ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶ ಉದ್ದೇಶಿಸಿ ಮೋದಿ ಭಾಷಣ; ಮನ್ ಕೀ ಬಾತ್ ಮುಖ್ಯಾಂಶಗಳು

|
Google Oneindia Kannada News

ನವದೆಹಲಿ, ಫೆಬ್ರವರಿ 28: "ಮಾಘ ಮಾಸದಲ್ಲಿ ಯಾವುದೇ ನದಿಯಲ್ಲಿ ಸ್ನಾನ ಮಾಡುವುದು ಪುಣ್ಯ ಎಂದು ಭಾವಿಸಲಾಗುತ್ತದೆ. ನದಿಯೊಂದಿಗೆ ನಮ್ಮ ಜೀವನ ಸಂಪ್ರದಾಯಿಕವಾಗಿ ಬೆಸೆದುಕೊಂಡಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾನುವಾರ ಪ್ರಧಾನಿ ನರೇಂದ್ರ ಮೋದಿ 74ನೇ ಆವೃತ್ತಿಯ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.

ಮನ್ ಕೀ ಬಾತ್ ಮಾತು; ಕೋವಿಡ್ ಲಸಿಕೆ ಬಗ್ಗೆ ಮೋದಿ ವಿವರಣೆಮನ್ ಕೀ ಬಾತ್ ಮಾತು; ಕೋವಿಡ್ ಲಸಿಕೆ ಬಗ್ಗೆ ಮೋದಿ ವಿವರಣೆ

"ಈ ಬಾರಿ ಹರಿದ್ವಾರದಲ್ಲಿ ಕುಂಭ ಮೇಳ ನಡೆಯುತ್ತಿದೆ. ನದಿಗಳು ಜನರ ಜೀವನ ಮತ್ತು ವಿಕಾಸಕ್ಕೆ ಅಗತ್ಯವಾಗಿವೆ. ನಾವು ನೀರಿನ ಸಂರಕ್ಷಣೆಗೆ ಪ್ರತಿದಿನ ಕೆಲಸ ಮಾಡಬೇಕು" ಎಂದು ಮೋದಿ ಕರೆ ನೀಡಿದರು.

PM Narendra Modi Mann Ki Baat February 28 Highlights

"ಪರಿಸರವನ್ನು ಉಳಿಸುವ ಕುರಿತು ಪಶ್ಚಿಮ ಬಂಗಾಳದ ಸುಜಿತ್ ಜೀ ಅವರು ನನಗೆ ಪತ್ರ ಬರೆದಿದ್ದಾರೆ. ನದಿ, ಕೃಷಿ ಭೂಮಿ ಹೀಗೆ ವಿವಿಧ ರೀತಿಯ ನೀರನ್ನು ಹೇಗೆ ಸಂರಕ್ಷಣೆ ಮಾಡಬೇಕು" ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ನರೇಂದ್ರ ಮೋದಿ ಮನ್ ಕೀ ಬಾತ್; ಮೋದಿ ಭಾಷಣದ ಮುಖ್ಯಾಂಶಗಳುನರೇಂದ್ರ ಮೋದಿ ಮನ್ ಕೀ ಬಾತ್; ಮೋದಿ ಭಾಷಣದ ಮುಖ್ಯಾಂಶಗಳು

ಮೋದಿ ಭಾಷಣದ ಮುಖ್ಯಾಂಶಗಳು

* ಉತ್ತರಾಖಂಡ್‌ನಲ್ಲಿ ಜಗದೀಶ್ ನೀರಿನ ಮೂಲದ ಸಂರಕ್ಷಣೆಗೆ ಮಹತ್ವದ ಕಾರ್ಯವನ್ನು ಮಾಡಿದ್ದಾರೆ. ಜಗದೀಶ್ ಅವರು ಗ್ರಾಮದಲ್ಲಿ ನೂರಾರು ಮರಗಳನ್ನು ನೆಟ್ಟರು. ಈಗ ನೀರಿನ ಮೂಲಗಳು ಪುನಃ ಭರ್ತಿಯಾಗಿವೆ. ನೀರಿನ ಸಂರಕ್ಷಣೆಗೆ ಸಾಮೂಹಿಕ ಜವಾಬ್ದಾರಿಯಾಗಿದೆ. ಜನರು ಇದನ್ನು ಅರಿಯಬೇಕು.

