ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಥುರಾ: ಮೋದಿಯಿಂದ ಶ್ರೀಕೃಷ್ಣನ 'ಕರ್ಮಯೋಗ' ಪಾಠ

By Mahesh
|
Google Oneindia Kannada News

ಮಥುರಾ, ಮೇ.25: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ವರ್ಷದ ಸಂಭ್ರಮಾಚರಣೆ ಆರಂಭಗೊಂಡಿದೆ. ಮೊದಲ ಸಮಾವೇಶದಲ್ಲೇ ಮೋದಿ ಅವರು ಶ್ರೀಕೃಷ್ಣನ 'ಕರ್ಮ ಯೋಗ' ದ ಬೋಧನೆ ಮಾಡುವ ಮೂಲಕ ಇನ್ನಷ್ಟು ಕೆಲಸ ಬಾಕಿ ಇದೆ ಎಂದು ಸುಳಿವು ನೀಡಿದ್ದಾರೆ.

ಸರ್ಕಾರ ಬಡವರ ವಿರೋಧಿ, ರೈತ ವಿರೋಧಿ ಎಂಬ ವಿಪಕ್ಷಗಳ ಆಪಾದನೆಗೆ ಮೋದಿ ತಕ್ಕ ಉತ್ತರ ನೀಡಿದರು. 'ಜನ ಕಲ್ಯಾಣ್ ಪರ್ವ' ಮೊದಲ ಸಮಾವೇಶದಲ್ಲೇ ಬಹುನಿರೀಕ್ಷಿತ 'One Rank, One Pension' ಯೋಜನೆ ಘೋಷಿಸುವ ನಿರೀಕ್ಷೆ ಹುಸಿಯಾಗಿದೆ.

ಸರ್ಕಾರದ ಮೊದಲ ವರ್ಷಾಚರಣೆಗೆ ಬಿಜೆಪಿ ಈಗಾಗಲೇ "ವರ್ಷ್‌ ಏಕ್‌, ಕಾಮ್‌ ಅನೇಕ್‌' (ವರ್ಷ ಒಂದು, ಕೆಲಸ ಹಲವು) ಮತ್ತು "ಮೋದಿ ಸರ್ಕಾರ್‌, ಕಾಮ್‌ ಲಗಾತಾರ್‌' (ಮೋದಿ ಸರ್ಕಾರ, ಕಾರ್ಯ ನಿರಂತರ) ಎಂಬ ಘೋಷವಾಕ್ಯಗಳನ್ನು ಬಿಜೆಪಿ ಸಿದ್ಧಪಡಿಸಿದೆ.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಅವರ ನಾಗ್ಲಾ ಚಂದ್ರಭಾನ್ ಗ್ರಾಮದಲ್ಲಿ ಅಪಾರ ಜನಸಮೂಹದ ಮುಂದೆ ಮಾಡಿದ ಭಾಷಣದ ಲೈವ್ ವಿಡಿಯೋ ಇಲ್ಲಿ ನೋಡಿರುತ್ತೀರಿ. ಈಗ ಭಾಷಣದ ಪ್ರಮುಖ ಅಂಶಗಳು ನಿಮಗಾಗಿ ಇಲ್ಲಿದೆ...

ಮಥುರಾ ನಂತರ ಇನ್ನೂ 200 ಸಮಾವೇಶ

ಮಥುರಾ ನಂತರ ಇನ್ನೂ 200 ಸಮಾವೇಶ

ಮಥುರಾದಿಂದ ಅಧಿಕೃತವಾಗಿ ಚಾಲನೆ ಸಿಗಲಿರುವ ಜನ ಕಲ್ಯಾಣ ಪರ್ವ ಮುಂದೆ 200 ಸಮಾವೇಶ, 200 ಸುದ್ದಿಗೋಷ್ಠಿ, 5,000 ಸಾರ್ವಜನಿಕ ಸಭೆ, 500 ಪ್ರದರ್ಶನ ಮೇಳಗಳನ್ನು ಕಾಣಲಿದೆ.

ಮಥುರಾ ಸಮಾವೇಶದಲ್ಲಿ ಮೋದಿ

ಮಥುರಾ ಸಮಾವೇಶದಲ್ಲಿ ಮೋದಿ ಅವರ ಆಗಮನದ ಬಗ್ಗೆ ಟ್ವೀಟ್.

ಇಲ್ಲಿನ ಕಣಕಣದಲ್ಲೂ ಕೃಷ್ಣನಿದ್ದಾನೆ :ಮೋದಿ

ಈ ಭೂಮಿಯ ಕಣ ಕಣದಲ್ಲೂ ಶ್ರೀಕೃಷ್ಣನನ್ನು ಕಾಣಬಹುದು. ಕರ್ಮ ಯೋಗವನ್ನು ಪಾಲಿಸುವಂತೆ ಕೃಷ್ಣ ನೀಡಿದ ಬೋಧನೆ ನಾವು ಪಾಲಿಸೋಣ.

