ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಉತ್ಪನ್ನ ಆಮದಿಗೆ ಮಾಡುವ ವೆಚ್ಚ ರೈತರಿಗೆ ಸಿಗುವಂತಾಗಬೇಕು: ಮೋದಿ

|
Google Oneindia Kannada News

ನವದೆಹಲಿ, ಫೆಬ್ರವರಿ 20: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೀತಿ ಆಯೋಗದ ಆಡಳಿತ ಮಂಡಳಿಯ ಆರನೇ ಸಭೆಯನ್ನು ನಡೆಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ, ಭಾರತದಲ್ಲಿ ಉದ್ಯಮ ನಡೆಸಲು ಸುಲಭವಾಗುವಂತೆ ಪುರಾತನ ಕಾನೂನುಗಳನ್ನು ರದ್ದುಗೊಳಿಸುವ ಮಾತನಾಡಿದರು. ಜತೆಗೆ ಆರ್ಥಿಕ ಪ್ರಗತಿಯನ್ನು ವೃದ್ಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಗೂಡಿ ಕೆಲಸ ಮಾಡಬೇಕೆಂದು ಪ್ರತಿನಿಧಿಸಿದರು.

ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಕಾರ್ಯಕ್ರಮದ ಭಾಗವಾಗಲು ಖಾಸಗಿ ವಲಯಕ್ಕೆ ಸಂಪೂರ್ಣ ಅವಕಾಶ ನೀಡಬೇಕು. ದೇಶದ ಪ್ರಗತಿಗೆ ಕೇಂದ್ರ ಹಾಗೂ ರಾಜ್ಯಗಳು ಜತೆಗೂಡಿ ಕೆಲಸ ಮಾಡಬೇಕು. ಜತೆಗೆ ನಿರ್ದಿಷ್ಟ ದಿಕ್ಕಿನಲ್ಲಿ ಸಾಗಬೇಕು ಹಾಗೂ ಸಹಕಾರಯುತ ಸಂಯುಕ್ತಕೂಟವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಬೇಕು. ಇದು ಮಾತ್ರವಲ್ಲದೆ, ನಾವು ಸ್ಪರ್ಧಾತ್ಮಕತೆ ಹಾಗೂ ಸಂಯುಕ್ತ ಸಹಕಾರವನ್ನು ರಾಜ್ಯಗಳ ನಡುವೆ ಮಾತ್ರವಲ್ಲ ಜಿಲ್ಲೆಗಳಲ್ಲಿಯೂ ತರಬೇಕಿದೆ. ಆರ್ಥಿಕ ಬೆಳವಣಿಗೆಗೆ ಖಾಸಗಿ ವಲಯದ ಪ್ರತಿನಿಧಿತ್ವವನ್ನು ಹಾಗೂ ಗೌರವವನ್ನು ಸರ್ಕಾರ ನೀಡಬೇಕಿದೆ ಎಂದು ಹೇಳಿದರು. ಮುಂದೆ ಓದಿ.

ಫೆಬ್ರವರಿ.25ರಂದು ಪುದುಚೇರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಫೆಬ್ರವರಿ.25ರಂದು ಪುದುಚೇರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಜಗತ್ತಿಗೆ ಮುಂದೆ ಭಾರತ ಪ್ರಜ್ವಲ

ಜಗತ್ತಿಗೆ ಮುಂದೆ ಭಾರತ ಪ್ರಜ್ವಲ

'ಕೋವಿಡ್ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಗೆ ಜತೆಗೆ ಕೆಲಸ ಮಾಡಿವೆ ಎಂಬುದನ್ನು ನೋಡಿದ್ದೇವೆ. ಇದರಲ್ಲಿ ದೇಶ ಯಶಸ್ವಿಯಾಗಿದ್ದು, ಇಡೀ ಜಗತ್ತಿನ ಮುಂದೆ ಭಾರತಕ್ಕೆ ಉತ್ತಮ ವರ್ಚಸ್ಸನ್ನು ಸೃಷ್ಟಿಸಿದೆ' ಎಂದರು.

