ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪಿಡುಗಿನ ಮಧ್ಯ ಡಿಜಿಟಲ್ ತಂತ್ರಜ್ಞಾನದ ಬಳಕೆ ಹೇಗೆ?: ಮೋದಿ

|
Google Oneindia Kannada News

ನವದೆಹಲಿ, ಜೂನ್ 16: "ಭಾರತ ಮತ್ತು ಫ್ರಾನ್ಸ್ ವ್ಯಾಪಕ ವಿಷಯಗಳಲ್ಲಿ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ವಲಯಗಳು ಸಹಕಾರ ಹಾಗೂ ಉದಯೋನ್ಮುಖ ಕ್ಷೇತ್ರಗಳಾಗಿವೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಮೈಕ್ರೋಸಾಫ್ಟ್ ಟೀಮ್ಸ್ ಈಗ ಕನ್ನಡದಲ್ಲಿಯೂ ಲಭ್ಯಮೈಕ್ರೋಸಾಫ್ಟ್ ಟೀಮ್ಸ್ ಈಗ ಕನ್ನಡದಲ್ಲಿಯೂ ಲಭ್ಯ

ಕಳೆದ 2016ರಿಂದ ಪ್ರತಿವರ್ಷ ಪ್ಯಾರಿಸ್‌ನಲ್ಲಿ ನಡೆಯುವ ಯುರೋಪಿನ ಅತಿದೊಡ್ಡ ಡಿಜಿಟಲ್ ಮತ್ತು ನವೋದ್ಯಮ ಕಾರ್ಯಕ್ರಮ ವಿವಾಟೆಕ್ 2021ರಲ್ಲಿ ಮುಖ್ಯ ಭಾಷಣಕಾರರಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಗೌರವ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಈ ವೇಳೆ ವಿವಾಟೆಕ್‌ನ 5ನೇ ಆವೃತ್ತಿಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಭಾಷಣ ಮಾಡಿದರು.

ತಂತ್ರಜ್ಞಾನ ಮತ್ತು ಡಿಜಿಟಲ್ ವಲಯಗಳು ಪರಸ್ಪರ ಸಹಕಾರದಿಂದ ಮತ್ತಷ್ಟು ಬೆಳೆಯುವುದು ಸದ್ಯದ ಅವಶ್ಯಕತೆಯಾಗಿದೆ. ಇದು ನಮ್ಮ ರಾಷ್ಟ್ರಗಳಿಗೆ ಮಾತ್ರವಲ್ಲ, ಜಗತ್ತಿಗೂ ದೊಡ್ಡ ಪ್ರಮಾಣದಲ್ಲಿ ಸಹಾಯವಾಗುತ್ತದೆ," ಎಂದು ಹೇಳಿದರು.

ಅಂತಾರಾಷ್ಟ್ರೀಯ ಕಂಪನಿ ನಡುವೆ ಸಹಾಯ ಮನೋಭಾವ

"ಫ್ರೆಂಚ್ ಓಪನ್ ಪಂದ್ಯಾವಳಿಗೆ ಇನ್ಫೋಸಿಸ್ ತಾಂತ್ರಿಕ ಬೆಂಬಲ ನೀಡುತ್ತಿದೆ. ಅದೇ ರೀತಿ ಫ್ರೆಂಚ್ ಕಂಪೆನಿಗಳಾದ ಅಟೋಸ್, ಕ್ಯಾಪ್ ಜೆಮಿನಿ ಮತ್ತು ಭಾರತದ ಟಿಸಿಎಸ್ ಮತ್ತು ವಿಪ್ರೊಗಳನ್ನು ಒಳಗೊಂಡ ಸಹಯೋಗದೊಂದಿಗೆ ಉಭಯ ದೇಶಗಳ ಐಟಿ ಪ್ರತಿಭೆಗಳು ವಿಶ್ವದಾದ್ಯಂತ ಸೇವೆ ಸಲ್ಲಿಸಲಾಗುತ್ತಿರುವುದೇ ಈ ಮಾತಿಗೆ ಉತ್ತಮ ಉದಾಹರಣೆಯಾಗುತ್ತದೆ," ಎಂದು ಪ್ರಧಾನಿ ಮೋದಿ ಹೇಳಿದರು.

