ಈ ಬಾರಿ ಸಂಕ್ರಾಂತಿ ರೈತರಿಗೆ ಐಶ್ವರ್ಯವನ್ನು ನೀಡಲಿ : ಮೋದಿ

Written By: Ramesh
Subscribe to Oneindia Kannada

ನವದೆಹಲಿ, ಜನವರಿ. 14 : ದೇಶದಾದ್ಯಂತ ಮಕರ ಸಂಕ್ರಾಂತಿ, ಪೊಂಗಲ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಟ್ವಿಟರ್ ನಲ್ಲಿ ಶುಭಾಶಯಗಳನ್ನು ಕೋರಿರುವ ಪ್ರಧಾನಿ ಮೋದಿಯವರು, ಇಂದು ಭಾರತದಾದ್ಯಂತ ಜನರು ವಿವಿಧ ರೀತಿಯ ಹಬ್ಬಗಳನ್ನು ಆಚರಿಸುತ್ತಿದ್ದು, ಹಬ್ಬದ ಸಂಭ್ರದಲ್ಲಿರುವ ಜನತೆಗೆ ಈ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಹೇಳಿದ್ದಾರೆ.

ಭಾರತದಲ್ಲಿರುವ ವೈವಿಧ್ಯತೆಯೇ ದೊಡ್ಡ ಶಕ್ತಿಯಾಗಿದೆ. ಈ ಬಾರಿಯ ಹಬ್ಬ ಶ್ರಮದಾಯಕ ರೈತರಿಗೆ ಸಂತೋಷ ಹಾಗೂ ಐಶ್ವರ್ಯವನ್ನು ನೀಡಲಿ ಎಂದು ಶುಭಾಶಯ ಕೋರಿದ್ದಾರೆ.

PM Narendra Modi greets nation on Makar Sankranti, Pongal

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು, ಈ ಬಾರಿಯ ಹಬ್ಬ ನಿಮ್ಮೆಲ್ಲರಿಗೂ ಸಂತೋಷ ಹಾಗೂ ಐಶ್ವರ್ಯವನ್ನು ನೀಡಲಿ ಎಂದು ತಿಳಿಸಿದ್ದಾರೆ.

ತಮಿಳುನಾಡಿನ ಸ್ನೇಹಿತರು ಪೊಂಗಲ್ ಹಬ್ಬವನ್ನು ಆಚರಿಸುತ್ತಿದ್ದು, ಈ ಮೂಲಕ ಪೊಂಗಲ್ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಹೇಳಿದ್ದಾರೆ.

ಅಸ್ಸಾಂ ರಾಜ್ಯದಲ್ಲಿ 'ಮಾಘ ಬಿಹು' ಹಬ್ಬವನ್ನು ಆಚರಿಸಲಾಗುತ್ತಿದ್ದು, ಅಸ್ಸಾಂ ಜನತೆಗೆ ಶುಭಾಶಯಗಳನ್ನು ಕೋರುತ್ತಿದ್ದೇನೆ.
ಈ ಎಲ್ಲಾ ಹಬ್ಬಗಳಲ್ಲದೆ, ಭಾರತದ ಇನ್ನಿತರೆ ಪ್ರದೇಶಗಳಲ್ಲೂ ವಿವಿಧ ಹಬ್ಬಗಳನ್ನು ಆಚರಿಸಲಾಗಿತ್ತಿದ್ದು, ಈ ಬಾರಿಯ ಹಬ್ಬ ಎಲ್ಲರ ಜೀವನದಲ್ಲೂ ಬಣ್ಣ ಹಾಗೂ ಸಂತೋಷವನ್ನು ನೀಡಲಿಎಂದು ಹಾರೈಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi on Saturday in twitter wished the nation on the festivals of Makar Sakranti, Pongal, Magh Bihu and Uttarayan.
Please Wait while comments are loading...