಿದೆ. ಸ್ಥಳೀಯ ಉತ್ಪನ್ನಗಳನ್ನು ನಾವು ಖರೀದಿಸಬೇಕು. ಅವುಗಳನ್ನು ಬಳಸಬೇಕು. ಜನರ ಸಹಕಾರವಿಲ್ಲದೇ ಯಾವುದೂ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ದೇಶದ 130 ಕೋಟಿ ಜನರ ಮೇಲೆ ನನಗೆ ನಂಬಿಕೆ ಇದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಸ್ನೇಹ ಬೆಳೆಸುವುದೂ ಗೊತ್ತು, ಪ್ರತೀಕಾರ ತೀರಿಸಿಕೊಳ್ಳುವುದೂ ಗೊತ್ತು"

ಭಾರತ-ಚೀನಾ ಗಡಿಯಲ್ಲಿ ಗಾಲ್ವಾನ್ ಕಣಿವೆ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೆರೆರಾಷ್ಟ್ರ ಚೀನಾಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಭಾರತೀಯರಿಗೆ ಸ್ನೇಹ ಸಂಬಂಧವನ್ನು ಬೆಳೆಸುವುದೂ ಗೊತ್ತಿದೆ. ಕಾಲ್ಕೆರೆದು ನಿಂತರೆ ಪ್ರತೀಕಾರ ತೀರಿಸಿಕೊಳ್ಳುವುದು ಹೇಗೆ ಎನ್ನವುದೂ ಗೊತ್ತಿದೆ ಎನ್ನುವುದರ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಭಾರತೀಯರಿಗೆ ಪ್ರಧಾನಮಂತ್ರಿ 'ಆತ್ಮನಿರ್ಭರ್' ಸಂದೇಶ

ಭಾರತೀಯರಿಗೆ ಪ್ರಧಾನಮಂತ್ರಿ 'ಆತ್ಮನಿರ್ಭರ್' ಸಂದೇಶ

ಆತ್ಮ ನಿರ್ಭರವೇ ಭಾರತದ ಗಡಿಯಲ್ಲಿರುವ ಸೈನಿಕರಿಗೆ ನಾವು ಕೊಡುವ ಗೌರವವಾಗಿದೆ. ಸ್ಥಳೀಯ ಉತ್ಪನ್ನಗಳನ್ನು ನಾವು ಖರೀದಿಸಬೇಕು. ಅವುಗಳನ್ನು ಬಳಸಬೇಕು. ಜನರ ಸಹಕಾರವಿಲ್ಲದೇ ಯಾವುದೂ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ದೇಶದ 130 ಕೋಟಿ ಜನರ ಮೇಲೆ ನನಗೆ ನಂಬಿಕೆ ಇದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿ

ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿ

ಕೊರೊನಾವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಲಕ್ಷ್ಯ ವಹಿಸಬೇಕು. ಪ್ರತಿಯೊಬ್ಬರು ಮಾಸ್ಕ್ ಗಳನ್ನು ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ದೇಶವು ಲಾಕ್ ಡೌನ್ ನಿಂದ ಅನ್ ಲಾಕ್ ಕಡೆಗೆ ಹೊರಳುತ್ತಿದೆ. ಕೊರೊನಾವೈರಸ್ ನಿಯಂತ್ರಿಸುವುದರ ಜೊತೆಗೆ ಆರ್ಥಿಕತೆಯ ಅಭಿವೃದ್ಧಿಯ ಕಡೆಗೂ ಗಮನ ಹರಿಸಬೇಕಿದೆ. ಜನರು ಯಾವುದೇ ನಿಯಮವನ್ನು ಪಾಲನೆ ಮಾಡದಿದ್ದರೆ ನಮ್ಮ ಅಕ್ಕಪಕ್ಕದವರಿಗೆ ತೊಂದರೆ ಆಗುತ್ತದೆ. ಕೊರೊನಾವನ್ನು ಯಾರೂ ನಿರ್ಲಕ್ಷಿಸಬಾರದು ಎಂದು ಮೋದಿ ಕರೆ ನೀಡಿದ್ದಾರೆ.

ಸಾಂಪ್ರದಾಯಿಕ ಆಟಕ್ಕೆ ಒತ್ತು ನೀಡುವಂತೆ ಪ್ರಧಾನಿ ಕರೆ

ಸಾಂಪ್ರದಾಯಿಕ ಆಟಕ್ಕೆ ಒತ್ತು ನೀಡುವಂತೆ ಪ್ರಧಾನಿ ಕರೆ

ಲಾಕ್ ಡೌನ್ ಅವಧಿಯಲ್ಲಿ ಹಲವಾರು ಸಂಪ್ರದಾಯಿಕ ಕ್ರೀಡೆಗಳಿಗೆ ಜೀವ ಬಂದಿದೆ. ಅವುಗಳಲ್ಲಿ ಕರ್ನಾಟಕದ ಅಳಿಗುಳಿ ಮಣೆಯೂ ಒಂದಾಗಿದೆ. ಹಿರಿಯರು ಸಾಂಪ್ರದಾಯಿಕ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಇದೀಗ ಆನ್‌ಲೈನ್ ಶಿಕ್ಷಣಕ್ಕೆ ಒತ್ತು ಬಂದಿದೆ. ಆನ್‌ಲೈನ್ ಆಟಗಳನ್ನು ಬಿಟ್ಟು, ಸಾಂಪ್ರದಾಯಿಕ ಆಟಗಳನ್ನು ಆಡುವ ಕಾಲ ಇದಾಗಿದೆ. ಮಕ್ಕಳು ಮೊಬೈಲ್ ತೆಗೆದುಕೊಂಡು ಅಜ್ಜಿ, ತಾತನ ಸಂದರ್ಶನ ಮಾಡಿ. ಹಿರಿಯರ ಬಾಲ್ಯದ ನೆನೆಪನ್ನು ಮೆಲುಕು ಹಾಕಿಸಿ. ಇದು ನಿಮಗೆ ಜೀವನ ಅನುಭವ ನೀಡುವ ಜೊತೆಗೆ ಒಂದು ದೊಡ್ಡ ಉತ್ತಮ ವಿಡಿಯೋ ಸಂಗ್ರಹವಾಗಲಿದೆ.

English summary
Prime Minister Narendra Modi's Speech At Man Ki Baat Addressing The Nation: Speech Highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X