ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಿದ ನರೇಂದ್ರ ಮೋದಿ

Subscribe to Oneindia Kannada

ನವದೆಹಲಿ, ಡಿಸೆಂಬರ್. 06: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದ್ದಾರೆ. ಅಂಬೇಡ್ಕರ್ ಅವರ 125ನೆ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ಟ್ವೀಟ್ ಮಾಡಿ ಗೌರವ ಸೂಚಿಸಿದ್ದಾರೆ.

ಇದೇ ವೇಳೆ ಮೋದಿ 10 ರು. ಹಾಗೂ 125 ರು. ಮುಖ ಬೆಲೆಯ ನಾಣ್ಯ ಬಿಡುಗಡೆ ಬಿಡುಗಡೆ ಮಾಡಿದರು. ಈ ನಾಣ್ಯಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ನೆನಪಿನಲ್ಲಿ ಬಿಡುಗಡೆ ಮಾಡಲಾಗಿದೆ.[ದೇಶಾದ್ಯಂತ ಸಂವಿಧಾನ ಶಿಲ್ಪಿಗೆ ನಮನ]

modi

ಅಂಬೇಡ್ಕರ್ ಎಂದಿಗೂ ಜನರ ಮನಸ್ಸಿನಲ್ಲಿ ಇರುತ್ತಾರೆ. ದೇಶ ನೆನಪಿಸಿಕೊಳ್ಳಬೇಕಾದ ನಾಯಕರ ಸ್ಥಾನದಲ್ಲಿ ಮೊದಲ ಸ್ಥಾನ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹ ಅಂಬೇಡ್ಕರ್ ಅವರಿಗೆ ನಮನ ಸಲ್ಲಿಕೆ ಮಾಡಿದ್ದಾರೆ.[ಸದನದಿಂದ ನರೇಂದ್ರ ಮೋದಿ ಹೊರನಡೆದಿದ್ದು ಏಕೆ?]

ದೆಹಲಿಯ ಸಂಸತ್‌ ಭವನದ ಆವರಣದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ , ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ , ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
President Pranab Mukherjee, Vice President Hamid Ansari, Prime Minister Narendra Modi and other leaders on Sunday, Dec 6 remembered Babasaheb Bhim Rao Ambedkar on his 60th death anniversary, which is being observed as 'Mahaparinirvan Diwas'. Mukherjee, Ansari and Modi offered floral tribute at the Dalit mascot's statue in Parliament House lawns. "Remembering Dr Babasaheb Ambedkar on his Punya Tithi," Modi posted on Twitter along with a photograph showing him and the Ambedkar's statue.
Please Wait while comments are loading...