ಪ್ರಧಾನಿ ಮೋದಿ ಅವರ 'ರಾಖಿ' ಸೋದರಿ ಇನ್ನಿಲ್ಲ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 11: ಪ್ರಧಾನಿ ನರೇಂದ್ರ ಮೋದಿ ಅವರ ರಾಖಿ ಸಹೋದರಿ 104 ವರ್ಷದ ಶರ್ಬತಿ ದೇವಿ ಅವರು ಶನಿವಾರದಂದು ಜಾರ್ಖಂಡ್‌‌ನ ಧನ್ಬಾದ್‌‌ನಲ್ಲಿ ನಿಧನರಾಗಿದ್ದಾರೆ. ಭಾನುವಾರದಂದು ಅವರ ಅಂತ್ಯಕ್ರಿಯೆ ನೆರವೇರಲಿದೆ.

ದೆಹಲಿಯ ಲೋಕ್‌ ಕಲ್ಯಾಣ್‌ ಮಾರ್ಗ್‌ನಲ್ಲಿರುವ ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸದಲ್ಲಿ ಕಳೆದ ವರ್ಷ ರಾಖಿ ಹಬ್ಬದ ಸಂಭ್ರಮ ಕಳೆಕಟ್ಟಿತ್ತು.

PM Narendra Modi's Rakhi Sister Sharbati Devi no more

ಶರ್ಬತಿ ದೇವಿ ಅವರು ಪ್ರಧಾನಿ ಅವರನ್ನು ಭೇಟಿ ಮಾಡುವ ಮೂಲಕ ಸುದ್ದಿಯಾಗಿದ್ದರು. ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಬಂದಿದ್ದ ಶರ್ಬತಿ ದೇವಿ ಅವರು ಮೋದಿ ಅವರಿಗೆ ರಾಖಿ ಕಟ್ಟಿದ್ದರು.

PM Narendra Modi's Rakhi Sister Sharbati Devi no more

ತನ್ನ ಕಳೆದುಕೊಂಡ ಸಹೋದರನನ್ನು ಮೋದಿ ಅವರಲ್ಲಿ ಕಂಡಿದ್ದ ಶರ್ಬತಿ ದೇವಿ ಅವರ ಅಪೇಕ್ಷೆಯನ್ನು ಪ್ರಧಾನಿ ಮೋದಿ ತೀರಿಸಿದ್ದರು. ಅವರೊಂದಿಗೆ ರಾಖಿ ಹಬ್ಬ ಆಚರಿಸುವ ಬಯಕೆ ಈಡೇರಿತ್ತು.ಶರ್ಬತಿ ಅವರ ಆಸೆ ಈಡೇರಿಸುವಂತೆ, ಪತ್ರದ ಮೂಲಕ ಪ್ರಧಾನಿಗಳನ್ನು ಕೋರಲಾಗಿತ್ತು.

PM Narendra Modi's Rakhi Sister Sharbati Devi no more

ಧನರಾಜ್ ಅಗರವಾಲ್ ಎಂಬುವವರನ್ನು ಮದುವೆಯಾಗಿದ್ದ ಶರ್ಬತಿ ಅವರಿಗೆ 9 ಜನ ಮಕ್ಕಳಿದ್ದರು. ಆದರೆ, ಈಗ ಪತಿ ಸೇರಿದಂತೆ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದರು. ನಾಲ್ವರು ಮಕ್ಕಳು, ಮೂವರು ಪುತ್ರಿರನ್ನು ಅಗಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sharbati Devi(104), Prime Minister Narendra Modi's rakhi sister, passed away in Dhanbad on Saturday. Her funeral will take place on 11th March, Sunday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