ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಪರಿಸ್ಥಿತಿ ಚರ್ಚೆ: ಡಿ. 4ರಂದು ಪ್ರಧಾನಿ ಮೋದಿ ಸರ್ವಪಕ್ಷ ಸಭೆ

|
Google Oneindia Kannada News

ನವದೆಹಲಿ, ನವೆಂಬರ್ 30: ದೇಶದಲ್ಲಿನ ಕೊರೊನಾ ವೈರಸ್ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಡಿ. 4ರಂದು ಸರ್ವಪಕ್ಷ ಸಭೆ ಕರೆಯುವ ನಿರೀಕ್ಷೆಯಿದೆ. ತಳಮಟ್ಟದ ಪರಿಸ್ಥಿತಿಯ ಮೌಲ್ಯಮಾಪನಕ್ಕಾಗಿ ಮೋದಿ ಅವರು ಎಲ್ಲ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಸಭೆಯು ಖುದ್ದು ಮುಖಾಮುಖಿ ಚರ್ಚೆಯೇ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

ನವೆಂಬರ್ 24ರಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಪ್ರಧಾನಿ ಮೋದಿ ಅವರು ಸಮಾಲೋಚನೆ ನಡೆಸಿದ್ದರು. ಈಗ ಅದರ ಬಳಿಕ ಪಕ್ಷಗಳ ನಾಯಕರ ಜತೆಗೆ ಸಮಾಲೋಚನೆಗೆ ಮುಂದಾಗಿದ್ದಾರೆ. ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ಸಂಘಟಿತ ಹೋರಾಟದಿಂದ ನಿಯಂತ್ರಿಸುವುದು ಮತ್ತು ಪಾಸಿಟಿವ್ ಪ್ರಕರಣಗಳ ಪ್ರಮಾಣವನ್ನು ಶೇ 5ಕ್ಕಿಂತ ಕಡಿಮೆಗೆ ತರುವುದು ಅಗತ್ಯವಿದೆ ಎಂದು ಮೋದಿ ಸಭೆಯಲ್ಲಿ ಹೇಳಿದ್ದರು.

ಕೊವಿಡ್-19 ಲಸಿಕೆ ಸಂಶೋಧನಾ ತಂಡಗಳೊಂದಿಗೆ ಪ್ರಧಾನಿ ಚರ್ಚೆಕೊವಿಡ್-19 ಲಸಿಕೆ ಸಂಶೋಧನಾ ತಂಡಗಳೊಂದಿಗೆ ಪ್ರಧಾನಿ ಚರ್ಚೆ

ಸರ್ವಪಕ್ಷಗಳ ಸಭೆಯಲ್ಲಿ ಮೋದಿ ಅವರು ಕೋವಿಡ್ ಲಸಿಕೆಯ ಉತ್ಪಾದನೆ, ಹಂಚಿಕೆ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರದ ಸಿದ್ಧತೆ ವಿಚಾರವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ. ಈಗಾಗಲೇ ಮೋದಿ ಅವರು ಮೂರು ಪ್ರಮುಖ ಲಸಿಕೆ ತಯಾರಕ ಕಂಪೆನಿಗಳ ಮುಖ್ಯಸ್ಥರ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿರುವುದಲ್ಲದೆ, ಮೂರು ಘಟಕಗಳಿಗೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

PM Narendra Modi Calls All Party Meeting On December 4 To Discuss Covid Situation

ಗುಜರಾತ್‌ನಲ್ಲಿ ಶೈತ್ಯೀಕರಿಸಿದ ಲಸಿಕೆ ಸಾಗಾಣಿಕೆ ಘಟಕಕ್ಕೆ ಮೋದಿ ಅನುಮೋದನೆಗುಜರಾತ್‌ನಲ್ಲಿ ಶೈತ್ಯೀಕರಿಸಿದ ಲಸಿಕೆ ಸಾಗಾಣಿಕೆ ಘಟಕಕ್ಕೆ ಮೋದಿ ಅನುಮೋದನೆ

Recommended Video

Amit Shah: ಲೋಕಲ್ ಎಲೆಕ್ಷನ್ ಪ್ರಚಾರದಲ್ಲಿ BJP ನ್ಯಾಷನಲ್ ಸ್ಟಾರ್ಸ್ | GHMC Elections 2020 | Oneindia Kannada

ಕೊರೊನಾ ವೈರಸ್ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಮೋದಿ ಅವರು ಏಪ್ರಿಲ್‌ನಲ್ಲಿ ಕೊನೆಯ ಬಾರಿ ಸರ್ವಪಕ್ಷ ಸಭೆ ನಡೆಸಿದ್ದರು. ಮಾರ್ಚ್‌ನಲ್ಲಿ ಜಾರಿಗೆ ತಂದಿದ್ದ 21 ದಿನಗಳ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಚರ್ಚಿಸಿದ್ದರು.

English summary
Prime Minister Narendra Modi likely to chair all party meeting on Friday to discuss Covid-19 situation in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X