 'ಪ್ರಧಾನ ಮಂತ್ರಿ' ಅಲ್ಲ 'ಪ್ರಧಾನ ಸೇವಕ'

'ಪ್ರಧಾನ ಮಂತ್ರಿ' ಅಲ್ಲ 'ಪ್ರಧಾನ ಸೇವಕ'

ಬೇಡದೆ ಇರುವ ಕಾನೂನುಗಳನ್ನು ತೆಗೆದು ಹಾಕುವ ಕಾರ್ಯ ಆರಂಭವಾಗಿದೆ. ಸುಮಾರು 1300ಕ್ಕೂ ಅಧಿಕ ಕಾಯ್ದೆಗಳನ್ನು ಮುಂದಿನ ದಿನಗಳನ್ನು ತೆಗೆದುಹಾಕಲಾಗುವುದು. ನಾನು ನಿಮ್ಮ 'ಪ್ರಧಾನ ಮಂತ್ರಿ' ಅಲ್ಲ 'ಪ್ರಧಾನ ಸೇವಕ'

ಹಗರಣ ರಹಿತ ಒಂದು ವರ್ಷ ನಿಮಗೆ ನೀಡಿದ್ದೇನೆ

ಹಗರಣ ರಹಿತ ಒಂದು ವರ್ಷ ನಿಮಗೆ ನೀಡಿದ್ದೇನೆ

ಕಳೆದ ಒಂದು ವರ್ಷದಲ್ಲಿ ಯಾವುದೇ ಒಬ್ಬ ರಾಜಕಾರಣಿ ಅಥವಾ ಅವರ ಕುಟುಂಬದವರು ಬಂಧನಕ್ಕೊಳಪಟ್ಟಿದ್ದಾರೆಯೇ? ಯಾವುದೇ ಹಗರಣದಲ್ಲಿ ಜನಪ್ರತಿನಿಧಿಗಳ ಹೆಸರು ಕಾಣಿಸಿಕೊಂಡಿದೆಯೇ? ಇಲ್ಲ. ಹಗರಣ ಮುಕ್ತ ಸರ್ಕಾರ ನೀಡುವ ನಮ್ಮ ಮಾತಿಗೆ ಬದ್ಧರಾಗಿದ್ದೇವೆ.

ಗಂಗಾ, ಯಮುನಾ ನನ್ನ ತಾಯಿ ಇದ್ದಂತೆ

ಗಂಗಾ, ಯಮುನಾ ನನ್ನ ತಾಯಿ ಇದ್ದಂತೆ

ಗಂಗಾ, ಯಮುನಾ ನನ್ನ ತಾಯಿ ಇದ್ದಂತೆ ನಿಮಗೂ ಆಕೆ ತಾಯಿ ಅಲ್ಲವೇ. ಸ್ವಚ್ಛತೆ ನಮ್ಮ ಕರ್ತವ್ಯವಲ್ಲವೇ, ಜನರ ನೆರವಿದ್ದರೆ ದೇಶದ ಎಲ್ಲಾ ನದಿ ಜಲ ಮೂಲಗಳ ಸ್ವಚ್ಛತೆ ಸಾಧ್ಯ.

ನಾನು ವಿರಾಮ ಬಯಸುತ್ತಿಲ್ಲ

ನಾನು ವಿರಾಮ ಬಯಸುತ್ತಿಲ್ಲ

ನಾನು ವಿರಾಮ ಬಯಸುತ್ತಿಲ್ಲ, ಇದು ಸಂಭ್ರಮಾಚರಣೆ ಸಮಯವಲ್ಲ. ಜನರ ಮುಂದೆ ನಮ್ಮ ರಿಪೋರ್ಟ್ ಕಾರ್ಡ್ ಇಡುವ ಸಮಯ. ನಾವು ಈ ಕೆಲಸ ಮಾಡಬೇಕಿದೆ.

ಬಡತನ ನಿರ್ಮೂಲನೆ ನಮ್ಮ ಗುರಿ

ಬಡತನ ನಿರ್ಮೂಲನೆ ನಮ್ಮ ಗುರಿ ಇದಕ್ಕಾಗಿ ನಾವು ಬೀಜ ಬಿತ್ತಿದ್ದೇವೆ 2022ರ ಹೊತ್ತಿಗೆ ಫಲ ನೀಡಲಿದೆ. ಭಾರತದ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ನೂರ್ಮಡಿಯಾಗಲಿದೆ.

English summary
As Modi government completes 365 days of governance, since it came to power, following a landslide victory in Lok Sabha election in May 2014, the Prime Minister Narendra Modi is addressed a mega rally at Mathura in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X