ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮನ್‌ ಕಿ ಬಾತ್‌: ಆರ್ಥಿಕತೆ ಪುನರಾರಂಭ ಆದರೆ ಎಚ್ಚರವಿರಲಿ

|
Google Oneindia Kannada News

ನವದೆಹಲಿ, ಮೇ 31: ಲಾಕ್‌ಡೌನ್ ಸಡಿಲಿಕೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮಾತನಾಡಿದ್ದಾರೆ. ಮನ್‌ ಕಿ ಬಾತ್ ಮೂಲಕ ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

Recommended Video

ಕೊರೊನ ಸಂಟಷ್ಟದ ನಡುವೆ ಭಾರತಕ್ಕೆ ಒಂದು ಸಿಹಿ ಸುದ್ದಿ | Oneindia Kannada

ಆರ್ಥಿಕತೆ ದೊಡ್ಡ ಮಟ್ಟದಲ್ಲಿ ಪುನರಾರಂಭಗೊಂಡಿದೆ ಆದರೆ ಎಚ್ಚರಿಕೆಯಿಂದಿರಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಪ್ರಜೆಗಳ ಸ್ಪಂದನೆಗೆ ಪ್ರಧಾನಿ ವಂದನೆಕೊರೊನಾ ವೈರಸ್ ವಿರುದ್ಧ ಪ್ರಜೆಗಳ ಸ್ಪಂದನೆಗೆ ಪ್ರಧಾನಿ ವಂದನೆ

'ಕೆಲವು ದಿನಗಳ ಹಿಂದೆ ಮನ್‌ಕಿ ಬಾತ್ ಸಂದರ್ಭದಲ್ಲಿ ಯಾವುದೇ ವಾಹನಗಳ ಓಡಾಟಕ್ಕೆ ಅವಕಾಶವಿರಲಿಲ್ಲ. ಆದರೆ ಈಗ ಬಸ್‌ಗಳು ಓಡಾಡುತ್ತಿವೆ,ರೈಲುಗಳ ಸಂಚಾರವೂ ಆರಂಭವಾಗಿದೆ. ದೇಶೀಯ ವಿಮಾನಗಳ ಸೇವೆಯೂ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಆರ್ಥಿಕತೆ ಆರಂಭವಾಗಿದೆ, ಜನರ ಓಡಾಟವೂ ಶುರುವಾಗಿದೆ ಆದರೆ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ, ಪದೇ ಪದೆ ಕೈ ತೊಳೆದುಕೊಳ್ಳಿ, ಮಾಸ್ಕ್‌ಗಳನ್ನು ಧರಿಸಿ, ಸಾಮಾಜಿಕ ಅಂತರದ ಬಗ್ಗೆ ಎಚ್ಚರವಿರಲಿ ಎಂದರು.

ಬೇರೆ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಜನಸಂಖ್ಯೆ ಹೆಚ್ಚು

ಬೇರೆ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಜನಸಂಖ್ಯೆ ಹೆಚ್ಚು

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಜನಸಂಖ್ಯೆ ಹೆಚ್ಚಿದೆ. ಆದರೆ ಕೊರೊನಾವೈರಸ್ ದಾಳಿ ಆರಂಭವಾದ ತಕ್ಷಣವೇ ತೆಗೆದುಕೊಂಡ ನಿರ್ಧಾರದಿಂದ ಸಾವಿನ ಸಂಖ್ಯೆ ಕಡಿಮೆಯಿದೆ. ಆದರೆ ಕೊರೊನಾ ವಿರುದ್ಧದ ಹೋರಾಟ ನಿರಂತರವಾಗಿರುತ್ತದೆ ಎಂದರು.

