ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಭೀತಿ ನಡುವೆ ಸಿಬಿಎಸ್‌ಇ ಬೋರ್ಡ್ ಪರೀಕ್ಷೆ: ಪ್ರಧಾನಿ ಮೋದಿ ಸಭೆ ಇಂದು

|
Google Oneindia Kannada News

ನವದೆಹಲಿ, ಏಪ್ರಿಲ್ 14: ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಎಂಬ ಒತ್ತಾಯದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳ ಕುರಿತು ಚರ್ಚಿಸಲು ಸಭೆ ಕರೆದಿದ್ದಾರೆ. ಮೇ ತಿಂಗಳಲ್ಲಿ ಸಿಬಿಎಸ್‌ಇ ಪರೀಕ್ಷೆಗಳು ನಡೆಯಬೇಕಿತ್ತು, ದೇಶದಲ್ಲಿನ ಕೋವಿಡ್ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ.

ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಇತರೆ ಹಿರಿಯ ಅಧಿಕಾರಿಗಳ ಜತೆ ಮೋದಿ ಅವರು ಬುಧವಾರ ಮಧ್ಯಾಹ್ನ ಸಮಾಲೋಚನೆ ನಡೆಸಲಿದ್ದಾರೆ.

ಸಿಬಿಎಸ್‌ಸಿ ಪರೀಕ್ಷೆ ವಿರುದ್ಧ ಧ್ವನಿ ಎತ್ತಿದ ಪ್ರಿಯಾಂಕಾ ಗಾಂಧಿ ಸಿಬಿಎಸ್‌ಸಿ ಪರೀಕ್ಷೆ ವಿರುದ್ಧ ಧ್ವನಿ ಎತ್ತಿದ ಪ್ರಿಯಾಂಕಾ ಗಾಂಧಿ

10 ಮತ್ತು 12ನೆಯ ತರಗತಿ ಬೋರ್ಡ್ ಪರೀಕ್ಷೆಗಳು ಮೇ 4ರಿಂದ ಪ್ರಾರಂಭವಾಗಲಿವೆ, 10ನೇ ತರಗತಿ ಪರೀಕ್ಷೆಗಳು ಜೂನ್ 7ರಂದು ಮತ್ತು 12ನೆಯ ತರಗತಿ ಪರೀಕ್ಷೆಗಳು ಜೂನ್ 11ರಂದು ಮುಕ್ತಾಯಗೊಳ್ಳಲಿವೆ. ಈ ಪರೀಕ್ಷೆಗಳು ಖುದ್ದು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಬರೆಯುವ ಸ್ವರೂಪದ್ದಾಗಿವೆ. ಫೆಬ್ರವರಿಯಲ್ಲಿ ಈ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆಗ ದೇಶದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 15 ಸಾವಿರಕ್ಕಿಂತ ಕಡಿಮೆ ಇತ್ತು. ಆದರೆ ಈಗ ಪ್ರತಿ ದಿನ ಒಂದೂವರೆ ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದು, ಎರಡು ಲಕ್ಷ ತಲುಪುವ ಸಾಧ್ಯತೆ ಇದೆ.

PM Narendra Modi Calls Meeting Amid Demands To Cancel CBSE Meeting

ಪ್ರತಿ ರಾಜ್ಯಗಳಲ್ಲಿಯೂ ಕೋವಿಡ್ ಸಂಖ್ಯೆ ಹೆಚ್ಚುತ್ತಿರುವುದರಿಂದ ಪರೀಕ್ಷಾ ಕೇಂದ್ರಗಳು ಕೋವಿಡ್ ಹಾಟ್‌ಸ್ಪಾಟ್‌ಗಳಾಗುವ ಭೀತಿ ಮೂಡಿದೆ. ಹೀಗಾಗಿ ಪರೀಕ್ಷೆಗಳನ್ನು ಮುಂದೂಡುವ ಅಥವಾ ಆನ್‌ಲೈನ್ ಮಾದರಿಯಲ್ಲಿ ನಡೆಸುವ ಬಗ್ಗೆ ಬೇಡಿಕೆಗಳನ್ನು ಇರಿಸಲಾಗಿದೆ.

ಕೊರೊನಾದ 2ನೇ ಅಲೆ ತುಂಬಾ ಅಪಾಯಕಾರಿ: ಅರವಿಂದ್ ಕೇಜ್ರಿವಾಲ್ಕೊರೊನಾದ 2ನೇ ಅಲೆ ತುಂಬಾ ಅಪಾಯಕಾರಿ: ಅರವಿಂದ್ ಕೇಜ್ರಿವಾಲ್

ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಂತಾದವರು ಪರೀಕ್ಷೆ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಪೋಷಕರ ಸಂಘಟನೆಯೊಂದು ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರೆ ಬರೆದಿದೆ.

English summary
PM Narendra Modi has called a meeting to discuss the CBSE board exam amid demands to cancel them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X