ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗ ಏಕತೆಯ ಶಕ್ತಿಯಾಗಿ ಹೊರ ಹೊಮ್ಮಿದೆ; ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ಜೂನ್ 21 : "ಯೋಗ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಲಿದೆ. ಇದು ಏಕತೆಯ ಶಕ್ತಿಯಾಗಿ ಹೊರ ಹೊಮ್ಮಿದೆ ಮತ್ತು ಮಾನವೀಯ ಬಂಧಗಳನ್ನು ಮತ್ತಷ್ಟು ಗಾಢವಾಗಿಸುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾನುವಾರ 6ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಎಲ್ಲಾ ಜನರಿಗೆ ಯೋಗ ದಿನದ ಶುಭಾಶಯಗಳನ್ನು ಹೇಳಿದರು.

ವಿಶ್ವ ಯೋಗ ದಿನ; ಜನತೆಗೆ ನರೇಂದ್ರ ಮೋದಿ ಮನವಿ ವಿಶ್ವ ಯೋಗ ದಿನ; ಜನತೆಗೆ ನರೇಂದ್ರ ಮೋದಿ ಮನವಿ

ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಈ ಬಾರಿ ದೇಶದಲ್ಲಿ ಎಲ್ಲಿಯೂ ಯೋಗಾಭ್ಯಾಸ ಮಾಡುವ ಸಾರ್ವಜನಿಕ ಕಾರ್ಯಕ್ರಮ ಆಯೋಜನೆ ಮಾಡಿಲ್ಲ. ಹೆಚ್ಚು ಜನರು ಸೇರುವಂತಹ ಕಾರ್ಯಕ್ರಮ ನಡೆಸುವುದಕ್ಕೆ ನಿಷೇಧವಿದೆ.

ವಿಶ್ವ ಯೋಗ ದಿನ; ಕೊರೊನಾ ಮತ್ತು ಯೋಗ ಜಾಗೃತಿ ನಡಿಗೆವಿಶ್ವ ಯೋಗ ದಿನ; ಕೊರೊನಾ ಮತ್ತು ಯೋಗ ಜಾಗೃತಿ ನಡಿಗೆ

"ಕೊರೊನಾ ವೈರಸ್ ಸೋಂಕು ನಮ್ಮ ಉಸಿರಾಟದ ಮೇಲೆ ದಾಳಿ ಮಾಡುತ್ತದೆ. ಪ್ರಾಣಾಯಾಮದಿಂದಾಗಿ ನಾವು ಉತ್ತಮ ಉಸಿರಾಟದ ವ್ಯವಸ್ಥೆಯನ್ನು ನಾವು ಪಡೆಯಬಹುದು" ಎಂದು ನರೇಂದ್ರ ಮೋದಿ ಹೇಳಿದರು.

ಕೊರೊನಾ ಭೀತಿ: ಮನೆಯಲ್ಲೇ ಯೋಗ ಆಚರಣೆಗೆ ಕರೆ ಕೊರೊನಾ ಭೀತಿ: ಮನೆಯಲ್ಲೇ ಯೋಗ ಆಚರಣೆಗೆ ಕರೆ

"ಯೋಗ ದಿನವು ಏಕತೆಯನ್ನು ಆಚರಿಸುವ ದಿನವಾಗಿದೆ. ಇದು ಸಾರ್ವತ್ರಿಕ ಭಾತೃತ್ವ ಸಂದೇಶ ಸಾರುವ ದಿನ. ಯೋಗ ಜನಾಂಗ, ಬಣ್ಣ, ಲಿಂಗ, ನಂಬಿಕೆ ಮತ್ತು ದೇಶಗಳನ್ನು ಮೀರಿದ್ದು, ಇದು ಯಾವುದೇ ತಾರತಮ್ಯ ಮಾಡುವುದಿಲ್ಲ" ಎಂದು ಮೋದಿ ಬಣ್ಣಿಸಿದರು.

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ

ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ

"ಯಾರೂ ಬೇಕಾದರೂ ಯೋಗಾಭ್ಯಾಸ ಮಾಡಬಹುದು. ನಿತ್ಯ ಪ್ರಾಣಾಯಾಮ, ಯೋಗ ಮಾಡುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು" ಎಂದು ನರೇಂದ್ರ ಮೋದಿ ತಿಳಿಸಿದರು.

ದೈಹಿಕ ಶಕ್ತಿ, ಒತ್ತಡವಿಲ್ಲದ ಮನಸ್ಸು

ದೈಹಿಕ ಶಕ್ತಿ, ಒತ್ತಡವಿಲ್ಲದ ಮನಸ್ಸು

"ಪ್ರಪಂಚದಾದ್ಯಂತ ಹಲವಾರು ಕೊರೊನಾ ವೈರಸ್ ಸೋಂಕಿನ ರೋಗಿಗಳು ಯೋಗದಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ಕಷ್ಟದ ಸನ್ನಿವೇಶದಲ್ಲಿ ಹೋರಾಡಲು ಯೋಗ ಭರವಸೆ ನೀಡುತ್ತದೆ. ಯೋಗ ನಮಗೆ ದೈಹಿಕ ಶಕ್ತಿಯನ್ನು ನೀಡುತ್ತದೆ, ಒತ್ತಡವಿಲ್ಲದೇ ಮನಸ್ಸು ಶಾಂತವಾಗಿರಲು ಸಹಾಯ ಮಾಡುತ್ತದೆ" ಎಂದು ಮೋದಿ ಹೇಳಿದರು.

ಯೋಗ ಡಿಜಿಟಲ್ ಆಗಿದೆ

ಯೋಗ ಡಿಜಿಟಲ್ ಆಗಿದೆ

"2015ರ ಜೂನ್ 21ರ ಬಳಿಕ ಮೊದಲ ಬಾರಿಗೆ ಅಂತರರಾಷ್ಟ್ರೀಯ ಯೋಗ ದಿನ ಸಂಪೂರ್ಣ ಡಿಜಿಟಲ್ ಆಗಿದೆ. ಮನೆಯಲ್ಲೇ ಯೋಗ, ಕುಟುಂಬದೊಂದಿಗೆ ಯೋಗ ಎಂಬುದು ಈ ವರ್ಷದ ಘೋಷಣೆಯಾಗಿದೆ" ಎಂದು ನರೇಂದ್ರ ಮೋದಿ ಹೇಳಿದರು.

ಮೋದಿ ಭಾಷಣದ ವಿಡಿಯೋ

ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ ವಿಡಿಯೋ ಇಲ್ಲಿದೆ.

English summary
COVID-19 attacks our respiratory system. Pranayama help us strengthen our respiratory system said PM Narendra Modi. He addressed the nation to mark the International Yoga Day on June 21, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X