* ಜಲಶಕ್ತಿ ಅಭಿಯಾನ ಎಂಬ 100 ದಿನದ ಅಭಿಯಾನವನ್ನು ಆರಂಭಿಸಲಾಗಿದೆ. ಕೇಂದ್ರ ಜಲಶಕ್ತಿ ಆಯೋಗ ಇದನ್ನು ಜಾರಿಗೊಳಿಸುತ್ತಿದೆ. ಮಳೆ ನೀರನ್ನು ಇಂಗಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.

* ಸಂತ ರವಿದಾಸ್ ಅವರು ಸಮಾಜದ ವಿಕೃತಿಗಳ ಬಗ್ಗೆ ಧ್ವನಿ ಎತ್ತಿದರು. ಅದನ್ನು ಪರಿಹರಿಸಲು ಆಧ್ಯಾತ್ಮಿಕ ಮಾರ್ಗವನ್ನು ತಿಳಿಸಿದರು. ಅವರು ನನ್ನ ಕ್ಷೇತ್ರವಾದ ವಾರಣಾಸಿಯವರು.

* ಯುವಕರಿಗಾಗಿ ಸಂತ ರವಿದಾಸ್ ಹಲವಾರು ಸಂದೇಶಗಳನ್ನು ನೀಡಿದ್ದಾರೆ. ನೀವು ಸ್ವಚ್ಛ ಮನಸ್ಸಿನಿಂದ ಕೆಲಸವನ್ನು ಮಾಡಿ ಯಶಸ್ಸು ನಿಮಗೆ ಸಿಗುತ್ತದೆ ಎಂದು ಎಲ್ಲಾ ಯುವಕರಿಗೆ ಕರೆ ಕೊಟ್ಟಿದ್ದಾರೆ. ನಿಮ್ಮ ಕಾಲಿನ ಮೇಲೆ ನಿಲ್ಲಿ ಎಂದು ಅವರು ಕರೆ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಗೆ ದರ ಎಷ್ಟು? ತಪ್ಪು ಮಾಹಿತಿ ಬಗ್ಗೆ ಸರ್ಕಾರದ ಸ್ಪಷ್ಟನೆಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಗೆ ದರ ಎಷ್ಟು? ತಪ್ಪು ಮಾಹಿತಿ ಬಗ್ಗೆ ಸರ್ಕಾರದ ಸ್ಪಷ್ಟನೆ

* ಇಂದು ರಾಷ್ಟ್ರೀಯ ವಿಜ್ಞಾನ ದಿನ. ಕೇರಳದ ಯೋಗೇಶ್ವರ್ ಅವರು ನಮೋ ಅಪ್ಲಿಕೇಶನ್‌ನಲ್ಲಿ ವಿಜ್ಞಾನದ ಇತ್ತೀಚಿನ ಆವಿಷ್ಕಾರಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ನಾವು ಭಾರತದ ವಿಜ್ಞಾನಿಗಳ ಬಗ್ಗೆ ಅಧ್ಯಯನ ನಡೆಸಬೇಕು, ಯುವಕರು ಅದನ್ನು ತಿಳಿಯಬೇಕು.

* ವಿಜ್ಞಾನ ಎಂದರೆ ಫಿಸಿಕ್ಸ್, ಪ್ರಯೋಗಾಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ಹೈದರಾಬಾದ್‌ ಮೂಲದ ರೈತ ವೆಂಕಟ ರೆಡ್ಡಿ ಅವರು ವಿಟಮಿನ್ ಯುಕ್ತ ಬೆಳೆಗಳನ್ನು ಬೆಳೆಯುವ ಮೂಲಕ ಹೊಲದಲ್ಲಿ ಪ್ರಯೋಗ ಮಾಡಿದ್ದಾರೆ. ತಮ್ಮ ಸಾಧನೆಗಾಗಿ ಅವರು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.