ಸೇವಾ ಮನೋಭಾವ ಒಳ್ಳೆಯದು

ಸೇವಾ ಮನೋಭಾವ ಒಳ್ಳೆಯದು

ಸಾಮೂಹಿಕ ಶಕ್ತಿಯಿಂದಲೇ ನಾವು ನಮ್ಮ ಜನರನ್ನು ಕಾಪಾಡಿದ್ದೇವೆ, ದೇಶದ ಜನರ ಸಂಕಲ್ಪದಿಂದ ಈ ಮಹಾಮಾರಿಯನ್ನು ದೂರವಿಡುವ ಪ್ರಯತ್ನ ನಡೆಯುತ್ತಿದೆ. ತ್ಯಾಗ ಎನ್ನುವುದು ಕೇವಲ ಆದರ್ಶವಲ್ಲ ಇದು ಭಾರತದ ಜೀವನ ಪದ್ಧತಿ. ಯಾರು ಸೇವಾ ಮನೋಭಾವ ಹೊಂದಿರುತ್ತಾರೋ ಅಂತವರು ಯಾವ ತೊದರೆಗೂ ಹೆದರದೆ ಮುನ್ನುಗ್ಗುತ್ತಾರೆ, ಸೇವೆಯಲ್ಲಿಯೇ ಪ್ರತಿಫಲ ಕಾಣುತ್ತಾರೆ ಎಂದು ಹೇಳಿದರು.

ವೈದ್ಯರು, ನರ್ಸ್‌ಗಳ ಜೊತೆಗೆ ಬಸವರು ಕೂಡ ಕೈ ಜೋಡಿಸಿದ್ದಾರೆ. ತಮಿಳುನಾಡಿನ ಸೆಲೂನ್ ಹೊಂದಿರುವ ಸಿ ಮೋಹನ್ ಅವರು ತನ್ನ ಮಗಳ ಮಕ್ಕಳಿಗೆ ಎಂದು ಕೂಡಿಟ್ಟಿದ್ದ 5 ಲಕ್ಷ ಹಣವನ್ನು ಜನರ ಸೇವೆಗಾಗಿ ವಿನಿಯೋಗಿಸಿದ್ದಾರೆ. ಅಗರ್ತಲಾ, ಹಾಗೂ ಪಠಾಣ್‌ಕೋಟ್‌ನಲ್ಲಿಯೂ ತಮಗೆ ಊಟಕ್ಕೆ ಇಲ್ಲದಿದ್ದರೂ ಮಾಸ್ಕ್‌ಗಳನ್ನು ತಯಾರಿಸಿ ಹಂಚಿದ್ದಾರೆ. ಇನ್ನು ಕೆಲವರು ಜನರಿಗೆ ಊಟ ನೀಡಿ ಸಹಕರಿಸಿದ್ದಾರೆ.
ಸಂಶೋಧನೆ ಮುಖ್ಯ

ಸಂಶೋಧನೆ ಮುಖ್ಯ

ಹಳ್ಳಿಗಳಿಂದ ಹಿಡಿದು ನಗರದವರೆಗೂ ಜನರು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸುತ್ತಿದ್ದಾರೆ. ನಾಸಿಕ್‌ನಲ್ಲಿ ರಾಜೇಂದ್ರ ಎನ್ನುವವರು ತಮ್ಮ ಹಳ್ಳಿಯನ್ನು ಕೊಒರನಾ ವೈರಸ್‌ನಿಂದ ಕಾಪಾಡಲು ಸ್ಯಾನಿಟೈಸೇಷನ್ ಯಂತ್ರವನ್ನು ತಯಾರಿಸಿದ್ದಾರೆ. ಶಿಕ್ಷಕರು ವಿಡಿಯೋಗಳ ಮೂಲಕ ಮಕ್ಕಳಿಗೆ ಕಲಿಸುವ ನೂತನ ಪ್ರಯತ್ನ ಮಾಡಿದ್ದಾರೆ. ಕೊರೊನಾವೈರಸ್ ವಿರುದ್ಧ ಲಸಿಕೆಯನ್ನು ಕಂಡು ಹಿಡಿಯುವ ಸಂಶೋಧನೆಯಲ್ಲಿ ಕೆಲವರು ತೊಡಗಿದ್ದಾರೆ. ಈ ವಿಶೇಷ ಸಂಶೋಧನೆಗಳಿಂದಲೇ ಮಹಾಮಾರಿಯಿಂದ ಗೆಲ್ಲಲು ಸಾಧ್ಯ ಎಂದು ಹೇಳಿದರು.

