ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತ ಕಬೀರನ 'ಮೋಕ್ಷ'ದ ನಾಡಲ್ಲಿ ಚುನಾವಣೆಗೆ ನಿಲ್ಲುತ್ತಾರಾ ಮೋದಿ?

|
Google Oneindia Kannada News

ಬೆಂಗಳೂರು, ಜೂನ್ 26: 2019ರ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಸಂತ ಕಬೀರ ಮತ್ತು ಅವರ ಏಕತೆಯ ಸಂದೇಶಗಳೊಂದಿಗೆ ನಂಟು ಬೆಸೆಯುವ ಉದ್ದೇಶ ಹೊಂದಿದ್ದಾರೆ.

2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳಲ್ಲಿ 'ಮೋಕ್ಷ'ದ ಭೂಮಿ ವಾರಣಾಸಿಯೂ ಒಂದು. ಈಗ ಅವರ ಲಕ್ಷ್ಯ 'ನರಕದ ಹೆಬ್ಬಾಗಿಲು' ಎಂದು ಕುಖ್ಯಾತಿ ಪಡೆದಿರುವ ಮಘರ್ ಕ್ಷೇತ್ರದತ್ತ ನೆಟ್ಟಿದೆ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣೆ: ರಾಜ್ಯದ ಸಂಭಾವ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿಲೋಕಸಭಾ ಚುನಾವಣೆ: ರಾಜ್ಯದ ಸಂಭಾವ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ದೇಶದ ಇತಿಹಾಸದಲ್ಲಿ ಮಘರ್ ತನ್ನದೇ ಪ್ರಾಮುಖ್ಯ ಹೊಂದಿದೆ. ಶಾಂತಿ ಸಾಮರಸ್ಯ ಸಾರಿದ ಸಂತ ಕಬೀರ 15ನೇ ಶತಮಾನದಲ್ಲಿ ಕೊನೆಯುಸಿರನ್ನು ಎಳೆದ ಊರು ಇದು.

PM Modis eye on Maghar constituency for 2019 election?

ಕಬೀರ್ ಜನಿಸಿದ್ದು ವಾರಣಾಸಿಯಲ್ಲಿ. ಕಳೆದ ಚುನಾವಣೆಯಲ್ಲಿ ವಾರಣಾಸಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಮೋದಿ ಅವರು, ಈ ಬಾರಿ ಕಬೀರ ದೇಹತ್ಯಾಗ ಮಾಡಿದ ಮಘರ್‌ನಲ್ಲಿ 2019ರ ಲೋಕಸಭೆ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಆಗಿಲಿನಿಂದಲೇ ಮಘರ್‌ನಲ್ಲಿ ಮೃತಪಟ್ಟವರು ನರಕಕ್ಕೆ ಹೋಗುತ್ತಾರೆ ಎಂಬ ಕುಖ್ಯಾತಿಯನ್ನು ಈ ಊರು ಅಂಟಿಸಿಕೊಂಡಿದೆ. ಈ ಜಿಲ್ಲೆಯ ಸಂತ ಕಬೀರ ಮಹಾಪರಿನಿರ್ವಾಣ ಸ್ಥಾಲಿಯಲ್ಲಿ ಗುರುವಾರ ಮೋದಿ ಅವರು ಬೃಹತ್ ಸಾರ್ವಜನಿಕ ಸಭೆ ಆಯೋಜಿಸಿದ್ದಾರೆ.

ಇಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿದ ಭಾಷಣ ಮಾಡುವುದು ಮಾತ್ರವಲ್ಲ, ಮೋದಿ ಅವರು ಹಿಂದೂಗಳು ಮತ್ತು ಮುಸ್ಲಿಮರು ತಮಗೆ ಸೇರಿದ್ದು ಎಂದು ಈಗಲೂ ಪ್ರತಿಪಾದಿಸುತ್ತಿರುವ ಕಬೀರರ ಸಮಾಧಿ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಜತೆಗೆ ಕಬೀರ್ ಸಂಶೋಧನಾ ಸಂಸ್ಥೆಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಬೀರರ 500ನೇ ಪುಣ್ಯತಿಥಿ ಸಹ ಇದೇ ಸಂದರ್ಭದಲ್ಲಿ ನಡೆಯಲಿದೆ.

'ಮಿಷನ್-150' ನಂತರ 'ಮಿಷನ್-300' ಬಿಜೆಪಿಯ ಹೊಸ ಗುರಿ'ಮಿಷನ್-150' ನಂತರ 'ಮಿಷನ್-300' ಬಿಜೆಪಿಯ ಹೊಸ ಗುರಿ

'ಅವರ ಎಲ್ಲರ ಜತೆ ಎಲ್ಲರ ವಿಕಾಸ ಎಂಬ ಮೋದಿಜಿ ಅವರ ಘೋಷಣೆಯು ಸಂತ ಕಬೀರ ಅವರ ಸಂದೇಶದಿಂದ ಪ್ರೇರಿತವಾದದ್ದು. ಮೋದಿ ಅವರು ನಿರಂತರವಾಗಿ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಆದರೆ, ಕಬೀರರ 500ನೇ ಪುಣ್ಯತಿಥಿಯಂದೇ ಅವರು ಇಲ್ಲಿ ಸಾರ್ವಜನಿಕ ಸಭೆ ಆಯೋಜಿಸುತ್ತಿರುವುದು ಕಾಕತಾಳೀಯ ಎಂದು ಸಂತ ಕಬೀರ ನಗರದ ಬಿಜೆಪಿ ಸಂಸದ ಶರದ್ ತ್ರಿಪಾಠಿ ಹೇಳಿದ್ದಾರೆ.

