ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ 36ನೇ ಮನ್ ಕಿ ಬಾತ್ ಕೇಳಿ

By Mahesh
|
Google Oneindia Kannada News

ನವದೆಹಲಿ, ಸೆ. 24: ಪ್ರಧಾನಿ ನರೇಂದ್ರ್ ಮೋದಿ ಅವರು ತಮ್ಮ 36ನೇ ಮನ್ ಕಿ ಬಾತ್ ರೇಡಿಯೋ ಭಾಷಣ ಮಾಲಿಕೆಯನ್ನು ಭಾನುವಾರ ನಡೆಸಿಕೊಟ್ಟಿದ್ದಾರೆ.

ಈ ಮನ್ ಕಿ ಬಾತ್ ಕಾರ್ಯಕ್ರಮ ಅಕ್ಟೋಬರ್ 3, 2014ರಿಂದ ಜನಪ್ರಿಯತೆ ಪಡೆದುಕೊಂಡಿರುವ ಭಾಷಣ ಸರಣಿಯಾಗಿದೆ. ಸುಮಾರು 10 ಕೋಟಿ ರು ಗೂ ಅಧಿಕ ಆದಾಯವನ್ನು ಆಕಾಶವಾಣಿಗೆ ತಂದು ಕೊಟ್ಟಿದೆ. ಈ ಬಾರಿ ಭಾಷಣದಲ್ಲಿ ಗಾದಿ ಮತ್ತು ಗ್ರಾಮೋದ್ಯೋಗ, ಸ್ವಚ್ಛತೆ ಬಗ್ಗೆ ಆರಂಭದಲ್ಲೇ ಮಾತನಾಡಿದ್ದಾರೆ.

PM Narendra Modi's 36th Edition Of Mann Ki Baat Highlights

ಲೈವ್ ವಿಡಿಯೋ ನೋಡಿ:

ಮನದ ಮಾತು ಒಂದು ರೀತಿಯ ಭಾರತದ ಸಕಾರಾತ್ಮ ಶಕ್ತಿ, ದೇಶದ ಮೂಲೆಮೂಲೆಯಲ್ಲಿನ ಜನರಲ್ಲಿ ಹುದುಗಿದ ಭಾವನೆಗಳು, ಇಚ್ಛೆಗಳು, ಅಪೇಕ್ಷೆಗಳು, ಕೆಲವೊಮ್ಮ ದೂರುಗಳಾಗಿವೆ. ಜನರ ಭಾವನೆಗಳೊಂದಿಗೆ ಬೆರೆಯಲು ಅದ್ಭುತ ಅವಕಾಶ. ಮನದ ಮಾತಿನಿಂದ ನನಗೆ ಅದ್ಭುತ ಅವಕಾಶ ಒದಗಿದೆ. ನಾನೆಂದಿಗೂ ನನ್ನ ಮನದ ಮಾತನ್ನ ಇಲ್ಲಿ ಹೇಳಿಲ್ಲ ಎಂದರು.

ದೇಶದ ಮೂಲೆ ಮೂಲೆಗಳಿಂದ ಜನರು ಕಳುಹಿಸಿದ ಮಾತುಗಳು, ಅವರ ಮಾತುಗಳಲ್ಲಿ ಕೆಲವನ್ನ ನಾನು ನಿಮಗೆ ಹೇಳುತ್ತಿದ್ದೇನೆ. ಆದರೆ ನನಗೆ ಇ-ಮೇಲ್​​, ದೂರವಾಣಿ, ಮೈಗೌನಲ್ಲಿ, ಮೋದಿ ಆಪ್​​ನಲ್ಲಿ ಸಾಕಷ್ಟು ಮಾತುಗಳು ತಲುಪುತ್ತವೆ ಎಂದರು.

ಈ 3 ವರ್ಷಗಳ ನಂತರ ಸಾಮಾಜಿಕ ವಿಜ್ಞಾನಿಗಳು, ವಿಶ್ವವಿದ್ಯಾನಿಲಯಗಳು, ಸಂಶೋಧನಾ ವಿದ್ವಾಂಸರು, ಮಾಧ್ಯಮ ತಜ್ಞರು ಇದರ ವಿಶ್ಲೇಷಣೆ ಮಾಡುತ್ತಾರೆ. ಪ್ಲಸ್, ಮೈನಸ್ ಪ್ರತಿಯೊಂದು ವಿಷಯಗಳನ್ನು ಬೆಳಕಿಗೆ ತರುತ್ತಾರೆ. ಇದು ಭವಿಷ್ಯದಲ್ಲಿ ಮನದ ಮಾತಿಗೆ ಬಹಳ ಉಪಯುಕ್ತ, ಇದರಿಂದ ಒಂದು ಹೊಸ ಚೈತನ್ಯ, ಹೊಸಶಕ್ತಿ ದೊರೆಯುತ್ತೆ ಎಂಬ ವಿಶ್ವಾಸ ನನಗಿದೆ.

ಈ ಬಾರಿ ದೀಪಾವಳಿಗೆ ಖಾದಿ ಖರೀದಿಸೋಣ, ಬಡವನ ಮನೆಯಲ್ಲೂ ದೀಪಾವಳಿಯ ದೀಪ ಬೆಳಗಿಸೋಣ, ಇದರಿಂದ ಬಡ ಜನತೆಗೆ ಹೊಸ ಶಕ್ತಿ ದೊರೆಯುತ್ತದೆ. ಹೀಗಾಗಿ ನಾವು ಅದನ್ನು ಮಾಡಲೇಬೇಕಾಗಿದೆ.

English summary
Prime Minister Narendra Modi delivers his Mann ki Baat to the entire nation in the 36th edition of his monthly radio address
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X