ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಜಪಾನ್‌ ಪ್ರವಾಸ ಮುಗಿಸಿ ದೆಹಲಿಗೆ ಮೋದಿ ವಾಪಸ್

|
Google Oneindia Kannada News

ನವದೆಹಲಿ, ಮೇ 25; ಜಪಾನ್‌ನ ಟೋಕಿಯೋದಲ್ಲಿ ನಡೆದ ಕ್ವಾಡ್ ನಾಯಕರ ಶೃಂಗಸಭೆ 2022 ಮುಗಿಸಿ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ವಾಪಸ್ ಆಗಿದ್ದಾರೆ. ಕ್ವಾಡ್ ಶೃಂಗಸಭೆಯಲ್ಲಿ ಪಾಳ್ಗೊಳ್ಳಲು ಮೋದಿ ಜಪಾನ್ ಪ್ರವಾಸ ಕೈಗೊಂಡಿದ್ದರು.

ಬುಧವಾರ ಮುಂಜಾನೆ ದೆಹಲಿಗೆ ನರೇಂದ್ರ ಮೋದಿ ಆಗಮಿಸಿದರು. ಮಂಗಳವಾರ ಟೋಕಿಯೋದಲ್ಲಿ ಕ್ವಾಡ್ ನಾಯಕರ ಶೃಂಗಸಭೆ ನಡೆಯಿತು. ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು.

ಭಾರತ ಒಳಗೊಂಡಿರುವ ಕ್ವಾಡ್ ಗುಂಪು ಏನು? ಚೀನಾಗೆ ಕಣ್ಣುರಿ ಯಾಕೆ? ಭಾರತ ಒಳಗೊಂಡಿರುವ ಕ್ವಾಡ್ ಗುಂಪು ಏನು? ಚೀನಾಗೆ ಕಣ್ಣುರಿ ಯಾಕೆ?

ಸೋಮವಾರ ಟೋಕಿಯೋಕ್ಕೆ ತೆರಳಿದ್ದ ಪ್ರಧಾನಿ ಮೋದಿಗೆ ಭಾರತೀಯರು ಅದ್ದೂರಿ ಸ್ವಾಗತ ಕೋರಿದ್ದರು. ಅಂದು ಸಂಜೆ ಅವರು ಟೋಕಿಯೋದಲ್ಲಿರುವ ಅನಿವಾಸಿ ಭಾರತೀಯರ ಜೊತೆ ಸಂವಾದ ನಡೆಸಿದ್ದರು, ಅವರನ್ನು ಉದ್ದೇಶಿಸಿ ಮಾತನಾಡಿದ್ದರು.

4ನೇ ಕ್ವಾಡ್ ಶೃಂಗಸಭೆ; ನಾಯಕರ ಭಾಷಣದ ಪ್ರಮುಖ ಅಂಶಗಳು 4ನೇ ಕ್ವಾಡ್ ಶೃಂಗಸಭೆ; ನಾಯಕರ ಭಾಷಣದ ಪ್ರಮುಖ ಅಂಶಗಳು

PM Narendra Modi Arrives From Tokyo

ಆಸ್ಟ್ರೇಲಿಯಾ ಪ್ರಧಾನಿಗೆ ಆಹ್ವಾನ; ಟೋಕಿಯೋದಲ್ಲಿ ಕ್ವಾಡ್ ಶೃಂಗ ಸಭೆ ಪೂರ್ಣಗೊಂಡ ಬಳಿಕ ನರೇಂದ್ರ ಮೋದಿ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಅಂಥೋನಿ ಅಲ್ಬನೀಸ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು ಮತ್ತು ಮೇ 21ರಂದು ನಡೆದ ಚುನಾವಣೆಯಲ್ಲಿ ಜಯಗಳಿಸಿದುದಕ್ಕಾಗಿ ಅವರನ್ನು ಅಭಿನಂದಿಸಿದರು.

ಮೈಸೂರಿಗೆ ಮೋದಿ ಭೇಟಿ; ಕಾರ್ಯಕ್ರಮ ಯಶಸ್ಸಿಗೆ ಸಮಿತಿ ರಚನೆ ಮೈಸೂರಿಗೆ ಮೋದಿ ಭೇಟಿ; ಕಾರ್ಯಕ್ರಮ ಯಶಸ್ಸಿಗೆ ಸಮಿತಿ ರಚನೆ

ದ್ವಿಪಕ್ಷೀಯ ಮಾತುಕತೆ ವೇಳೆ ಉಭಯ ನಾಯಕರು ಹೂಡಿಕೆ, ರಕ್ಷಣಾ ಉತ್ಪಾದನೆ, ನವೀಕೃತ ಇಂಧನ, ಶಿಕ್ಷಣ, ವಿಜ್ಞಾನ, ಮತ್ತು ತಂತ್ರಜ್ಞಾನ, ಕೃಷಿ ಸಂಶೋಧನೆ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಪ್ರಧಾನಿ ಮೋದಿ ಅಂಥೋನಿ ಅಲ್ಬನೀಸ್‌ರನ್ನು ಭಾರತಕ್ಕೆ ಆಹ್ವಾನಿಸಿದರು.

ಕ್ವಾಡ್ ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, "ಅತ್ಯಲ್ಪ ಸಮಯದಲ್ಲಿ, ವಿಶ್ವ ವೇದಿಕೆಯಲ್ಲಿ ಕ್ವಾಡ್ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇಂದು ಕ್ವಾಡ್ ನ ವ್ಯಾಪ್ತಿಯು ವಿಸ್ತಾರವಾಗಿದೆ ಮತ್ತು ಸ್ವರೂಪವು ಪರಿಣಾಮಕಾರಿಯಾಗಿದೆ. ನಮ್ಮ ಪರಸ್ಪರರ ನಂಬಿಕೆ, ನಮ್ಮ ಸಂಕಲ್ಪ ಪ್ರಜಾಪ್ರಭುತ್ವ ಅಂಗಗಳಿಗೆ ಹೊಸ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತಿದೆ" ಎಂದು ಹೇಳಿದ್ದರು.

"ಕ್ವಾಡ್ ಮಟ್ಟದಲ್ಲಿ ನಮ್ಮ ಪರಸ್ಪರ ಸಹಕಾರವು ಉಚಿತ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಉತ್ತೇಜನ ನೀಡುತ್ತಿದೆ, ಇದು ನಮ್ಮೆಲ್ಲರ ಸಾಮಾನ್ಯ ಉದ್ದೇಶವೂ ಆಗಿದೆ. ಕೋವಿಡ್-19 ನಂತಹ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ, ಲಸಿಕೆ-ವಿತರಣೆ, ಆರ್ಥಿಕ ಸಹಕಾರದಂತಹ ಹಲವು ಕ್ಷೇತ್ರಗಳಲ್ಲಿ ನಾವು ಸಮನ್ವಯವನ್ನು ಹೆಚ್ಚಿಸಿದ್ದೇವೆ. ಇದು ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುತ್ತಿದೆ" ಎಂದು ತಿಳಿಸಿದ್ದರು.

English summary
Prime Minister Narendra Modi arrives from Tokyo after participating in Quad Summit 2022 as part of his two-day tour in Japan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X