ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತಾನಿನಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ

By Mahesh
|
Google Oneindia Kannada News

ನವದೆಹಲಿ, ಜೂನ್ 15 : ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರದಿಂದ ಎರಡು ದಿನಗಳ ಭೂತಾನ್ ಪ್ರವಾಸ ಕೈಗೊಂಡಿದ್ದಾರೆ. ಇದು ಪ್ರಧಾನಿ ಆದ ಬಳಿಕ ಮೋದಿ ಕೈಗೊಳ್ಳುತ್ತಿರುವ ಮೊದಲ ವಿದೇಶ ಪ್ರವಾಸವಾಗಿದ್ದು, ಥಿಂಪುವಿನಲ್ಲಿ ಮೋದಿ ಅವರಿಗೆ ಆತ್ಮೀಯ ಸ್ವಾಗತ ಸಿಕ್ಕಿದೆ.

ಭೂತಾನಿನ ಪಾರೋ ವಿಮಾನ ನಿಲ್ದಾಣ ತಲುಪಿದ ಮೋದಿ ಅವರನ್ನು ಭೂತಾನ್ ಪ್ರಧಾನಿ ತ್ಸಾರಿಂಗ್ ತೊಬ್ಗೆ ಅವರು ಬರಮಾಡಿಕೊಂಡಿದ್ದಾರೆ. ಹೈಬ್ರೀಡ್ ವಿದ್ಯುತ್ ಯೋಜನೆ, ಉಭಯ ದೇಶಗಳ ವ್ಯಾಪಾರ-ವಹಿವಾಟು ಕುರಿತಂತೆ ಮಾತುಕತೆ ನಡೆಯಲಿದೆ. ಥಿಂಪುವಿನಲ್ಲಿ ಎಲ್ಲೆಡೆ 'Jonpa Lekso'(ಸ್ವಾಗತ) and 'Kadrinche' (ಧನ್ಯವಾದ) ಎಂದು ಮೋದಿ ಅವರ ಭಾವಚಿತ್ರ ಹಾಕಿ ಸ್ವಾಗತಕೋರಲಾಗಿದೆ.

ಮೋದಿ ಅವರು ತಮ್ಮ ಪ್ರವಾಸದ ಅವಧಿಯಲ್ಲಿ ಭೂತನ್ ರಾಜ ಜಿಗ್ಮೆ ಖೇಸರ್ ನಾಮ್​​ಗಿಲ್ ವಾಂಗ್​​ಚುಕ್ ಅವರನ್ನು ಭೇಟಿ ಮಾಡಲಿದ್ದಾರೆ. ಭೂತಾನ್​​​ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಭಾರತದ ಸಹಾಯದೊಂದಿಗೆ ನಿರ್ಮಿಸಲಾಗುತ್ತಿರುವ ಭೂತಾನ್ ಸುಪ್ರೀಂ ಕೋರ್ಟ್​ ಕಟ್ಟಡವನ್ನು ಕೂಡ ಉದ್ಘಾಟನೆ ಮಾಡಲಿದ್ದಾರೆ.

ಮೋದಿ ಮೊದಲ ವಿದೇಶಿ ಪ್ರವಾಸ ರುಪಾಯಿ ಮೌಲ್ಯ ಚೇತರಿಕೆಗೆ ಕಾರಣವಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಿಮಾಲಯ ತಪ್ಪಲಿನ ಪೂರ್ವಾಂತ್ಯ ಭಾಗದಲ್ಲಿರುವ ಭೂತಾನ್ ರಾಷ್ಟ್ರ ಪ್ರವಾಸ ಮುಗಿದ ನಂತರ ಪ್ರಧಾನಿ ಮೋದಿ ಅವರು ಜಪಾನ್ ಹಾಗೂ ಆಗಸ್ಟ್ ನಲ್ಲಿ ನೇಪಾಳಕ್ಕೆ ತೆರಳಲಿದ್ದಾರೆ.

