ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ವಿದೇಶ ಪ್ರವಾಸದ ವೆಚ್ಚ: ಮೂರು ಕಡೆ ಮೂರು ವಿಭಿನ್ನ ಉತ್ತರ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರಯಾಣ ಸಾಕಷ್ಟು ಬಾರಿ ಚರ್ಚೆ, ವಿವಾದಕ್ಕೆ ಕಾರಣವಾಗಿದೆ. ಭಾರತದೊಂದಿಗೆ ಅಂತಾರಾಷ್ಟ್ರೀಯ ಸಂಬಂಧವನ್ನು ವೃದ್ಧಿಸುವ ಸಲುವಾಗಿ ಮೋದಿ ವಿದೇಶ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಸಮರ್ಥಿಸಿಕೊಳ್ಳಲಾಗಿದೆ.

ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಇಷ್ಟೆಲ್ಲ ಬಾರಿ ವಿದೇಶ ಪ್ರವಾಸಗಳನ್ನು ಮಾಡಿದ್ದರೂ ನೆರೆಯ ದೇಶಗಳೊಂದಿಗಿನ ಭಾರತದ ಸಂಬಂಧ ಹಳಸುತ್ತಿದೆ ಎಂದು ವಿರೋಧಪಕ್ಷಗಳು ಈ ಪ್ರವಾಸಗಳ ಔಚಿತ್ಯವನ್ನು ಪ್ರಶ್ನಿಸುತ್ತಿವೆ. ವಿರೋಧಪಕ್ಷಗಳು ಪ್ರಧಾನಿಯ ವಿದೇಶ ಸುತ್ತಾಟವನ್ನು ಪ್ರಶ್ನಿಸಲು ಅನೇಕ ಕಾರಣಗಳಿವೆ. ಮುಖ್ಯವಾಗಿ ಪ್ರಧಾನಿಯ ಪ್ರತಿ ಪ್ರವಾಸವೂ ಕೋಟ್ಯಂತರ ರೂಪಾಯಿ ವೆಚ್ಚಕ್ಕೆ ಕಾರಣವಾಗುತ್ತಿದೆ.

5 ವರ್ಷದಲ್ಲಿ ವಿದೇಶ ಪ್ರವಾಸಕ್ಕಾಗಿ ಮೋದಿ ಖರ್ಚು ಮಾಡಿದ್ದು 446 ಕೋಟಿ5 ವರ್ಷದಲ್ಲಿ ವಿದೇಶ ಪ್ರವಾಸಕ್ಕಾಗಿ ಮೋದಿ ಖರ್ಚು ಮಾಡಿದ್ದು 446 ಕೋಟಿ

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳು ಮತ್ತು ಅವುಗಳ ವೆಚ್ಚದ ಕುರಿತು ವಿವರ ನೀಡುವಂತೆ ವಿಪಕ್ಷ ಸದಸ್ಯರು ವಿದೇಶಾಂಗ ಸಚಿವಾಲಯವನ್ನು ಅನೇಕ ಬಾರಿ ಕೇಳಿದ್ದಾರೆ. 2015ರಿಂದ ಇಲ್ಲಿಯವರೆಗೆ ಪ್ರಧಾನಿ ಕೈಗೊಂಡ ವಿದೇಶ ಪ್ರವಾಸಗಳ ವಿವರ ಹಾಗೂ ಅವುಗಳ ವೆಚ್ಚದ ಮಾಹಿತಿ ನೀಡುವಂತೆ ಕಾಂಗ್ರೆಸ್ ಸಂಸದೆ ಫೌಜಿಯಾ ಖಾನ್ ಇತ್ತೀಚೆಗೆ ಕೇಳಿದ್ದರು. ಮುಂದೆ ಓದಿ.

ಪ್ರಧಾನಿ ಮೋದಿ ಇನ್ನು ಮುಂದೆ ವಿದೇಶ ಪ್ರವಾಸ ಮಾಡೊಲ್ಲ!ಪ್ರಧಾನಿ ಮೋದಿ ಇನ್ನು ಮುಂದೆ ವಿದೇಶ ಪ್ರವಾಸ ಮಾಡೊಲ್ಲ!