* ಚೀಯಾ ಬೀಜಗಳ ಕುರಿತು ಇಂದಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆ ನಡೆಯುತ್ತಿದೆ. ಉತ್ತರ ಪ್ರದೇಶದ ರೈತರೊಬ್ಬರು ಚೀಯಾ ಬೀಜಗಳನ್ನು ಬೆಳೆಯುತ್ತಿದ್ದಾರೆ. ಇದರ ಮೂಲಕ ಆತ್ಮನಿರ್ಭಯ ಭಾರತ ಘೋಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

* ಕೋಲ್ಕತ್ತಾದ ರಂಜನ್ ಬಾಬು ಅವರು ಪತ್ರದಲ್ಲಿ ಹಲವಾರು ಪ್ರಶ್ನೆಯನ್ನು ಕೇಳಿದ್ದಾರೆ. ಆತ್ಮ ನಿರ್ಭರ ಭಾರತದಿಂದ ನಮಗೆ ಏನು ಸಿಗುತ್ತದೆ? ಎಂದು ಪ್ರಶ್ನಿಸಿದ್ದಾರೆ. ಇದು ಕೇವಲ ಸರ್ಕಾರದ ನೀತಿಯಲ್ಲ ಇದು ನಮ್ಮ ಸ್ಪೂರ್ತಿಯಾಗಿದೆ ಎಂದು ಅವರೇ ಉತ್ತರವನ್ನು ನೀಡಿದ್ದಾರೆ.

* ಆಕಾಶದದಲ್ಲಿ ನಾವು ದೇಶೀಯ ನಿರ್ಮಿತ ತೇಜಸ್ ವಿಮಾನ ನೋಡುತ್ತೇವೆ. ಮೆಟ್ರೋ ರೈಲಿನಲ್ಲಿ ದೇಶದಲ್ಲಿ ನಿರ್ಮಾಣವಾದ ಕೋಚ್ ನೋಡುತ್ತೇವೆ. ಭಾರತ ನಿರ್ಮಿತ ಕೋವಿಡ್ ಔಷಧಿ ವಿಶ್ವದ ವಿವಿಧ ದೇಶಗಳಿಗೆ ತಲುಪಿದೆ.

* ದೆಹಲಿಯಲ್ಲಿ ಎಲ್‌ಇಡಿ ಬಲ್ಪ್ ಮಾಡುತ್ತಿದ್ದ ನೌಕರರು ಲಾಕ್ ಡೌನ್ ಸಮಯದಲ್ಲಿ ಊರಿಗೆ ಮರಳಿದರು. ಬಳಿಕ ಅವರು ತಮ್ಮ ಗ್ರಾಮದಲ್ಲಿಯೇ ಎಲ್‌ಇಡಿ ಬಲ್ಪ್ ಮಾಡುವ ಕಾರ್ಖಾನೆ ತೆಗೆದಿದ್ದಾರೆ. ನೌಕರರಾಗಿದ್ದವರು ಈಗ ಮಾಲೀಕರಾಗಿದ್ದಾರೆ.

* ಗುರುಗಾಂವ್‌ನ ಮಯೂರ್‌ ಅವರು ನಮೋ ಅಪ್ಲಿಕೇಶನ್‌ನಲ್ಲಿ ಹಲವಾರು ವಿಚಾರ ಪ್ರಸ್ತಾಪಿಸಿದ್ದಾರೆ. ಕಾಜಿರಂಗದ ಉದ್ಯಾನದ ಪಕ್ಷಿಗಳ ಬಗ್ಗೆ ಬರೆದಿದ್ದಾರೆ. ಪ್ರಾಣಿ ಪಕ್ಷಿಗಳ ಬಗ್ಗೆ ಅಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಈ ಮೂಲಕ ಪ್ರಾಣಿ ಪಕ್ಷಿಗಳಿಗೆ ನೀರಿನ ಕೊರತೆ ಉಂಟಾಗದಂತೆ ಕ್ರಮ ವಹಿಸುತ್ತಿದ್ದಾರೆ.

* ಅಸ್ಸಾಂನಲ್ಲಿ ನೀವು ಹಲವಾರು ದೇವಾಲಯಗಳನ್ನು ನೋಡಿ ಅವು ಪರಿಸರ ಸಂರಕ್ಷಣೆಯಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿವೆ. ಮಂದಿರದ ಬಳಿ ಹಲವಾರು ಔಷಧೀಯ ಸಸ್ಯಗಳು ಇವೆ. ಅವುಗಳನ್ನು ಸಹ ಸಂರಕ್ಷಣೆ ಮಾಡಲಾಗುತ್ತದೆ.

