ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 21ರಿಂದ ರಾಜ್ಯಗಳಿಗೆ ಕೇಂದ್ರದಿಂದಲೇ ಉಚಿತ ಲಸಿಕೆ ಪೂರೈಕೆ: ಮೋದಿ

|
Google Oneindia Kannada News

ನವದೆಹಲಿ, ಜೂನ್ 07: ಜೂನ್ 21ರಿಂದ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಉಚಿತ ಲಸಿಕೆ ಪೂರೈಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂದಿನ ಎರಡು ವಾರಗಳ ಬಳಿಕ ಕೇಂದ್ರವೇ ಲಸಿಕೆ ನೀಡಲಿದೆ.

ಶೇ.25ರಷ್ಟು ಲಸಿಕೆಗಳನ್ನು ಖಾಸಗಿ ಆಸ್ಪತ್ರೆ ಖರೀಸಬಹುದು, ಹಣವಿದ್ದವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದು. ರಾಜ್ಯ ಸರ್ಕಾರಗಳ ಲಸಿಕೆ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಲಿದೆ ಎಂದರು.

ಭಾರತದಲ್ಲಿ 2014ಕ್ಕೂ ಮುನ್ನ ಶೇ.60ರಷ್ಟು ಲಸಿಕೆ ಉತ್ಪಾದನಾ ಪ್ರಮಾಣವಿತ್ತು, ಆದರೆ 6ವರ್ಷಗಳಲ್ಲಿ ಅದನ್ನು ಶೇ.80-90ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

PM Narendra Modi Address To The Nation On Covid-19 Situation, Vaccination Highlights In Kannada

ದೇಶದಲ್ಲಿ ಹಲವು ಮಂದಿ ತಮ್ಮ ಕುಟುಂಬದವರನ್ನು ಕಳೆದುಕೊಂಡಿದ್ದಾರೆ, ಸ್ನೇಹಿತರನ್ನು ಕಳೆದುಕೊಂಡಿದ್ದಾರೆ, ಪರಿಚಯಸ್ಥರನ್ನು ಕಳೆದುಕೊಂಡಿದ್ದಾರೆ.
ಕಳೆದ 100 ವರ್ಷಗಳಲ್ಲಿ ಕಾಣದ ಎಲ್ಲಕ್ಕಿಂತ ದೊಡ್ಡ ಮಹಾಮಾರಿ ಕೊರೊನಾವಾಗಿದೆ, ಈ ರೀತಿಯ ಮಹಾಮಾರಿಯನ್ನು ಆಧುನಿಕ ವಿಶ್ವ ನೋಡಿಲ್ಲ ಅದರ ಅನುಭವ ಯಾರಿಗೂ ಇರಲಿಲ್ಲ ಎಂದರು.

ಪ್ರಧಾನಿ ನರೇಂದ್ರ ಭಾಷಣದ ಮುಖ್ಯಾಂಶಗಳು
-ಭಯಂಕರ ಮಹಾಮಾರಿ ವಿರುದ್ಧ ಹೋರಾಡಲು ಸರ್ಕಾರವು ಹಲವು ಆಸ್ಪತ್ರೆಗಳನ್ನು ನಿರ್ಮಿಸಿದೆ. ಭಾರತದ ಇತಿಹಾಸದಲ್ಲಿ ಬಳಕೆ ಮಾಡದಷ್ಟು ಮೆಡಿಕಲ್ ಆಕ್ಸಿಜನ್ ಬಳಕೆಯಾಗಿದೆ. ಆಮ್ಲಜನಕ ಆಮದಿಗೆ ಭಾರತೀಯ ವಾಯು ಸೇನೆ, ನೌಕಾಪಡೆಯನ್ನು ಬಳಸಲಾಯಿತು.
-ದೇಶದಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ.
-ಕೊರೊನಾ ಎನ್ನುವ ಶತ್ರು ವಿರುದ್ಧ ಹೋರಾಡಲು ಮಾಸ್ಕ್, 2 ಮೀಟರ್ ಸಾಮಾಜಿಕ ಅಂತರವೇ ಮೊದಲ ಉಪಾಯವಾಗಿದೆ.
- ಭಾರತದಂತಹ ವಿಶಾಲವಾದ ದೇಶದಲ್ಲಿ ಲಸಿಕೆ ಇರಲಿಲ್ಲ, ಒಂದೊಮ್ಮೆ ಭಾರತದಲ್ಲಿ ಲಸಿಕೆ ತಯಾರಿಸದಿದ್ದರೆ ಭಾರತದ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಗಮನಿಸಬೇಕಿದೆ.
- ಭಾರತದಲ್ಲಿ ಮೊದಲು ವಿದೇಶದಿಂದ ಲಸಿಕೆ ಪಡೆಯಲು ಕನಿಷ್ಠವೆಂದರೂ 10 ವರ್ಷಗಳ ಕಾಲ ಬೇಕಾಗುತ್ತಿತ್ತು, ಮೊದಲು ಅಲ್ಲಿ ಲಸಿಕೆ ಉತ್ಪಾದನೆ ಕೆಲಸ ಶುರು ಮಾಡುತ್ತಿದ್ದರು, ಅವರು ಲಸಿಕೆ ಕೆಲಸವನ್ನು ಪೂರ್ಣಗೊಳಿಸಿದರೂ ಭಾರತದಲ್ಲಿ ಲಸಿಕೆ ಉತ್ಪಾದನೆ ಶುರುವಾಗುತ್ತಿರಲಿಲ್ಲ.
-ಪೋಲಿಯೋ, ಹೆಪಟೈಸರ್ ಬಿ, ಸ್ಮಾಲ್ ಪಾಕ್ಸ್ ರೀತಿಯ ರೋಗಗಳಿಗೆ ಲಸಿಕೆ ಪಡೆಯಲು ನಮ್ಮ ದೇಶವು ಸಾಕಷ್ಟು ಕಷ್ಟಪಟ್ಟಿತ್ತು.

-ಗರೀಬ್ ಕಲ್ಯಾಣ ಯೋಜನೆ ನವೆಂಬರ್ ವರೆಗೂ ವಿಸ್ತರಣೆ ಮಾಡಲಾಗುತ್ತದೆ, ಯಾವ ಬಡವನೂ ಹಸಿವಿನಲ್ಲಿ ಬಳಲಲು ಸರ್ಕಾರ ಬಿಡುವುದಿಲ್ಲ
-ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಣೆ

-ನೇಸಲ್ ಕೋವಿಡ್ ಲಸಿಕೆ ಸಂಶೋಧನೆ ಪ್ರಗತಿಯಲ್ಲಿದೆ
-ಎರಡು ದೇಶೀಯ ಕೋವಿಡ್ ಲಸಿಕೆ ಬಳಕೆ ಮಾಡಲಾಗುತ್ತಿದೆ, 23 ಕೋಟಿ ಲಸಿಕೆಯನ್ನು ಈಗಾಗಲೇ ನೀಡಲಾಗಿದೆ.

English summary
PM Narendra Modi Address to the nation on Covid-19 situation, Vaccination, Lockdown and Unlock In India Highlights in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X