ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ಮನೆಗೂ ವಿದ್ಯುತ್ ಸಂಪರ್ಕ, ಸೌಭಾಗ್ಯ ಯೋಜನೆಯ ಗುರಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25 : ಪ್ರಧಾನ ಮಂತ್ರಿ ನರೇಂದ್ರ ಮೋದಿ 'ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ)' ಘೋಷಣೆ ಮಾಡಿದರು. ದೇಶದ ಪ್ರತಿ ಮನೆಗೂ ವಿದ್ಯುತ್ ಸೌಲಭ್ಯ ಕಲ್ಪಿಸುವುದು ಯೋಜನೆಯ ಗುರಿಯಾಗಿದೆ.

ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಪಂಡಿತ್ ದೀನ್ ದಯಾಳ್ ಉರ್ಜಾ ಭವನವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು 'ಪ್ರಧಾನ್ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ)' ಘೋಷಣೆ ಮಾಡಿದರು.

ಪ್ರಧಾನ ಮಂತ್ರಿ ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?

 PM Narendra Modi announces Pradhan Mantri Sahaj Bijli Har Ghar Yojana

ಯೋಜನೆ ಅನ್ವಯ ಪ್ರತಿಯೊಂದು ಮನೆಗೆ 5 ಎಲ್ಇಡಿ ಬಲ್ಪ್, ಫ್ಯಾನು, ಬ್ಯಾಟರಿ ವಿತರಣೆ ಮಾಡಲಾಗುತ್ತದೆ. 2019ರ ಮಾರ್ಚ್ 31ರೊಳಗೆ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

ಸೌಭಾಗ್ಯ 16,320ರೂ. ಮೊತ್ತದ ಯೋಜನೆಯಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ 60ರಷ್ಟು ಅನುದಾನ ನೀಡಲಿದೆ. ರಾಜ್ಯಗಳು ಶೇ 30ರಷ್ಟು ಅನುದಾನ ನೀಡಬೇಕು. ಸಾಲದ ಮೂಲಕ ಉಳಿದ ಶೇ 10ರಷ್ಟು ವೆಚ್ಚವನ್ನು ಭರಿಸಲಾಗುತ್ತದೆ.

ಪಿಯೂಷ್ ಗೋಯಲ್ ಅಧಿಕಾರವಧಿಯಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಭಾರೀ ಸುಧಾರಣೆಪಿಯೂಷ್ ಗೋಯಲ್ ಅಧಿಕಾರವಧಿಯಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಭಾರೀ ಸುಧಾರಣೆ

2011ರ ಜನಗಣತಿ ಪ್ರಕಾರ ಈ ಯೋಜನೆಗೆ ಅರ್ಹರು ಯಾರು? ಎಂದು ಗುರುತಿಸಲಾಗುತ್ತದೆ. ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 500 ರೂ.ಗಳಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.

ಎಪಿಎಲ್ ಕುಟುಂಬಗಳು ವಿದ್ಯುತ್ ಸಂಪರ್ಕ ಒದಗಿಸಲು ಪಾವತಿ ಮಾಡಬೇಕಾದ ಹಣವನ್ನು 10 ಕಂತುಗಳ ವಿದ್ಯುತ್ ಬಿಲ್‌ನಲ್ಲಿ ಪಡೆಯಲಾಗುತ್ತದೆ. ಮನೆಯಲ್ಲಿಯೇ ವಿದ್ಯುತ್ ಸಂಪರ್ಕ ಕಲ್ಪಿಸುವ ಅರ್ಜಿಯನ್ನು ವಿತರಣೆ ಮಾಡಲಾಗುತ್ತದೆ.

ಸರಕಾರದಿಂದ ಕೊರತೆ ನೀಗಿಸಲು 1,000 ಮೆ.ವ್ಯಾಟ್ ವಿದ್ಯುತ್ ಖರೀದಿಸರಕಾರದಿಂದ ಕೊರತೆ ನೀಗಿಸಲು 1,000 ಮೆ.ವ್ಯಾಟ್ ವಿದ್ಯುತ್ ಖರೀದಿ

ಗ್ರಾಮ ಪಂಚಾಯಿತಿಗಳು, ಗ್ರಾಮೀಣ ಪ್ರದೇಶದಲ್ಲಿರುವ ಸಾರ್ವಜನಿಕ ಸಂಸ್ಥೆಗಳು ಅರ್ಜಿಗಳನ್ನು ವಾಪಸ್ ಪಡೆಯವುದು, ಬಿಲ್ ನೀಡುವುದು, ಬಿಲ್ ಪಾವತಿ ಮುಂತಾದ ಕೆಲಸಗಳಿಗೆ ಸಹಾಯ ಮಾಡಲಿವೆ.

'ಹೊಸ ಬೆಳಕು' ಯೋಜನೆ LED ಬಲ್ಸ್ ಈಗ 65 ರುಗೆ ಲಭ್ಯ'ಹೊಸ ಬೆಳಕು' ಯೋಜನೆ LED ಬಲ್ಸ್ ಈಗ 65 ರುಗೆ ಲಭ್ಯ

ಮೋದಿ ಮಾಡಿದ ಭಾಷಣದ ಮುಖ್ಯಾಂಶಗಳು
* ಬಡವರ ಉದ್ಧಾರ ನಮ್ಮ ಸರ್ಕಾರದ ಧ್ಯೇಯ. ಯಾವ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಇಲ್ಲವೋ ಆ ಕುಟುಂಬಕ್ಕೆ ವಿದ್ಯುತ್ ನೀಡುವುದು ನಮ್ಮ ಉದ್ದೇಶ
* ಈ ಯೋಜನೆಯನ್ನಯ ಜಾರಿಗೆ ತರುವ ಮೂಲಕ ನಾವು 16000 ಕೋಟಿ ಹಣವನ್ನು ಬಡವರ ಅಭಿವೃದ್ಧಿಗಾಗಿ ನಾವು ವೆಚ್ಚ ಮಾಡುತ್ತಿದ್ದೇವೆ.
* ಮೂರು ವರ್ಷಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಮಾಡಿದ ಸುಧಾರಣೆಗಳಿಂದಾಗಿ ಈ ಯೋಜನೆ ಜಾರಿಗೆ ತರಲು ಸಾಧ್ಯವಾಗಿದೆ

English summary
Prime Minister Narendra Modi announced Saubhagya - Pradhan Mantri Sahaj Bijli Har Ghar Yojana in Delhi on Monday. The scheme aims at providing last mile electricity connectivity to all rural and urban households.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X