58 ದೇಶಗಳಿಗೆ ಭೇಟಿ

58 ದೇಶಗಳಿಗೆ ಭೇಟಿ

ಈ ಬಗ್ಗೆ ಮಂಗಳವಾರ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, 2015ರಿಂದ ಇದುವರೆಗೂ ನರೇಂದ್ರ ಮೋದಿ ಅವರು 58 ದೇಶಗಳಿಗೆ ಭೇಟಿ ನೀಡಿದ್ದು, 517.82 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಖಾತೆ ಸಚಿವ ವಿ. ಮುರಳೀಧರನ್ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

ಆದರೆ, ವಿ. ಮುರಳೀಧರನ್ ಅವರು ಇದೇ ವರ್ಷ ಲೋಕಸಭೆಯಲ್ಲಿ ಇದೇ ರೀತಿಯ ಪ್ರಶ್ನೆಗೆ ವಿಭಿನ್ನ ಉತ್ತರ ನೀಡಿದ್ದರು. ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸದ ವೆಚ್ಚದ ಮೊತ್ತ ಕೂಡ ವಿಭಿನ್ನವಾಗಿತ್ತು.

ವಾರ್ಷಿಕ ವೆಚ್ಚದ ಮಾಹಿತಿ

ವಾರ್ಷಿಕ ವೆಚ್ಚದ ಮಾಹಿತಿ

ಮಾರ್ಚ್‌ನಲ್ಲಿ ನಡೆದ ಸಂಸತ್‌ನ ಬಜೆಟ್ ಅಧಿವೇಶನದಲ್ಲಿ ಕಳೆದ ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ವಿದೇಶ ಪ್ರಯಾಣದಿಂದ ಉಂಟಾದ ವೆಚ್ಚದ ವಿವರವಾದ ಮಾಹಿತಿ ನೀಡಿದ್ದರು. 2015-16ರಲ್ಲಿ 121.85 ಕೋಟಿ ರೂ., 2016-17ರಲ್ಲಿ 78.52 ಕೋಟಿ ರೂ., 2017-18ರಲ್ಲಿ 99 ಕೋಟಿ ರೂ., 2018-19ರಲ್ಲಿ 100.02 ಕೋಟಿ ರೂ ಹಾಗೂ 2019-20ರಲ್ಲಿ 46.23 ಕೋಟಿ ರೂ ಸೇರಿದಂತೆ ಒಟ್ಟು 446.52 ಕೋಟಿ ವ್ಯಯ ಮಾಡಲಾಗಿದೆ ಎಂದು ತಿಳಿಸಿದ್ದರು.

125.30 ಕೋಟಿ ರೂ ಹೆಚ್ಚುವರಿ ವೆಚ್ಚ

125.30 ಕೋಟಿ ರೂ ಹೆಚ್ಚುವರಿ ವೆಚ್ಚ

ಪಿಎಂ ವೆಬ್‌ಸೈಟ್ ಪ್ರಕಾರ, ಈ ವರ್ಷ ಪ್ರಧಾನಿ ಯಾವುದೇ ವಿದೇಶ ಪ್ರವಾಸ ಕೈಗೊಂಡಿಲ್ಲ. ಆದರೆ, ಮುಂಗಾರು ಅಧಿವೇಶನದಲ್ಲಿ ವಿದೇಶಾಂಗ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಮೋದಿ ಅವರ ಪ್ರವಾಸ ವೆಚ್ಚ 571.82 ಕೋಟಿ ರೂ. ಅಂದರೆ 125.30 ಕೋಟಿ ಹೆಚ್ಚಾಗಿದೆ.

2019ರ ಅಂತ್ಯದ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಪ್ರವಾಸಗಳ ಕೆಲವು ಬಿಲ್‌ಗಳು ಲಾಕ್‌ಡೌನ್ ಅವಧಿಯ ಕಾರಣದಿಂದ ತಡವಾಗಿ ಕೈಸೇರಿರಬಹುದು ಎಂದು ಹೇಳಲಾಗುತ್ತಿದೆ.

