• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆರು ತಿಂಗಳ ನಂತರ ಬಾಗಿಲು ತೆರೆದ ಹರಿದ್ವಾರ್ ಗೆ ಮೋದಿ ಭೇಟಿ

|
Google Oneindia Kannada News

ಹರಿದ್ವಾರ್, ಮೇ 3: ಪ್ರಧಾನಿ ನರೇಂದ್ರ ಮೋದಿ ಬುಧವಾರ ಬೆಳಗ್ಗೆ ಉತ್ತರಾಖಂಡದ ಕೇದಾರನಾಥಕ್ಕೆ ಭೇಟಿ ನೀಡಿದರು. ಚಳಿಗಾಲದ ಕಾರಣಕ್ಕೆ ಆರು ತಿಂಗಳು ಮುಚ್ಚಿದ್ದ ಈ ಕ್ಷೇತ್ರವು ಬುಧವಾರವೇ ಬಾಗಿಲು ತೆರೆಯಿತು. ಪ್ರಧಾನಿ ಮೋದಿ ಬೆಳಗ್ಗೆ 9.30ರ ಸುಮಾರಿಗೆ ಇಲ್ಲಿಗೆ ಬಂದರು. ಹಿಮಾಲಯದ ಚಾರ್ ಧಾಮ್ ಅನಿಸಿಕೊಂಡಿರುವ ನಾಲ್ಕು ಪುಣ್ಯ ಕ್ಷೇತ್ರಗಳಲ್ಲಿ ಕೇದಾರ್ ನಾಥ್ ಕೂಡ ಒಂದು.

ಕೇದಾರ್ ನಾಥ್ ಗೆ ಬಂದ ಮೋದಿ ಪ್ರಾರ್ಥನೆ ಸಲ್ಲಿಸಿದರು. ಚಾರ್ ಧಾಮ್ ಯಾತ್ರೆಗೆ ಆರಂಭಕ್ಕೂ ಮುನ್ನ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬುಧವಾರ ಮಧ್ಯಾಹ್ನ ಹರಿದ್ವಾರದಲ್ಲಿ ರಾಮ್ ದೇವ್ ಪತಂಜಲಿ ಯೋಗ ಪೀಠದ ಉದ್ಘಾಟನೆ ಮಾಡುವ ಮೋದಿ, ಅಲ್ಲಿಂದ ಮಧ್ಯಾಹ್ನ ದೆಹಲಿಗೆ ಹಿಂತಿರುಗುತ್ತಾರೆ.[2 ತಲೆಗಳ ಬದಲಿಗೆ ಎಷ್ಟು ತಲೆ ಉರುಳಿಸುತ್ತೀರಿ? ಮೋದಿಗೆ ಕಪಿಲ್ ಪ್ರಶ್ನೆ]

ಪ್ರಧಾನಿ ಮೋದಿ ಕ್ಷೇತ್ರಕ್ಕೆ ಭೇಟಿ ನೀಡುವುದರೊಂದಿಗೆ ಈ ವರ್ಷದ ಉತ್ತರಾಖಂಡದ ಯಾತ್ರೆ ಅದ್ಭುತವಾಗಿ ಅರಂಭವಾಗಿದೆ. ಮೋದಿ ನಂತರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಎರಡು ದಿನದ ಭೇಟಿಗಾಗಿ ಉತ್ತರಾಖಂಡಕ್ಕೆ ಬರಲಿದ್ದು, ಮೇ 6ರಂದು ಬಾಗಿಲು ತೆರೆಯುವ ಬದರಿನಾಥ್ ಕ್ಷೇತ್ರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಿದ್ದಾರೆ.

English summary
Prime Minister Narendra Modi Wednesday morning visited the Kedarnath shrine in Uttarakhand, which opened after a six month winter break.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X