ಪ್ರಧಾನಿ ಮೋದಿಯವರ ವಿದೇಶ ಪ್ರವಾಸದ ಖರ್ಚು ವೆಚ್ಚ ಲೆಕ್ಕ ಬಹಿರಂಗ
Recommended Video
ನವದೆಹಲಿ, ಜುಲೈ 20: ನರೇಂದ್ರ ಮೋದಿ ಅವರು 2014ರ ಜೂನ್ನಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಪ್ರಧಾನಿಯಾಗಿ ಸುಮಾರು 84 ದೇಶಗಳಿಗೆ ಭೇಟಿ ನೀಡಿದ್ದಾರೆ. ಪ್ರಧಾನಿಯವರ ಈ ವಿದೇಶ ಪ್ರವಾಸಗಳಿಗೆ 1,484 ಕೋಟಿ ರೂ. ವೆಚ್ಚವಾಗಿದೆ ಎಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದೆ. ಮುಂಗಾರು ಅಧಿವೇಶನದ ಅವಧಿಯಲ್ಲಿ ಈ ಪ್ರಶ್ನೆ ಎದುರಾಗಿದ್ದು ಹಾಗೂ ಉತ್ತರ ಸಿಕ್ಕಿರುವುದು ವಿಶೇಷ.
ರಾಜ್ಯಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಸುಮಾರು 1022.42 ಕೋಟಿ ರೂ. ಪ್ರಧಾನಿ ಪ್ರಯಾಣಿಸುವ ವಿಮಾನಗಳ ನಿರ್ವಹಣೆಗೆ ಖರ್ಚಾಗಿದೆ. ಅಲ್ಲದೆ 387.26 ಕೋಟಿ ರೂ. 2014ರ ಜೂ.15ರಿಂದ 2018ರ ಜೂನ್ 10ರವರೆಗೆ ವಿದೇಶ ಪ್ರವಾಸಕ್ಕೆ ಬಳಸಿದ ಇತರ ವಿಮಾನಗಳ ವೆಚ್ಚಕ್ಕೆ ತಗುಲಿದೆ. ಹಾಗೆಯೇ ಹಾಟ್ಲೈನ್ನ ಒಟ್ಟೂ ವೆಚ್ಚ 9.12 ಕೋಟಿ ರೂ.ಗಳಾಗಿದೆ.
ಅವಿಶ್ವಾಸ ನಿರ್ಣಯ LIVE: ಯುಪಿಎ vs ಎನ್ಡಿಎ ಬಲಾಬಲದ ಪರೀಕ್ಷೆ
ಅಲ್ಲದೆ ಸಚಿವ ವಿ.ಕೆ.ಸಿಂಗ್ ನೀಡಿದ ಮಾಹಿತಿಯಲ್ಲಿ 2017-18 ಹಾಗೂ 2018-19ರ ಅವಧಿಯಲ್ಲಿ ಹಾಟ್ಲೈನ್ಗೆ ವೆಚ್ಚವಾದ ಹಣ ಹಾಗೂ 2018-19ನೇ ಸಾಲಿನಲ್ಲಿ ಇತರ (ಬಾಡಿಗೆ) ವಿಮಾನಗಳಿಗೆ ತಗುಲಿದ ವೆಚ್ಚದ ಬಗ್ಗೆ ವಿವರವಿಲ್ಲ.
ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಸುಮಾರು 42 ಪ್ರವಾಸಗಳ ಮೂಲಕ 84 ದೇಶಗಳಿಗೆ ಭೇಟಿ ನೀಡಿದ್ದಾರೆ ಎಂಬುದು ಮಾಹಿತಿಯಲ್ಲಿ ಬಹಿರಂಗಗೊಂಡಿದೆ.