ಹಲವು ಒಪ್ಪಂದಗಳಿಗೆ ಸಹಿ ಸಾಧ್ಯತೆ

ಹಲವು ಒಪ್ಪಂದಗಳಿಗೆ ಸಹಿ ಸಾಧ್ಯತೆ

* ಎರಡೂ ರಾಷ್ಟ್ರಗಳು ಯುವಕರನ್ನು ಮತ್ತಷ್ಟು ಸದೃಡಗೊಳಿಸಬೇಕಾದ ಅವಶ್ಯಕತೆ ಇದ್ದು ಈ ನಿಟ್ಟಿನಲ್ಲಿ ಭೂತಾನ್​​ನೊಂದಿಗೆ ಶೈಕ್ಷಣಿಕ ಒಪ್ಪಂದಗಳನ್ನು ಮಾಡಿಕೊಳ್ಳುವ ಅಭಿಲಾಷೆಯಿದೆ ಎಂದು ಮೋದಿ ಹೇಳಿದ್ದಾರೆ.
* ಮೋದಿ ಉಷ್ಣ ವಿದ್ಯುತ್ ಯೋಜನೆಗೆ ಭೂಮಿ ಪೂಜೆ ಕೂಡ ನೇರವೇರಿಸಲಿದ್ದಾರೆ. ಹಿಮಾಲಯದ ತಪ್ಪಲಿನಲ್ಲಿ ಇರುವ ಈ ಪುಟ್ಟ ರಾಷ್ಟ್ರದ 600 ಮೆಗಾ ವ್ಯಾಟ್ ಸಾಮರ್ಥ್ಯದ ಕೊಲೊಂಗ್ಚು ವಿದ್ಯುತ್ ಯೋಜನೆಯ ಕಾರ್ಯಾರಂಭಕ್ಕೆ ಮೋದಿ ಚಾಲನೆ ನೀಡಲಿದ್ದಾರೆ.
* ಭೂತಾನ್ ಭೇಟಿಯ ವೇಳೆ ಮೋದಿ ಅವರೊಂದಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗು ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಇರುತ್ತದೆ.

ಭೇಟಿ ಬಗ್ಗೆ ಮಾತನಾಡಿರುವ ಮೋದಿ

ಭೇಟಿ ಬಗ್ಗೆ ಮಾತನಾಡಿರುವ ಮೋದಿ

ಭೂತಾನ್​​​ನೊಂದಿಗೆ ಉತ್ತಮ ಸಂಬಂಧ ಹೊಂದುವುದು ಎನ್​​​ಡಿಎ ಸರಕಾರದ ಆದ್ಯತೆಗಳಲ್ಲಿ ಒಂದು. ಉಭಯ ರಾಷ್ಟ್ರಗಳು ಸಮಾನ ಭೌಗೋಳಿಕ, ರಾಜಕಿಯ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಹೊಂದಿವೆ ಎಂದು ಹೇಳಿದ್ದಾರೆ.

ಮೋದಿ ಅವರಿಗೆ ಆತ್ಮೀಯ ಸ್ವಾಗತ

ಮೋದಿ ಅವರಿಗೆ ಆತ್ಮೀಯ ಸ್ವಾಗತ

ಥಿಂಪುವಿನಲ್ಲಿ ಎಲ್ಲೆಡೆ 'Jonpa Lekso'(ಸ್ವಾಗತ) and 'Kadrinche' (ಧನ್ಯವಾದ) ಎಂದು ಮೋದಿ ಅವರ ಭಾವಚಿತ್ರ ಹಾಕಿ ಸ್ವಾಗತ ಕೋರಲಾಗಿದೆ.

