ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರೀಕರಣ ಸಮಸ್ಯೆಯಲ್ಲ ಇದೊಂದು ಅವಕಾಶ: ಮೋದಿ

By Madhusoodhan
|
Google Oneindia Kannada News

ಪುಣೆ, ಜೂನ್ 25: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಯ 20 ನಗರಗಳ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಪುಣೆಯಲ್ಲಿ ಚಾಲನೆ ಶನಿವಾರ ಸಂಜೆ ಚಾಲನೆ ನೀಡಿದರು.

ಇದರೊಂದಿಗೆ ಕರ್ನಾಟಕದ ಬೆಳಗಾವಿ ಮತ್ತು ದಾವಣಗೆರೆ ಸೇರಿ ದೇಶದ ಇತರ 18 ನಗರಗಳಲ್ಲಿನ ಕಾಮರಿಗಳಿಗೆ ಚಾಲನೆ ಸಿಕ್ಕಿದೆ. ನರೇಂದ್ರ ಮೋದಿ ಪುಣೆಯ 84 ಯೋಜನೆಗಳಿಗೆ ಚಾಲನೆ ನೀಡಿದರು.[ಸ್ಮಾರ್ಟ್ ಸಿಟಿ : ಕರ್ನಾಟಕಕ್ಕೆ 6 ಮಿಕ್ಕ ರಾಜ್ಯಕ್ಕೆ ಎಷ್ಟು?]

modi

ದೇಶದ ಉಳಿದ 20 ನಗರಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅಂಗವಾಗಿ ಒಟ್ಟು 69 ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು ಇವುಗಳ ಒಟ್ಟು ವೆಚ್ಚ 1770 ಕೋಟಿ ರೂ.ಮೊದಲನೆ ಹಂತದಲ್ಲಿ ಘನ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು ಸರಬರಾಜು, ಕೊಳಚೆ ನೀರು ಶುದ್ಧೀಕರಣ, ನಗರಗಳ ಹಸಿರೀಕರಣ, ನಗರಪ್ರದೇಶಗಳಲ್ಲಿ ಬಡವರಿಗೆ ಮನೆ ನಿರ್ಮಾಣವನ್ನು ಗುರಿಯಾಗಿ ಇರಿಸಿಕೊಳ್ಳಲಾಗಿದೆ.[ಸ್ಮಾರ್ಟ್ ಸಿಟಿಯಾಗಲಿರುವ 98 ನಗರಗಳ ಪಟ್ಟಿ]

ಕರ್ನಾಟಕದ ಸ್ಮಾರ್ಟ್ ಸಿಟಿಗಳು:
ಕೇಂದ್ರ ಸರ್ಕಾರ ದೇಶದಲ್ಲಿ 100 ಸ್ಮಾರ್ಟ್‌ಸಿಟಿ ನಿರ್ಮಾಣಕ್ಕೆ ಯೋಜಿಸಿದೆ. ಇದಕ್ಕೆ ಕರ್ನಾಟಕದ ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ತುಮಕೂರು, ಹುಬ್ಬಳ್ಳಿ-ಧಾರವಾಡ ಆಯ್ಕೆಯಾಗಿವೆ. ಆದರೆ ಮೊದಲ ಹಂತದಲ್ಲಿ ಬೆಳಗಾವಿ ಮತ್ತು ದಾವಣಗೆರೆಯನ್ನು ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ನರೇಂದ್ರ ಮೋದಿ ಭಾಷಣದ ಹೈಲೈಟ್ಸ್
* ಎಲ್ಲರಿಗೂ ಅತ್ಯಾಧುನಿಕ ಸೌಲಭ್ಯ ಲಭ್ಯ ಮಾಡುವ ಗುರಿ
* ತ್ಯಾಜ್ಯ ನಿರ್ವಹಣೆಯಲ್ಲಿ ನಗರಗಳು ಶಿಸ್ತು ಸಾಧಿಸಬೇಕು
* ಪ್ರತಿಯೊಂದು ನಗರಗಳು ಅದರದ್ದೇ ಆದ ಗುರುತು ಪಡೆದುಕೊಳ್ಳಬೇಕು
* ನಗರೀಕರಣ ಒಂದು ಸಮಸ್ಯೆಯಲ್ಲ ಇದೊಂದು ಅವಕಾಶ
* ಭಾರತದಲ್ಲಿರುವ ಕೌಶಲ್ಯಯುತ ಜನರ ಕೈಗೆ ಕೆಲಸ ಸಿಗಬೇಕು
* ಯೋಜನೆ ಯಶಸ್ವಿಯಾಗುವುದರಲ್ಲಿ ಯಾವ ಅನುಮಾನ ಇಲ್ಲ

English summary
Pune: Prime Minsiter Narendra Modi on Saturday evening inaugurated various 'Smart City Projects' under the Smart Cities Mission at a function here. Modi launched 84 such projects including 14 for Pune, for various other cities across the country, at an investment of around Rs 2,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X