2018ರಲ್ಲಿ 2021 ಕೋಟಿ ರೂ.

2018ರಲ್ಲಿ 2021 ಕೋಟಿ ರೂ.

ಆದರೆ, ವಿದೇಶಾಂಗ ಸಚಿವಾಲಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ ಮತ್ತೊಂದು ಮಾಹಿತಿಗೂ ಈ ಮಾಹಿತಿಗೂ ಸಾಕಷ್ಟು ವ್ಯತ್ಯಾಸವಿದೆ. 2014ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಕ್ಕೆ ಒಟ್ಟು 2021 ಕೋಟಿ ರೂ ವೆಚ್ಚವಾಗಿದೆ ಎಂದು 2018ರಲ್ಲಿ ಆಗಿನ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ,ಕೆ. ಸಿಂಗ್ ರಾಜ್ಯಸಭೆಗೆ ಮಾಹಿತಿ ನೀಡಿದ್ದರು.

ನಿರ್ವಹಣೆಗೆ 1,583.18 ಕೋಟಿ ರೂ.

ನಿರ್ವಹಣೆಗೆ 1,583.18 ಕೋಟಿ ರೂ.

ಪ್ರಧಾನಿಯ ವಿಮಾನದ ನಿರ್ವಹಣೆಗೆ 1,583.18 ಕೋಟಿ ರೂ. ವೆಚ್ಚ ಮಾಡಲಾಗಿತ್ತು. 2014ರ ಜೂನ್ 15ರಿಂದ 2018ರ ಡಿ. 3ರವರೆಗೆ ಚಾರ್ಟರ್ಡ್ ವಿಮಾನಗಳಿಗೆ ಒಟ್ಟು 429.25 ಕೋಟಿ ರೂ. ವೆಚ್ಚ ಮಾಡಲಾಗಿದೆ. ಹೆಚ್ಚುವರಿಯಾಗಿ 9.11 ಕೋಟಿ ರೂ ಮೊತ್ತವನ್ನು ಹಾಟ್ಲೈನ್ ವೆಚ್ಚಕ್ಕೆ ವಿನಿಯೋಗಿಸಲಾಗಿದೆ ಎಂದು ತಿಳಿಸಿದ್ದರು.

ಬ್ರೆಜಿಲ್ ಪ್ರವಾಸ ಅಂತಿಮ

ಬ್ರೆಜಿಲ್ ಪ್ರವಾಸ ಅಂತಿಮ

55 ದೇಶಗಳ ಪೈಕಿ 48 ದೇಶಗಳಿಗೆ ಅವರು ಆ ಸಮಯದಲ್ಲಿ ಭೇಟಿ ನೀಡಿದ್ದರು. ನಂತರ ಇಲ್ಲಿಯವರೆಗೂ ಅವರು 11 ವಿದೇಶ ಪ್ರಯಾಣಗಳನ್ನು ನಡೆಸಿದ್ದಾರೆ. ಪಿಎಂ ಇಂಡಿಯಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಬ್ರೆಜಿಲ್‌ಗೆ 2019ರ ನವೆಂಬರ್‌ನಲ್ಲಿ ಕೈಗೊಂಡ ಅವರ ಕೊನೆಯ ಪ್ರವಾಸವಾಗಿತ್ತು. ಏಪ್ರಿಲ್ 8ರಂದು ಕೊನೆಯ ಬಾರಿ ಅಪ್‌ಡೇಟ್ ಮಾಡಿದ್ದ ಮಾಹಿತಿಯಲ್ಲಿ ಬ್ರೆಜಿಲ್ ಪ್ರವಾಸದ ಬಿಲ್‌ಗಳು ಇನ್ನೂ ತಲುಪಿಲ್ಲ ಎಂದು ಹೇಳಲಾಗಿತ್ತು.

English summary
Ministry of Home Affairs and PM India website gives 3 different replies regarding PM Narendra Modi's foreign tours and expenses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X