ಪಾರೋ ವಿಮಾನ ನಿಲ್ದಾಣದಿಂದ ಬಂದ ವಿಡಿಯೋ

ಭೂತಾನಿನಲ್ಲಿ ಪ್ರಧಾನಿ ಮೋದಿ: ಥಿಂಪು ಪಾರೋ ವಿಮಾನ ನಿಲ್ದಾಣದಿಂದ ಬಂದ ವಿಡಿಯೋ

rn

ಭೂತಾನ್ ರಕ್ಷಣಾ ಪಡೆಯಿಂದ ಗೌರವ

ಭೂತಾನ್ ರಕ್ಷಣಾ ಪಡೆಯಿಂದ ಗೌರವ ವಂದನೆ ಪಡೆದ ಭಾರತದ ಪ್ರಧಾನಿ ನರೇಂದ್ರ ಮೋದಿ

ಭೂತಾನ್ ಪ್ರವಾಸದ ಬಗ್ಗೆ ಮೋದಿ ಟ್ವೀಟ್

ಭೂತಾನ್ ಪ್ರವಾಸದ ಬಗ್ಗೆ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು ಹೀಗೆ

ಪ್ರಧಾನಿ ಮೋದಿ ಭೇಟಿ ಲಾಭಗಳೇನು?

ಪ್ರಧಾನಿ ಮೋದಿ ಭೇಟಿ ಲಾಭಗಳೇನು?

* ಭಾರತದ ಆಟೋಮೊಬೈಲ್ ಆಮದಿಗೆ ನಿರ್ಬಂಧ ಹೇರಿದ್ದ ಭೂತಾನ್, ಜುಲೈನಿಂದ ನಿರ್ಬಂಧ ಸಡಿಲಿಸುವುದಾಗಿ ಪ್ರಕಟಿಸಿದೆ.
* ngultrum ಭೂತಾನಿನ ಕರೆನ್ಸಿಯಾಗಿದ್ದರೂ ಭಾರತೀಯ ರುಪಾಯಿ ಮೇಲೆ ಟ್ಯಾಕ್ಸಿ ಚಾಲಕರಿಂದ ಹಿಡಿದು ವರ್ತಕರು ಬಹುವಾಗಿ ಅವಲಂಬಿತರಾಗಿದ್ದಾರೆ. ಮೋದಿ ಭೇಟಿ ನಂತರ ಹಣಕಾಸು ವಿನಿಮಯ ಸಂಬಂಧ ವೃದ್ಧಿ ನಿರೀಕ್ಷೆಯಿದೆ.
* 100 ರುಪಾಯಿಗೆ 107 ngultrum ನೀಡಬೇಕಾಗಿರುವುದರಿಂದ ಭೂತಾನಿನಲ್ಲೂ ಭಾರತೀಯ ಕರೆನ್ಸಿ ಪ್ರಭಾವ ಬೀರಿದೆ.
* ಭಾರತದಿಂದ ಭೂತಾನಿಗೆ ಸುಮಾರು 45 ಬಿಲಿಯನ್ ರುಪಾಯಿಯಷ್ಟು ನೆರವು ಸಿಗುತ್ತಿದೆ. ಸುಮಾರು 1,400MW ವಿದ್ಯುತ್ ಭಾರತಕ್ಕೆ ರಫ್ತು ಮಾಡುತ್ತಿರುವ ಭೂತನ್ ವಾರ್ಷಿಕವಾಗಿ 8 ಬಿಲಿಯನ್ ರುಪಾಯಿ ಮಾತ್ರ ಗಳಿಸುತ್ತಿದೆ.

ಭೂತಾನಿನಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ

ಭೂತಾನಿನಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ

ಪ್ರಧಾನಿ ಮೋದಿ ಭೇಟಿ ಲಾಭಗಳೇನು?

ಭೂತಾನಿನಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ

ಭೂತಾನಿನಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ

ಪ್ರಧಾನಿ ಮೋದಿ ಭೇಟಿ ಲಾಭಗಳೇನು?

English summary
In his first foreign visit after being sworn-in as the Prime Minister of India, Narendra Modi on Sunday reached Bhutanese capital, Thimpu on a two-day visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X