ಸಾಂಕ್ರಾಮಿಕ ಪಿಡುಗಿನ ನಡುವೆ ತಂತ್ರಜ್ಞಾನದ ಬಳಕೆ

"ಸಾಂಪ್ರದಾಯಿಕತೆ ವಿಫಲವಾದರೆ ನಾವೀನ್ಯತೆ ಸಹಾಯ ಮಾಡುತ್ತದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಮಯವನ್ನು ನಿಭಾಯಿಸಲು, ಪರಸ್ಪರರು ಸಂಪರ್ಕಿಸಲು, ಅಗತ್ಯ ಸೌಲಭ್ಯ ಕಲ್ಪಿಸಲು ಮತ್ತು ಸಾಂತ್ವನ ಹೇಳಲು ಡಿಜಿಟಲ್ ತಂತ್ರಜ್ಞಾನವು ನಮಗೆ ಸಹಾಯ ಮಾಡಿದೆ. ಭಾರತದ ಸಾರ್ವತ್ರಿಕ ಮತ್ತು ವಿಶಿಷ್ಟ ಬಯೋ ಮೆಟ್ರಿಕ್ ಡಿಜಿಟಲ್ ಗುರುತಿನ ವ್ಯವಸ್ಥೆ - ಆಧಾರ್ - ಬಡವರಿಗೆ ಸಮಯೋಚಿತ ಆರ್ಥಿಕ ನೆರವು ನೀಡಲು ಸಹಾಯ ಮಾಡಿತು," ಎಂದು ಪ್ರಧಾನಿ ಹೇಳಿದರು.

"ನಾವು 800 ಮಿಲಿಯನ್ ಜನರಿಗೆ ಉಚಿತ ಆಹಾರ ಧಾನ್ಯವನ್ನು ಪೂರೈಸಿದ್ದೇವೆ. ಅಡುಗೆ-ಇಂಧನ ಸಬ್ಸಿಡಿಗಳನ್ನು ಅನೇಕ ಮನೆಗಳಿಗೆ ತಲುಪಿಸಲಾಗುತ್ತಿದೆ. ಭಾರತದಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಎರಡು ಸಾರ್ವಜನಿಕ ಡಿಜಿಟಲ್ ಶಿಕ್ಷಣ ಕಾರ್ಯಕ್ರಮಗಳಾದ ಸ್ವಯಂ ಮತ್ತು ದೀಕ್ಷಾ ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತು," ಎಂದು ಪ್ರಧಾನಿ ಹೇಳಿದ್ದಾರೆ.

ಕೊರೊನಾವೈರಸ್ ನಿರ್ವಹಣೆ ಬಗ್ಗೆ ಮೋದಿ ಶ್ಲಾಘನೆ

"ಕೊವಿಡ್-19 ಸಾಂಕ್ರಾಮಿಕ ರೋಗದ ಸವಾಲನ್ನು ಎದುರಿಸುವಲ್ಲಿ ನವೋದ್ಯಮ (ಸ್ಟಾರ್ಟ್ ಅಪ್) ವಲಯದ ಪಾತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಪಿಪಿಇ ಕಿಟ್‌ಗಳು, ಮಾಸ್ಕ್, ಪರೀಕ್ಷಾ ಕಿಟ್‌ಗಳು ಇತ್ಯಾದಿಗಳ ಕೊರತೆ ಪರಿಹರಿಸುವಲ್ಲಿ ಖಾಸಗಿ ವಲಯ ಪ್ರಮುಖ ಪಾತ್ರ ವಹಿಸಿದೆ. ಕೆಲವು ಕೊವಿಡ್ ಮತ್ತು ಕೊವಿಡೇತರ ಸಮಸ್ಯೆಗಳನ್ನು ಪರಿಹರಿಸಲು ವೈದ್ಯರು ಟೆಲಿ-ಮೆಡಿಸಿನ್ ಅನ್ನು ಬೃಹತ್ ಪ್ರಮಾಣದಲ್ಲಿ ಅಳವಡಿಸಿಕೊಂಡರು. ಭಾರತದಲ್ಲಿ ಎರಡು ಲಸಿಕೆ ತಯಾರಿಸಲಾಗುತ್ತಿದೆ. ಇನ್ನೂ ಕೆಲವು ಲಸಿಕೆಗಳು ಅಭಿವೃದ್ಧಿ ಅಥವಾ ಪ್ರಯೋಗ ಹಂತದಲ್ಲಿವೆ. ಸ್ಥಳೀಯ ಐಟಿ ಪ್ಲಾಟ್‌ಫಾರ್ಮ್, ಆರೋಗ್ಯ-ಸೇತು ಪರಿಣಾಮಕಾರಿ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಸಕ್ರಿಯಗೊಳಿಸಿದೆ. ಕೋಟ್ಯಂತರ ಜನರಿಗೆ ಲಸಿಕೆಗಳನ್ನು ಖಚಿತಪಡಿಸಿಕೊಳ್ಳಲು ಕೊವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಈಗಾಗಲೇ ಸಹಾಯ ಮಾಡಿದೆ," ಎಂದು ಪ್ರಧಾನಿ ಹೇಳಿದ್ದಾರೆ.

