• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐತಿಹಾಸಿಕ ಕೊರೊನಾ ಲಸಿಕಾ ಅಭಿಯಾನಕ್ಕೆ ಮೋದಿ ಚಾಲನೆ

|

ನವದೆಹಲಿ, ಜನವರಿ 16: ಭಾರತದಾದ್ಯಂತ ಐತಿಹಾಸಿಕ ಬೃಹತ್ ಕೊರೊನಾ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.

ಇಂದು 3006 ಲಸಿಕಾ ಕೇಂದ್ರಗಳಲ್ಲಿ 3 ಲಕ್ಷ ಮಂದಿಗೆ ಲಸಿಕೆ ನೀಡಲಾಗುತ್ತಿದ್ದು, ಈ ಬೃಹತ್ ಲಸಿಕಾ ಕಾರ್ಯಕ್ರಮ ಎಲ್ಲಾ ರಾಜ್ಯಗಳಲ್ಲೂ ಆರಂಭವಾಗಿದೆ. ಈ ಐತಿಹಾಸಿಕ ಲಸಿಕಾ ಕಾರ್ಯಕ್ರಮದ ಕುರಿತು ಪ್ರಧಾನಿ ಮೋದಿ ಅವರು ಮಾತುಗಳನ್ನಾಡಿದ್ದಾರೆ.

ಲಸಿಕೆಗಳ ಸಂಶೋಧನೆ, ಅಭಿವೃದ್ಧಿಗೆ ದೇಶದ ವಿಜ್ಞಾನಿಗಳು ಹಾಗೂ ವೈದ್ಯರಿಗೆ ಧನ್ಯವಾದ ಸಲ್ಲಿಸಿದ ಅವರು, ದೇಶದಲ್ಲಿ ನೀಡುತ್ತಿರುವ ಈ ಎರಡು ಕೊರೊನಾ ಲಸಿಕೆಗಳು ಬಹಳ ಮುಖ್ಯವೆಂದು ನಾನು ಜನರಿಗೆ ಹೇಳುತ್ತೇನೆ. ಎಲ್ಲರೂ ಈ ಅಭಿಯಾನಕ್ಕೆ ಸಹಕರಿಸಬೇಕು ಎಂದು ಕೋರಿದರು.

"ಎಂದಿಗೂ ಎಚ್ಚರ ತಪ್ಪಬೇಡಿ"

ಲಸಿಕೆ ಆರಂಭವಾಗಿದೆ ಎಂದು ಮಾಸ್ಕ್‌ಗಳನ್ನು ತೆಗೆಯುವುದು ಮತ್ತು ಮೊದಲ ಡೋಸ್ ಪಡೆದ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ತಪ್ಪನ್ನು ಮಾಡಬೇಡಿ ಎಂದು ವಿನಂತಿಸುತ್ತೇನೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕಾ ಪ್ರಕ್ರಿಯೆಯನ್ನು ಇತಿಹಾಸದಲ್ಲಿ ಎಂದಿಗೂ ನಡೆಸಲಾಗಲಿಲ್ಲ. ಭಾರತ ಮೊದಲ ಹಂತದಲ್ಲಿಯೇ 3 ಕೋಟಿ ಜನರಿಗೆ ಲಸಿಕೆ ನೀಡುತ್ತಿದೆ. ಎರಡನೇ ಹಂತದಲ್ಲಿ, ನಾವು ಈ ಸಂಖ್ಯೆಯನ್ನು 30 ಕೋಟಿಗೆ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಅತಿ ಕಡಿಮೆ ಅವಧಿಯಲ್ಲೇ ಎರಡು ಲಸಿಕೆಗಳ ಅಭಿವೃದ್ಧಿ

