ಡೊನಾಲ್ಡ್ ಟ್ರಂಪ್ ಹಿಂದಿಕ್ಕಿ ಟಾಪ್ ಸ್ಥಾನಕ್ಕೇರಿದ ಮೋದಿ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 16: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ. ಜಾಗತಿಕ ಮಟ್ಟದ ನಾಯಕರ ಪೈಕಿ, ವಿಡಿಯೋ ಶೇರಿಂಗ್ ತಾಣ ಇನ್ಸ್ಟಾ ಗ್ರಾಮ್ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಕೇವಲ 102 ಪೋಸ್ಟ್ ಗಳನ್ನು ಮಾತ್ರ ಹೊಂದಿರುವ ಮೋದಿ ಅವರ ಖಾತೆಗೆ 7 ಮಿಲಿಯನ್ ಗೂ ಅಧಿಕ ಹಿಂಬಾಲಕರಿದ್ದಾರೆ.

2016ರಲ್ಲಿ ಮೂರನೇ ಸ್ಥಾನದಲ್ಲಿದ್ದ ಪಿಎಂ ಮೋದಿ ಅವರು, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪೋಪ್ ಅವರನ್ನು ಹಿಂದಿಕ್ಕಿರುವ ಮೋದಿ ಅವರು ಅಗ್ರಸ್ಥಾನಕ್ಕೇರಿದ್ದಾರೆ.

PM Narendra Modi has 7 million followers on Instagram

ಡೊನಾಲ್ಡ್ ಟ್ರಂಪ್ ಅವರು 6.3 ಮಿಲಿಯನ್ ಹಾಗೂ ಪೋಪ್ ಫ್ರಾನ್ಸಿಸ್ ಅವರು 3.7 ಮಿಲಿಯನ್ ಹಾಗೂ ಶ್ವೇತಭವನದ ಖಾತೆ 3.4 ಮಿಲಿಯನ್ ಹಿಂಬಾಲಕರನ್ನು ಹೊಂದಿವೆ.

ಸಾರ್ವಜನಿಕ ಸಂಪರ್ಕ ಸಂಸ್ಥೆ ಬುರ್ಸನ್ ಮಾರ್ಸ್ಟೆಲ್ಲರ್ ಸಮೀಕ್ಷೆ ಪ್ರಕಾರ, ಮೋದಿ ಅವರ ಪ್ರತಿ ಪೋಸ್ಟ್ ಮೇಲೆ 2,23,000 ಕಾಮೆಂಟ್ಸ್, ಲೈಕ್ಸ್ ಸಿಗುತ್ತಿವೆ. ಅತಿ ಹೆಚ್ಚು ಚರ್ಚಿಸಲ್ಪಡುವ ಖಾತೆ ಇದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Prime Minister Narendra Modi is the world's most followed leader on leading photo-sharing app Instagram. With a mere 102 posts on the app, Modi has managed to gain nearly 7 million followers.
Please Wait while comments are loading...