ವಿದೇಶಿ ಕಂಪನಿಗಳನ್ನು ಆಕರ್ಷಿಸಲು ಅತ್ಯುತ್ತಮ ಮಾರ್ಗ

"ವಿಶ್ವದ ಅತಿದೊಡ್ಡ ಸ್ಟಾರ್ಟ್ ಅಪ್ ಪರಿಸರಕ್ಕೆ ಭಾರತದಲ್ಲಿ ವೇದಿಕೆ ಸಜ್ಜುಗೊಂಡಿದ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಯುನಿಕಾರ್ನ್ ಬಂದಿವೆ. ನಾವೀನ್ಯಕಾರರು ಮತ್ತು ಹೂಡಿಕೆದಾರರಿಗೆ ಬೇಕಾದುದನ್ನು ಭಾರತ ನೀಡುತ್ತದೆ. ಪ್ರತಿಭೆ, ಮಾರುಕಟ್ಟೆ, ಬಂಡವಾಳ, ಪರಿಸರ ವ್ಯವಸ್ಥೆ ಮತ್ತು ಮುಕ್ತ ಸಂಸ್ಕೃತಿ ಎಂಬ ಐದು ಸ್ತಂಭಗಳ ಆಧಾರದ ಮೇಲಿರುವ ಭಾರತದಲ್ಲಿ ಹೂಡಿಕೆ ಮಾಡಲು ಜಗತ್ತನ್ನು," ಪ್ರಧಾನಿ ಮೋದಿ ಆಹ್ವಾನಿಸಿದರು.

ಭಾರತದ ಪ್ರತಿಭಾ ಕಣಜ, ಮೊಬೈಲ್ ಫೋನ್ ಹೆಚ್ಚಳ ಮತ್ತು 775 ಮಿಲಿಯನ್ ಇಂಟರ್ನೆಟ್ ಬಳಕೆದಾರರು, ವಿಶ್ವದ ಅತಿ ಹೆಚ್ಚು ಮತ್ತು ಅಗ್ಗದ ದತ್ತಾಂಶ ಬಳಕೆ ಮತ್ತು ಸಾಮಾಜಿಕ ಮಾಧ್ಯಮದ ಹೆಚ್ಚು ಬಳಕೆ ಮುಂತಾದ ಸಾಮರ್ಥ್ಯಗಳ ಬಗ್ಗೆ ಪ್ರಧಾನಿ ಮೋದಿ ಒತ್ತಿ ಹೇಳಿದರು.

ದೇಶದ 7500 ಶಾಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ

ದೇಶದ 7500 ಶಾಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ

ಅತ್ಯಾಧುನಿಕ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ 523 ಕಿಲೋಮೀಟರ್ ಫೈಬರ್ ಆಪ್ಟಿಕ್ ನೆಟ್‌ವರ್ಕ್‌ನಿಂದ 156 ಸಾವಿರ ಗ್ರಾಮ ಪರಿಷತ್ತುಗಳ ಸಂಪರ್ಕ, ದೇಶಾದ್ಯಂತ ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳನ್ನು ಸಂಪರ್ಕಿಸುವಂತಹ ಉಪಕ್ರಮಗಳನ್ನು ಪ್ರಧಾನಿ ವಿವರಿಸಿದರು. ನಾವೀನ್ಯತೆಯ ಸಂಸ್ಕೃತಿಯನ್ನು ಪೋಷಿಸುವ ಪ್ರಯತ್ನಗಳ ಬಗ್ಗೆಯೂ ವಿವರಿಸಿದರು. ಅಟಲ್ ಇನ್ನೋವೇಶನ್ ಮಿಷನ್ ಅಡಿಯಲ್ಲಿ 7500 ಶಾಲೆಗಳಲ್ಲಿ ಅತ್ಯಾಧುನಿಕ ನಾವೀನ್ಯತೆ ಪ್ರಯೋಗಾಲಯಗಳಿವೆ ಎಂದು ಪ್ರಧಾನಿ ತಿಳಿಸಿದರು.