ಅಪ್ರಸ್ತುತ ಕಾನೂನು ತೆಗೆಯಿರಿ

ಅಪ್ರಸ್ತುತ ಕಾನೂನು ತೆಗೆಯಿರಿ

ದೇಶ ನಿರ್ಮಾಣ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಂಪೂರ್ಣವಾಗಿ ಭಾಗವಹಿಸಲು ಸರ್ಕಾರವು ಸೂಕ್ತ ಅವಕಾಶ ಒದಗಿಸಲು ಕ್ರಮಗಳನ್ನು ತೆಗೆದುಕೊಂಡಿದೆ. ಜನರ ಮೇಲಿನ ಹೊರೆಯ ಪ್ರಮಾಣಗಳನ್ನು ತಗ್ಗಿಸುವ ಅಗತ್ಯವಿದೆ. ತಂತ್ರಜ್ಞಾನದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಪ್ರಸ್ತುತವಾಗಿರುವ ನಿಯಂತ್ರಣ ನಿಯಮಗಳನ್ನು ತಗ್ಗಿಸಲು ಸಮಿತಿಗಳನ್ನು ರಚಿಸುವಂತೆ ರಾಜ್ಯಗಳಿಗೆ ಸಲಹೆ ನೀಡಿದರು.

ವಿದ್ಯಾರ್ಥಿ, ಪಾಲಕರ ಜೊತೆ ಮೋದಿ 'ಪರೀಕ್ಷಾ ಪೆ ಚರ್ಚಾ 2021'ವಿದ್ಯಾರ್ಥಿ, ಪಾಲಕರ ಜೊತೆ ಮೋದಿ 'ಪರೀಕ್ಷಾ ಪೆ ಚರ್ಚಾ 2021'

ಬಡವರ ಸಬಲೀಕರಣ

ಬಡವರ ಸಬಲೀಕರಣ

ಖಾದ್ಯ ತೈಲದಂತಹ ಕೃಷಿ ಉತ್ಪನ್ನಗಳನ್ನು ಹೆಚ್ಚಿಸಲು ಹಾಗೂ ಅವುಗಳ ಆಮದನ್ನು ತಗ್ಗಿಸಲು ಪ್ರಯತ್ನಗಳನ್ನು ಮಾಡಬೇಕಿದೆ. ರೈತರಿಗೆ ಮಾರ್ಗದರ್ಶನ ಮಾಡುವ ಮೂಲಕ ಇದನ್ನು ಸಾಧಿಸಬಹುದು. ಆಮದಿಗೆ ವ್ಯಯಿಸುವ ಹಣ ರೈತರ ಖಾತೆಗಳಿಗೆ ಹೋಗಬಹುದು. ಕಳೆದ ಕೆಲವು ವರ್ಷಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯುವುದನ್ನು ನೋಡಿದ್ದೇವೆ. ಲಸಿಕೆ ಹಾಗೂ ಆರೋಗ್ಯ ಸೌಲಭ್ಯಗಳಲ್ಲಿ ಏರಿಕೆ ಕಂಡಿದ್ದೇವೆ. ಬಡವರ ಸಬಲೀಕರಣಕ್ಕಾಗಿ ಉಚಿತ ವಿದ್ಯುತ್ ಸಂಪರ್ಕ, ಉಚಿತ ಅನಿಲ ಸಂಪರ್ಕಗಳನ್ನು ನೀಡುವಂತಹ ಕಾರ್ಯಗಳು ಅವರ ಜೀವನದಲ್ಲಿ ಭಾರಿ ಬದಲಾವಣೆಗಳನ್ನು ಪ್ರತಿಫಲಿಸಿವೆ ಎಂದು ಹೇಳಿದರು.

ದೇಶದಲ್ಲಿ ಭಯೋತ್ಪಾದನೆ ಹರಡುತ್ತಿರುವವರಲ್ಲಿ ವಿದ್ಯಾವಂತರ ಪಾತ್ರ ಹೆಚ್ಚು:ಮೋದಿದೇಶದಲ್ಲಿ ಭಯೋತ್ಪಾದನೆ ಹರಡುತ್ತಿರುವವರಲ್ಲಿ ವಿದ್ಯಾವಂತರ ಪಾತ್ರ ಹೆಚ್ಚು:ಮೋದಿ

ಮಮತಾ ಗೈರು

ಮಮತಾ ಗೈರು

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆಗೆ ಗೈರಾಗಿದ್ದರು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಬಿಹಾರ ಸಿಎಂ ನಿತೀಶ್ ಕುಮಾರ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮುಂತಾದವರು ಭಾಗವಹಿಸಿದ್ದರು.

English summary
PM Narendra Modi in NITI Aayog meeting says centre and states need to work together to boost economic growth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X