* ಓಡಿಶಾದಲ್ಲಿ ನಾಯಕ್ ಸರ್ ಎಂಬುವವರು ಶೀಲು ನಾಯಕ್ ಅವರ ಹೆಸರು. ಅವರು ಯುವಕರಿಗೆ ಉಚಿತವಾಗಿ ಸೇನೆ ಸೇರಲು ತರಬೇತಿ ನೀಡಲಾಗುತ್ತಿದೆ. ದೈಹಿಕ ತರಬೇತಿಯಿಂದ ಲಿಖಿತ ಪರೀಕ್ಷೆ ತನಕ ತರಬೇತಿಯನ್ನು ನೀಡಿದ್ದಾರೆ. ಅವರ ಇಂತಹ ಕೆಲಸಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸೋಣ.

* ತಮಿಳು ಪುರಾತನ ಭಾಷೆಯಾಗಿದೆ. ನಾನು ತಮಿಳು ಕಲಿಯಲು ಸಾಕಷ್ಟು ಪ್ರಯತ್ನ ನಡೆಸಲಿಲ್ಲ. ತಮಿಳು ಭಾಷೆ ಮಾತನಾಡುವ ಜನರು ವಿಶ್ವದ ಹಲವಾರು ದೇಶಗಳಲ್ಲಿ ಇದ್ದಾರೆ. ತಮಿಳು ಸಾಹಿತ್ಯ ಸಹ ಶ್ರೀಮಂತವಾಗಿದೆ.

* ಗುಜರಾತ್‌ನ ಸರ್ದಾರ್ ಪಟೇಲ್ ಮೂರ್ತಿ ಬಳಿ ಸಂಸ್ಕೃತದಲ್ಲಿ ಪ್ರವಾಸಿಗರಿಗೆ ಮಾಹಿತಿ ನೀಡುತ್ತಿದ್ದಾರೆ. ಇದನ್ನು ಕೇಳಿ ಬಹಳ ಸಂತೋಷವಾಯಿತು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕ್ಲಿಪ್ ಪ್ಲೇ ಮಾಡಿದರು. ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟರಿ ಹೇಳುವ ವಿಡಿಯೋವನ್ನು ಸಹ ಹಾಕಿದರು.

* ವಿವಿಧ ಕ್ರೀಡೆಗಳ ಕಾಮೆಂಟರಿಗಳನ್ನು ಸ್ಥಳೀಯ ಭಾಷೆಗಳಲ್ಲಿ ನೀಡಲು ನಾನು ಚಿಂತನೆ ನಡೆಸಿದ್ದೇನೆ. ಇದಕ್ಕಾಗಿ ಕ್ರೀಡಾ ಮಂತ್ರಾಲಯದ ಜೊತೆ ನಾನು ಮಾತುಕತೆ ನಡೆಸಲಿದ್ದೇನೆ.

* ಮುಂದಿನ ಕೆಲವು ತಿಂಗಳಿನಲ್ಲಿ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಈಗಲೇ ನಾನು ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಪರೀಕ್ಷಾ ಪರ್ ಚರ್ಚಾ ಎಂಬ ಕಾರ್ಯಕ್ರಮ ನಡೆಯಲಿದೆ. ನಮೋ ಅಪ್ಲಿಕೇಶನ್‌ನಲ್ಲಿ ಪರೀಕ್ಷೆ ಎದುರಿಸುವ ಕುರಿತು ಹಲವಾರು ಸಲಹೆಗಳನ್ನು ನೀಡಲಾಗಿದೆ.

* ಕೋವಿಡ್ ನಿಯಮಗಳ ಪಾಲನೆಯನ್ನು ಜನರು ಮರೆದಿರಿ. ನಾವು ಆರೋಗ್ಯವಾಗಿರಬೇಕು. ನಮ್ಮ ಕುಟುಂಬದವರನ್ನು ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಮೋದಿ ಕರೆ ನೀಡಿದರು.

English summary
Prime minister of India Narendra Modi Mann ki baat radio program February 28,2021. Modi addressed the nation. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X