"ಅಂದು ಕೊವಿಡ್-19 ಲಸಿಕೆ ನಿರೀಕ್ಷೆಯಲ್ಲಿ ಜಗತ್ತು"

"ಕಳೆದ ವರ್ಷದ ಇದೇ ಸಮಯದಲ್ಲಿ, ಜಗತ್ತು ಇನ್ನೂ ಲಸಿಕೆಯ ನಿರೀಕ್ಷೆಯಲ್ಲಿತ್ತು. ಇಂದು, ನಾವು ಕೆಲವು ಲಸಿಕೆಗಳನ್ನು ಹೊಂದಿದ್ದೇವೆ. ಅಂತೆಯೇ, ನಾವು ಆರೋಗ್ಯ ಮೂಲಸೌಕರ್ಯ ಮತ್ತು ನಮ್ಮ ಆರ್ಥಿಕತೆಗಳನ್ನು ಸರಿಪಡಿಸುವುದನ್ನು ಮುಂದುವರಿಸಬೇಕಾಗಿದೆ. ಗಣಿಗಾರಿಕೆ, ಬಾಹ್ಯಾಕಾಶ, ಬ್ಯಾಂಕಿಂಗ್, ಪರಮಾಣು ಶಕ್ತಿ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಭಾರತದಲ್ಲಿ ಬೃಹತ್ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಸಾಂಕ್ರಾಮಿಕ ರೋಗದ ನಡುವೆಯೂ, ರಾಷ್ಟ್ರವಾಗಿ ಭಾರತವು ಹೊಂದಿಕೊಳ್ಳಬಲ್ಲದು ಮತ್ತು ಚಟುವಟಿಕೆಯಿಂದ ಇರಬಲ್ಲದು ಎಂಬುದನ್ನು ಇದು ತೋರಿಸುತ್ತದೆ,"ಎಂದು ಮೋದಿ ಹೇಳಿದ್ದಾರೆ.

ದೇಶದ ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಯುವಕರು ಪ್ರಾಬಲ್ಯ

ದೇಶದ ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಯುವಕರು ಪ್ರಾಬಲ್ಯ

"ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಯುವಕರು ಪ್ರಾಬಲ್ಯ ಹೊಂದಿದ್ದು, ಭೂತಕಾಲದ ಹೊರೆಯಿಂದ ಮುಕ್ತರಾಗಿದ್ದಾರೆ. ಜಾಗತಿಕ ಪರಿವರ್ತನೆಗೆ ಶಕ್ತಿ ತುಂಬಲು ಸೂಕ್ತ ಸ್ಥಳದಲ್ಲಿದ್ದಾರೆ. ನಮ್ಮ ಸ್ಟಾರ್ಟ್ ಅಪ್‌ಗಳು ಆರೋಗ್ಯ ರಕ್ಷಣೆ. ತ್ಯಾಜ್ಯ ಮರುಬಳಕೆ, ಕೃಷಿ, ಕಲಿಕೆಯ ಹೊಸ ಯುಗದ ಸಾಧನಗಳು ಸೇರಿದಂತೆ ಪರಿಸರ ಸ್ನೇಹಿ ತಂತ್ರಜ್ಞಾನದಂತಹ ಕ್ಷೇತ್ರಗಳನ್ನು ಅನ್ವೇಷಿಸಬೇಕು," ಎಂದು ಪ್ರಧಾನಿ ಹೇಳಿದರು.

ಆರ್ಥಿಕ ಅಭಿವೃದ್ಧಿಗಾಗಿ ತಂತ್ರಜ್ಞಾನದ ಬಳಕೆ: ಮೋದಿ

ಆರ್ಥಿಕ ಅಭಿವೃದ್ಧಿಗಾಗಿ ತಂತ್ರಜ್ಞಾನದ ಬಳಕೆ: ಮೋದಿ

ಹೊಸ ತಂತ್ರಜ್ಞಾನದ ನಾಯಕತ್ವವು ಆರ್ಥಿಕ ಶಕ್ತಿ, ಉದ್ಯೋಗಗಳು ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಇತಿಹಾಸ ತೋರಿಸಿದೆ. ಆದರೆ, ನಮ್ಮ ಪಾಲುದಾರರು ಮನುಕುಲದ ಸೇವೆಯಲ್ಲಿ ದೊಡ್ಡ ಉದ್ದೇಶವನ್ನು ಪೂರೈಸಬೇಕು. ಈ ಸಾಂಕ್ರಾಮಿಕ ನಮ್ಮ ಸ್ಥಿತಿ ಸ್ಥಾಪಕತ್ವವನ್ನು ಮಾತ್ರ ಪರೀಕ್ಷೆ ಮಾಡುತ್ತಿಲ್ಲ. ನಮ್ಮ ಕಲ್ಪನೆಯನ್ನೂ ಪರೀಕ್ಷಿಸುತ್ತಿದೆ. ಇದು ಪ್ರತಿಯೊಬ್ಬರಿಗೂ ಹೆಚ್ಚು ಅಂತರ್ಗತವಾದ, ಕಾಳಜಿಯುಳ್ಳ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ಅವಕಾಶವಾಗಿದೆ," ಎಂದು ಪ್ರಧಾನಿ ತಿಳಿಸಿದ್ದಾರೆ.

English summary
PM Narendra Modi Addresses At The 5th Edition Of VivaTech: Highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X