ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಸಂಕ್ರಾಂತಿ ಶುಭ ಕೋರಿದ ಪ್ರಧಾನಿ ಮೋದಿ ಟ್ವೀಟ್

By Mahesh
|
Google Oneindia Kannada News

ನವದೆಹಲಿ, ಜ.15: ಪ್ರಧಾನಿ ನರೇಂದ್ರ ಮೋದಿ ಅವರು ಮಕರ ಸಂಕ್ರಾಂತಿ, ಉತ್ತರಾಯಣ, ಪೊಂಗಲ್, ಭೋಗಿ ಹಾಗೂ ಮಾಘ್ ಬಿಹು ಹಬ್ಬ ಆಚರಿಸುವ ಜನತೆಗೆ ಪ್ರತ್ಯೇಕವಾಗಿ ಟ್ವೀಟ್ ಮಾಡಿ ಶುಭ ಕೋರಿದ್ದರು. ಅದರೆ, ಕನ್ನಡ ಭಾಷೆಯಲ್ಲಿ ಟ್ವೀಟ್ ಮಾಡಿಲ್ಲವೆಂಬ ಕೊರಗಿತ್ತು. ಅದರೆ, ಗುರುವಾರ ಪ್ರಧಾನಿ ಅವರು ಕನ್ನಡ ಭಾಷೆಯಲ್ಲೇ ಟ್ವೀಟ್ ಮಾಡಿ ಕನ್ನಡಿಗರ ಹರ್ಷ ಹೆಚ್ಚಿಸಿದ್ದಾರೆ.

ಕರ್ನಾಟಕದ ಸೋದರ, ಸೋದರಿಯರಿಗೆ ಈ ಹಬ್ಬ ಇನ್ನಷ್ಟು ಸಂತಸ ತರಲಿ ಎಂದು ಮೋದಿ ಗುರುವಾರ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ಬುಧವಾರ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಜನತೆಗೆ ಅವರವರ ಭಾಷೆಯಲ್ಲೇ ಶುಭಕೋರಿದ್ದರು. ಆದರೆ, ಕನ್ನಡಿಗರಿಗೆ ಮಾತ್ರ ಸಂಕ್ರಾಂತಿ ಶುಭಾಶಯ ಹೇಳದೆ ಅಪಮಾನ ಮಾಡಿದ್ದಾರೆ ಎಂಬ ಕೊಗು ಕೇಳಿಬಂದಿತ್ತು. [ಹಬ್ಬದ ಸಂಭ್ರಮ ಹೆಚ್ಚಿಸಿದ ಪ್ರಧಾನಿ ಮೋದಿ ಟ್ವೀಟ್ಸ್]

Narendra Modi greets Karnataka on Makar Sankranti

ಆದರೆ, ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಸಚಿವಾಲಯ, ಕರ್ನಾಟಕದ ಮೇಲೂ ಅವರಿಗೆ ವಿಶೇಷ ಪ್ರೀತಿ ಇದೆ. ಸಂಪರ್ಕ ಕೊರತೆಯಿಂದ ಇಂತಹ ಅಚಾತುರ್ಯ ಉಂಟಾಗಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬಾರದು ಎಂದು ಪ್ರಧಾನಿ ಸಚಿವಾಲಯದ ಅಧಿಕಾರಿಗಳು ಮನವಿ ಮಾಡಿದ್ದಾರೆ.


ಪ್ರಧಾನಿ ಕಾರ್ಯಾಲಯದ ವೆಬ್‌ಸೈಟ್‌ನಲ್ಲಿ ದೇಶದ ಎಲ್ಲಾ ರಾಜ್ಯಗಳ ಭಾಷೆಗಳಲ್ಲಿ ಶುಭಕೋರಿರುವುದು ಪ್ರಕಟವಾಗಿತ್ತು. ಹಿಂದಿ, ಇಂಗ್ಲಿಷ್, ಗುಜರಾತಿ, ಮಲೆಯಾಳಿ, ಕೊಂಕಣಿ, ಮರಾಠಿ, ತೆಲುಗು, ತಮಿಳು, ಅಸ್ಸಾಂ, ಬೆಂಗಾಲಿ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಶುಭ ಹಾರೈಸಿದ್ದರು.

English summary
Prime Minister Narendra Modi Thursday greeted the people of Karnataka on the occasion of Makar Sankranti, saying the festival may bring "abundant happiness and prosperity in everyone's lives".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X