ಭೀಮ್ ಅಪ್ಲಿಕೇಷನ್ ಬಳಸಿ, ಕ್ಯಾಶ್ ಬ್ಯಾಕ್-ಪ್ರೋತ್ಸಾಹಧನ ಪಡೆಯಿರಿ

Posted By:
Subscribe to Oneindia Kannada

ನಾಗ್ಪುರ್, ಏಪ್ರಿಲ್ 14: ಭೀಮ್ ಅಪ್ಲಿಕೇಷನ್ ಬಳಕೆ ಮಾಡುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಂಬೇಡ್ಕರ್ ಜಯಂತಿ ಅಂಗವಾಗಿ ಮಹಾರಾಷ್ಟ್ರದ ನಾಗ್ಪುರ್ ನಲ್ಲಿ ಎರಡು ಯೋಜನೆಗಳನ್ನು ಘೋಷಿಸಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಡಿಜಿಟಲ್ ಪಾವತಿ ಪ್ರೋತ್ಸಾಹಿಸುವ ಉದ್ದೇಶದಿಂದ ಭಾರತ್ ಇಂಟರ್ ಫೇಸ್ ಫಾರ್ ಮನಿ (ಭೀಮ್) ಪರಿಚಯಿಸಲಾಗಿತ್ತು.

ಇದೀಗ ಭೀಮ್ ಅಪ್ಲಿಕೇಷನ್ ಗೆ ಸಂಬಂಧಿಸಿದಂತೆ ಭೀಮ್ ರೆಫರಲ್ ಬೋನಸ್ ಸ್ಕೀಂ ಹಾಗೂ ಭೀಮ್ ಮರ್ಚೆಂಟ್ ಕ್ಯಾಶ್ ಬ್ಯಾಕ್ ಸ್ಕೀಂ ಪರಿಚಯಿಸಲಾಗಿದೆ. ಭೀಮ್ ರೆಫರಲ್ ಬೋನಸ್ ಸ್ಕೀಂ ಪ್ರಕಾರ ಹೊಸ ಬಳಕೆದಾರರನ್ನು ಪರಿಚಯಿಸುವವರಿಗೆ ಹಾಗೂ ಹೊಸ ಬಳಕೆದಾರರಿಗೆ ಬೋನಸ್ ಕೊಡಲಾಗುತ್ತದೆ.[ಬಾಂಗ್ಲಾದೇಶಕ್ಕೆ ಭಾರತದಿಂದ 29 ಸಾವಿರ ಕೋಟಿ ರು. ಸಾಲ]

PM Narendra Modi launches two schemes to reward BHIM App users

ಆದರೆ ಒಂದು ನಿಯಮ ಏನೆಂದರೆ ಮೂರು ವ್ಯವಹಾರಗಳನ್ನು ಹೊಸ ಬಳಕೆದಾರರು ಮಾಡಬೇಕು. ಆ ರೀತಿ ಮೂರು ವ್ಯವಹಾರಗಳು ಒಟ್ಟು ಮೊತ್ತ ಐವತ್ತು ರುಪಾಯಿಯಷ್ಟು ಮಾಡಿದರೆ (ಗ್ರಾಹಕರೊಂದಿಗೆ ಅಥವಾ ವರ್ತಕರೊಂದಿಗೆ) ಹೊಸ ಬಳಕೆದಾರರಿಗೆ ಹಾಗೂ ಅವರಿಗೆ ಅಪ್ಲಿಕೇಷನ್ ಪರಿಚಯಿಸಿದವರಿಗೆ ಬೋನಸ್ ಬರುತ್ತದೆ. ಆ ಮೊತ್ತವು ಭೀಮ್ ಅಪ್ಲಿಕೇಷನ್ ನ ನೋಟಿಫಿಕೇಷನ್ ಮೂಲಕ ಗೊತ್ತಾಗುತ್ತದೆ.

ಪರಿಚಯ ಮಾಡಿದವರಿಗೆ 10 ರುಪಾಯಿ, ಹೊಸದಾಗಿ ಭೀಮ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ವ್ಯವಹಾರ ಮಾಡಿದವರಿಗೆ 25 ರುಪಾಯಿ ಬರುತ್ತದೆ.['ಭೀಮ್ ಆ್ಯಪ್ ಡೌನ್ ಲೋಡ್ ಮಾಡುವುದು ಹೇಗೆ?]

ಭೀಮ್ ಮರ್ಚೆಂಟ್ ಕ್ಯಾಶ್ ಬ್ಯಾಕ್ ಸ್ಕೀಂ
ವರ್ತಕರು-ವ್ಯಾಪಾರಿಗಳು ಭೀಮ್ ಅಪ್ಲಿಕೇಷನ್ ಬಳಸಲು ಹಾಗೂ ಆ ಮೂಲಕ ವ್ಯವಹಾರಗಳನ್ನು ಪ್ರೋತ್ಸಾಹಿಸುವ ಕಾರಣಕ್ಕೆ ಈ ಯೋಜನೆ ಪರಿಚಯಿಸಲಾಗಿದೆ. ಇದರಲ್ಲಿ ಪ್ರೋತ್ಸಾಹಧನ ಒಂದು ಸಲಕ್ಕೆ ನಿಲ್ಲುವುದಿಲ್ಲ. ಕ್ಯಾಶ್ ಬ್ಯಾಕ್ ತಿಂಗಳಿಗೆ 300 ರುಪಾಯಿವರೆಗೆ, ಆರು ತಿಂಗಳಿಗೆ 1800 ರುಪಾಯಿವರೆಗೆ ಪಡೆಯಬಹುದು. ಭೀಮ್ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಐಒಎಸ್ ಅಪ್ಲಿಕೇಷನ್ ಸ್ಟೋರ್ ಗಳಲ್ಲಿ ಲಭ್ಯವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With an aim to reward BHIM App users, prime minister Narendra Modi on Friday announced two schemes under the BHIM App on the occasion of the 126th birth anniversary of Dr Babasaheb Ambedkar in Nagpur in Maharashtra.
Please Wait while comments are loading...