ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋ ಬೈಡನ್ ಜತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮಾತುಕತೆ

|
Google Oneindia Kannada News

ನವದೆಹಲಿ, ನವೆಂಬರ್ 18: ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೂರವಾಣಿ ಸಂಭಾಷಣೆ ನಡೆಸಿದರು. ಜೋ ಬೈಡನ್ ಮತ್ತು ಅವರ ಸಹೋದ್ಯೋಗಿ ಕಮಲಾ ಹ್ಯಾರಿಸ್ ಅಮೆರಿಕ ಚುನಾವಣೆಯಲ್ಲಿನ ಎಲೆಕ್ಟೊರಲ್ ಕಾಲೇಜ್ ಮತಗಳಲ್ಲಿ ಬಹುಮತದ ಗಡಿಯನ್ನು ದಾಟಿ ಆಯ್ಕೆಯಾದ ಬಳಿಕ ಜಗತ್ತಿನ ಎರಡು ಪ್ರಮುಖ ದೇಶಗಳ ನಾಯಕರು ಮಾತುಕತೆ ನಡೆಸಿರುವುದು ಇದು ಮೊದಲ ಬಾರಿ.

'ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅವರನ್ನು ಅಭಿನಂದಿಸಿದ್ದೇನೆ. ಭಾರತ-ಅಮೆರಿಕ ಕಾರ್ಯತಂತ್ರ ಸಹಭಾಗಿತ್ವದೆಡೆಗಿನ ನಮಮ ದೃಢ ಬದ್ಧತೆಯನ್ನು ಈ ಸಂದರ್ಭದಲ್ಲಿ ಪುನರುಚ್ಚರಿಸಲಾಯಿತು. ಜತೆಗೆ ಕೋವಿಡ್ 19 ಪಿಡುಗು, ಹವಾಮಾನ ವೈಪರೀತ್ಯ ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಸಹಕಾರ ಸೇರಿದಂತೆ ನಮ್ಮ ಆದ್ಯತೆಗಳ ಹಂಚಿಕೆ ಮತ್ತು ಸವಾಲುಗಳ ಬಗ್ಗೆ ಚರ್ಚಿಸಿದೆವು' ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

PM Narendra Modi First Phone Call To US President Elect Joe Biden

'ಉಪಾಧ್ಯಕ್ಷೆಯಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್ ಅವರಿಗೂ ಈ ವೇಳೆ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ. ಅವರ ಸಾಧನೆಯು ಭಾರತ-ಅಮೆರಿಕ ಸಂಬಂಧವನ್ನು ಬಲಪಡಿಸಲು ಬೃಹತ್ ಮೂಲವಾಗಿರುವ ಭಾರತ-ಅಮೆರಿಕನ್ ಸಮುದಾಯದ ಸದಸ್ಯರಿಗೆ ದೊಡ್ಡ ಹೆಮ್ಮೆ ಮತ್ತು ಸ್ಪೂರ್ತಿದಾಯಕ' ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಬರಾಕ್ ಒಬಾಮ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬೈಡನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ 2014ರ ಸೆ. 30ರಂದು ಕೊನೆಯ ಸಲ ಭೇಟಿಯಾಗಿದ್ದರು.

English summary
PM Narendra Modi discussed Indo- Pacific cooperation, climate change and Covid 19 pandemic in first phone call to US president elect Joe Biden.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X