ಶ್ರಮಿಕ ವರ್ಗಕ್ಕೆ ಪೆಟ್ಟು

ಶ್ರಮಿಕ ವರ್ಗಕ್ಕೆ ಪೆಟ್ಟು

ಕೊರೊನಾ ಲಾಕ್‌ಡೌನ್‌ನಿಂದಾಗಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದು ಶ್ರಮಿಕ ವರ್ಗ, ಅದನ್ನು ಶಬ್ದದಲ್ಲಿ ವಿವರಿಸಲು ಸಾಧ್ಯವಿಲ್ಲ. ರೈಲ್ವೆ ಇಲಾಖೆಯು ಕೂಡ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಲು ಶ್ರಮಿಕ್ ವಿಶೇಷ ರೈಲು ವ್ಯವಸ್ಥೆ ಮಾಡಿದ್ದಾರೆ. ಅವರಿಗೆ ಆಹಾರ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಕತ್ತಲಿನಿಂದ ಬೆಳಕಿನೆಡೆಗೆ

ಕತ್ತಲಿನಿಂದ ಬೆಳಕಿನೆಡೆಗೆ

ಆತ್ಮ ನಿರ್ಭರ ಯೋಜನೆಯ ಬಗ್ಗೆ ವ್ಯಾಪಕ ಮಂಥನ ಆರಂಭವಾಗಿದೆ. ಜನರು ಕತ್ತಲೆಯಿಂದ ಬೆಳಕಿನೆಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ವೋಕಲ್ ಫಾರ್ ಲೋಕಲ್ ಎಂದು ಸ್ಥಳೀಯ ಯೋಜನೆಗಳು, ವಸ್ತುಗಳನ್ನು ಕೊಳ್ಳಲು ಮನಸ್ಸು ಮಾಡಿದ್ದಾರೆ.

ಯೋಗದಿಂದ ರೋಗ ದೂರ

ಯೋಗದಿಂದ ರೋಗ ದೂರ

ಕೊರೊನಾ ವೈರಸ್ ಸಾಮಾನ್ಯವಾಗಿ ಶ್ವಾಸಕೋಶಕ್ಕೆ ತೊಂದರೆ ನೀಡುತ್ತದೆ. ಆದರೆ ಯೋಗದಿಂದ ಉಸಿರಾಟದ ತೊಂದರೆ ದೂರವಾಗುತ್ತದೆ. ಪ್ರಾಣಾಯಾಮ, ಕಪಾಲಬಾತಿ, ಅನುಲೋಮ, ವಿಲೋಮ ಸೇರಿದಂತೆ ಹಲವು ಬಗೆಯ ಯೋಗಗಳನ್ನು ಮನೆಯಲ್ಲಿಯೇ ಮಾಡಿ, ರೋಗದಿಂದ ದೂರವಿರಿ.

ಮರುಭೂಮಿ ಮಿಡತೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ನೆರವು

ಮರುಭೂಮಿ ಮಿಡತೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ನೆರವು

ಮರುಭೂಮಿ ಮಿಡತೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ನೆರವು ನೀಡಲಾಗುವುದು, ಸಾಕಷ್ಟು ಬೆಳೆಗಳ ನಾಶವಾಗಿದೆ. ಜೂನ್ 5 ರಂದು ವಿಶ್ವ ಪರ್ಯಾವರಣ ದಿನವನ್ನಾಗಿ ಆಚರಿಸಲಾಗುತ್ತಿದೆ. ಜೀವವೈವಿಧ್ಯತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

English summary
Large Part Of Economy Has Opened Up, Time To Be More Careful PM Narendra Modi Said that on Mann Ki Baat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X