ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ಸಂವಾದದ ಹೈಲೇಟ್ಸ್

|
Google Oneindia Kannada News

ನವದೆಹಲಿ, ಏಪ್ರಿಲ್.27: ಭಾರತ ಲಾಕ್ ಡೌನ್ ಮುಂದುವರಿಸಬೇಕೇ ಬೇಡವೇ ಎಂಬುದರ ಬಗ್ಗೆ ದೇಶದ ಒಂಬತ್ತು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಿದರು.

ಕೊರೊನಾ ವೈರಸ್ ಹರಡುವಿಕೆ ಸಂದರ್ಭದಲ್ಲಿ ಆಯಾ ರಾಜ್ಯಗಳಲ್ಲಿನ ಸೋಂಕಿತರ ಸಂಖ್ಯೆ ಹಾಗೂ ಲಾಕ್ ಡೌನ್ ನಿಂದಾಗಿ ಉಂಟಾಗಿರುವ ಪರಿಸ್ಥಿತಿಯ ಕುರಿತು ಪ್ರಧಾನಿ ಮೋದಿ 9 ರಾಜ್ಯಗಳ ಸಿಎಂಗಳಿಂದ ಮಾಹಿತಿ ಸಂಗ್ರಹಿಸಿದರು.

ಕೊರೊನಾ ಕಾಟದಿಂದ ಭಾರತದಲ್ಲಿ ಮುಂದುವರಿಯುತ್ತಾ ಲಾಕ್ ಡೌನ್? ಕೊರೊನಾ ಕಾಟದಿಂದ ಭಾರತದಲ್ಲಿ ಮುಂದುವರಿಯುತ್ತಾ ಲಾಕ್ ಡೌನ್?

ನವದೆಹಲಿ, ಕರ್ನಾಟಕ, ಉತ್ತರಾಖಂಡ್, ಪಶ್ಚಿಮ ಬಂಗಾಳ, ಕೇರಳ, ಮೇಘಾಲಯ, ಮೀಜೋರಾಂ, ಹರಿಯಾಣ, ಪುದುಚೇರಿ ಮುಖ್ಯಮಂತ್ರಿಗಳು ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆಗಿನ ಸಂವಾದದಲ್ಲಿ ಭಾಗವಹಿಸಿದ್ದರು. ಈ ವೇಳೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು ಇಲ್ಲಿವೆ.

PM Narendra Modi Interact With 9 States CM: Highlight

ಪ್ರಧಾನಮಂತ್ರಿ ವಿಡಿಯೋ ಸಂವಾದದ ಹೈಲೇಟ್ಸ್:

- ಕರ್ನಾಟಕದಲ್ಲಿ ಮೇ.15ರವರೆಗೂ ಲಾಕ್ ಡೌನ್ ಮುಂದುವರಿಸಲು ಬಿಎಸ್ ವೈ ಮನವಿ

- ರಾಜ್ಯದಲ್ಲಿ ಮೇ.15ರವರೆಗೂ ಮದ್ಯಪಾನ ನಿಷೇಧ ಮುಂದುವರಿಕೆ ಸಾಧ್ಯತೆ

- ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ತ್ರಿಶೂಲ ಸೂತ್ರ

- ಕೊರೊನಾ ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಮುಂದುವರಿಸಲು ತೀರ್ಮಾನ

- ಆರೆಂಜ್ ಝೋನ್ ಗಳಲ್ಲಿ ಕೊಂಚ ಲಾಕ್ ಡೌನ್ ಸಡಿಲಿಕೆ ಸಾಧ್ಯತೆ

- ರೆಡ್, ಆರೆಂಜ್ ಹಾಗೂ ಗ್ರೀನ್ ಝೋನ್ ಗಳ ವಿಂಗಡನೆಗೆ ಪ್ರಸ್ತಾವನೆ

- ಮೂರು ವಿಭಾಗಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡುವಂತೆ ಪ್ರಸ್ತಾಪ

- ಯಾವ ವಿಭಾಗಗಳಿಗೆ ಯಾವ ರೀತಿ ಮಾರ್ಗಸೂಚಿ ಅನ್ವಯಿಸುವಂತೆ ಸ್ಪಷ್ಟ ಸಂದೇಶ

English summary
PM Narendra Modi Interact With 9 States CM: Highlight Of India Lockdown And Leaders Demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X