ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರು, ಬಡವರು, ಕಾರ್ಮಿಕರು ದೇಶ ಕಟ್ಟಿದ್ದಾರೆ: ಮೋದಿ

|
Google Oneindia Kannada News

ನವದೆಹಲಿ, ನವೆಂಬರ್, 27: ಸಂಸತ್ ನ ಚಳಿಗಾಲ ಅಧಿವೇಶನ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗುವ ಸಂಭವ ಕಾಣುತ್ತಿದೆ. ಶುಕ್ರವಾರ ಭಾರತದ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಭಾರತದ ಸಂವಿಧಾನ ಏಕತೆಯ ದಾಖಲೆ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ತಾವು ವಿಷ ಕುಡಿದು ದೇಶದ ಜನತೆಗೆ ಅಮೃತ ನೀಡಿದರು. ದೇಶದ ಯಾವುದೇ ಭಾಗ ಹಿಂದುಳಿಯಬಾರದೆಂಬುದೇ ಸಂವಿಧಾನದ ಆಶಯ ಎಂದು ನರೇಂದ್ರ ಮೋದಿ ಹೇಳಿದರು.

india

ಸಂಸತ್ ನಲ್ಲಿ ಶುಕ್ರವಾರದ ಮೋದಿ ಭಾಷಣದ ಹೈ ಲೈಟ್ಸ್
* ಸಂವಿಧಾನಕ್ಕೆ ಸಂಬಂಧಿಸಿದ ಚರ್ಚೆ ನನಗೆ ಅಥವಾ ನಿಮಗೆ ಸಂಬಂಧಿಸಿದಲ್ಲ, ಇದು ನಮ್ಮೆಲ್ಲರಿಗೂ ಸಂಬಂಧಿಸಿದ ಚರ್ಚೆ.
* ರೈತರು, ಬಡವರು, ಕಾರ್ಮಿಕರು ದೇಶವನ್ನು ಕಟ್ಟಿದ್ದಾರೆ.
* ದೇಶದ ಸಮಸ್ತ ನಾಗರಿಕರಿಗೆ ಸಂವಿಧಾನದ ಶಕ್ತಿಯನ್ನು ಮತ್ತೊಮ್ಮೆ ತಿಳಿಸಿಕೊಡಬೇಕಾಗಿದೆ.
* ನವೆಂಬರ್ 26ನ್ನು ಸಂವಿಧಾನದ ದಿನವನ್ನಾಗಿ ಆಚರಣೆಗೆ ತೀರ್ಮಾನ ಮಾಡಿ ಆಚರಿಸಿಯೂ ಆಗಿದೆ. ಈ ಮೂಲಕ ಜನವರಿ 26ರ ಗಣರಾಜ್ಯೋತ್ಸವಕ್ಕೆ ಯಾವ ಭಂಗ ತರುವ ಉದ್ದೇಶವಿಲ್ಲ.
* ದೇಶದ ಎಲ್ಲ ಪ್ರಧಾನಿಗಳು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರೆಲ್ಲರಿಗೂ ನನ್ನ ಅಭಿನಂದನೆ.
* ಇದು ರಾಜ ಮಹಾರಾಜರ ದೇಶವಲ್ಲ, ಜನರ ದೇಶ.
* ಎಲ್ಲ ಭಾಷೆ, ಪಂಥದ ಜನರು ಸಮಬಾಳ್ವೆ ನಡೆಸುತ್ತಾ ಬಂದಿದ್ದಾರೆ. ಇದು ಜಗತ್ತಿಗೆ ಮಾದರಿಯಾಗಿದೆ.
* ದೇಶದ ಪ್ರತಿಯೊಬ್ಬನು ಎದೆಯುಬ್ಬಿಸಿ ನಡೆಯಬಹುದಾದ ಯಾವೂದಾದರೂ ಗ್ರಂಥವಿದ್ದರೇ ಅದು ಭಾರತದ ಸಂವಿಧಾನ.

English summary
New Delhi: During a special discussion on the Constitution in the Lok Sabha, Prime Minister Narendra Modi said that it is the demand of time that we make people aware of the sanctity and strength of our Constitution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X