ಅತಿ ಕಡಿಮೆ ಅವಧಿಯಲ್ಲೇ ಎರಡು ಲಸಿಕೆಗಳ ಅಭಿವೃದ್ಧಿ

ಕೊರೊನಾ ಸೋಂಕು ಕಾಣಿಸಿಕೊಂಡು ಎಲ್ಲರೂ ಆತಂಕದಿಂದ ಕೈಚೆಲ್ಲಿದ ಸಂದರ್ಭವನ್ನೇ ಭಾರತ ಸವಾಲಾಗಿ ತೆಗೆದುಕೊಂಡಿತು. ಅತಿ ಕಡಿಮೆ ಅವಧಿಯಲ್ಲಿ, ಒಂದಲ್ಲಾ, ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಯಿತು. ಇದು ನಮ್ಮ ವಿಜ್ಞಾನಿಗಳು, ವೈದ್ಯರಿಗೆ ಸಲ್ಲಬೇಕಾದ ಗರಿಮೆ ಎಂದು ಹೇಳಿದರು.

  ಕೊರೊನಾ ಲಸಿಕೆಯನ್ನ ಮೊದಲು ಜನಪ್ರತಿನಿಧಿಗಳು ತೆಗೆದುಕೊಳ್ಳಬೇಕು- ಶಾಸಕಿ ಸೌಮ್ಯ ರೆಡ್ಡಿ ಅಭಿಪ್ರಾಯ |Oneindia Kannada

  "ವಿಶ್ವಕ್ಕೇ ಭಾರತ ಮಾದರಿಯಾಗಿದೆ"

  ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಒಂದು ಉತ್ತಮ ಉದಾಹರಣೆಯಾಗಿ ನಿಂತಿದೆ. ಚೀನಾದಲ್ಲಿ ಮೊದಲು ಕೊರೊನಾ ಪ್ರಕರಣ ಕಾಣಿಸಿಕೊಂಡಾಗ ಹಲವು ದೇಶಗಳು ತಮ್ಮ ನಾಗರಿಕರನ್ನು ಕರೆಸಿಕೊಳ್ಳಲು ಹಿಂದೇಟು ಹಾಕಿದವು. ಆದರೆ ಭಾರತ ಒಂದೇ ಭಾರತ್ ಮಿಷನ್ ಅಡಿಯಲ್ಲಿ ತನ್ನ ನಾಗರಿಕರನ್ನು ಕರೆಸಿಕೊಂಡಿತು. ಈ ಅವಧಿಯಲ್ಲಿ ಎಷ್ಟೋ ವೈದ್ಯರು, ಆರೋಗ್ಯ ಕಾರ್ಯಕರ್ತರು ತಮ್ಮ ಕುಟುಂಬಳಿಂದ ದೂರುವುಳಿದು ಕೊರೊನಾ ಸಲುವಾಗಿ ಕೆಲಸ ನಿರ್ವಹಿಸಿದ್ದಾರೆ. ಅವರ ಸೇವೆ ಮರೆಯಲು ಸಾಧ್ಯವೇ ಎಂದು ಸೇವೆಯನ್ನು ಸ್ಮರಿಸಿದರು.

  "ಕೊರೊನಾದಿಂದ ಸಾಕಷ್ಟು ಕಲಿತಿದ್ದೇವೆ"

  ಈ ಒಂದು ವರ್ಷಗಳ ಅವಧಿಯಲ್ಲಿ ಕೊರೊನಾ ಸೋಂಕಿನಿಂದ ಭಾರತ ಸಾಕಷ್ಟು ಪಾಠಗಳನ್ನು ಕಲಿತಿದೆ. ಆರೋಗ್ಯ ಕಾರ್ಯಕರ್ತರಿಗೆ ಮೊದಲ ಲಸಿಕೆಗಳನ್ನು ಕಾಯ್ದಿರಿಸುವ ಮೂಲಕ ಸಮಾಜವು ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದೆ.

  English summary
  Prime Minister Narendra Modi on Saturday launched the biggest vaccination drive of the world and congratulated India and its scientists on the achievement
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X