ಬದಲಾಗುವುದೇ ನರಕ ಹೆಬ್ಬಾಗಿಲಿನ ಗತಿ?
ಮಘರ್‌ನಲ್ಲಿ ಸತ್ತವರು ನರಕಕ್ಕೆ ಹೋಗುತ್ತಾರೆ ಎಂಬುದು ಇಲ್ಲಿನ ಜನರ ನಂಬಿಕೆ. ಆದರೆ, ಮಘರ್ ಪರಿಸ್ಥಿತಿ ನರಕಕ್ಕಿಂತ ಭಿನ್ನವಲ್ಲ.

ಮಘರ್ ಬರಡು ನೆಲದ ಜಿಲ್ಲೆ. ಮೂಲಸೌಕರ್ಯಗಳ ಕೊರತೆಯಿಂದ ಇಲ್ಲಿನ ಜನರು ಒದ್ದಾಡುತ್ತಿದ್ದಾರೆ. ನಾವು ಪವಾಡಗಳನ್ನು ಸೃಷ್ಟಿಸಲು ಕಬೀರರಲ್ಲ. ಆದರೆ, ಇಷ್ಟೆಲ್ಲ ಸಂಕಷ್ಟಗಳನ್ನು ಅನುಭವಿಸುತ್ತಿದ್ದರೂ ನಾವು ನಮ್ಮ ಪಟ್ಟಣದ ಕುರಿತು ಹೆಮ್ಮೆ ಹೊಂದಿದ್ದೇವೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

'ಕಬೀರರ ಕಾಲಾವಧಿಯಲ್ಲಿ ವಾರಣಾಸಿಯಲ್ಲಿರುವ ಪಂಡಿತರು, ಅಲ್ಲಿ ಬುದ್ಧನ ಪ್ರಭಾವಳಿ ಹೆಚ್ಚುತ್ತಿರುವ ಬಗ್ಗೆ ಕಳವಳ ಹೊಂದಿದ್ದರು. ಈ ಕಾರಣದಲ್ಲಿಯೇ ಬಹುದೊಡ್ಡ ಮಟ್ಟದಲ್ಲಿ ಜನರಲ್ಲಿ ನಂಬಿಕೆಗಳನ್ನು ಬಿತ್ತತೊಡಗಿದ್ದರು.

ನೀವು ವಾರಣಾಸಿಯಲ್ಲಿ ಸತ್ತರೆ ನಿಮಗೆ ಮೋಕ್ಷ ದೊರಕುತ್ತದೆ. ಮಘರ್‌ನಲ್ಲಿ ಸತ್ತರೆ ನಿಮ್ಮದು ಕೋತಿಯ ಸಾವು ಆಗುತ್ತದೆ. ಅದರ ಅರ್ಥ ಅಲ್ಲಿ ಸತ್ತವರು ನರಕಕ್ಕೆ ಹೋಗುತ್ತಾರೆ ಎಂದು ಪ್ರಚಾರ ಮಾಡಿದ್ದರು.

ಕಬೀರರು ತಮ್ಮ ಕೊನೆಯ ದಿನಗಳನ್ನು ಮಘರ್‌ನಲ್ಲಿ ಕಳೆಯಲು ಪ್ರಜ್ಞಾಪೂರ್ವಕವಾಗಿ ನಿರ್ಧರಿಸಿದರು. ವಾರಣಾಸಿಯ ಬುದ್ಧಿಜೀವಿಗಳ ಅಪಪ್ರಚಾರವನ್ನು ಸುಳ್ಳು ಎಂದು ಸಾಬೀತುಪಡಿಸಿದರು' ಎಂದು ಸದ್ಗುರು ಕಬೀರ್ ಸಮಾಧಿ ಸ್ಥಳದ ವ್ಯವಸ್ಥಾಪಕ ಮಹಾಂತ ವಿಚಾರ ದಾಸ್ ವಿವರಿಸಿದರು.

ಪ್ರಧಾನಿ ಮೋದಿ ಅವರ ಆಗಮನದಿಂದ ಇಲ್ಲಿನ ಜನ ಅಭಿವೃದ್ಧಿಯ ಕನಸು ಕಾಣತೊಡಗಿದ್ದಾರೆ. ಮಘರ್ ಚಿತ್ರಣವನ್ನು ಬದಲಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಮೋದಿ ಅವರು ಮಘರ್ ಅಭಿವೃದ್ಧಿಗೆ ಈಗಾಗಲೇ 400 ಕೋಟಿ ರೂಪಾಯಿಯ ಯೋಜನೆಗೆ ಅನುಮೋದನೆ ನೀಡಿದ್ದಾರೆ.

ಈ ಮೂಲಕ ಮಘರ್ ದೇಶದ ನಕಾಶೆಯಲ್ಲಿ ಇನ್ನುಮುಂದೆ ಗುರುತಿಸಿಕೊಳ್ಳಲು ನೆರವಾಗಲಿದೆ ಎಂಬ ವಿಶ್ವಾಸ ಕಬೀರರ ಒಂದು ಸಮಾಧಿಯ ನಿರ್ವಹಣೆ ನಡೆಸುತ್ತಿರುವ ಖಾದಿಮ್ ಹುಸೇನ್ ಅನ್ಸಾರಿ.

ಮೋದಿ ಅವರು ಕಬೀರರ ಭಕ್ತರು ಇರುವ ರಾಜ್ಯದಲ್ಲಿ ಹುಟ್ಟಿದವರು. ಗುಜರಾತ್‌ನ ಬರೂಚ್‌ನಲ್ಲಿ ಅವರು ಕಬೀರ ಮಠವನ್ನು ಉದ್ಘಾಟನೆ ಮಾಡಿದ್ದರು ಕೂಡ. ಅವರ ಆಗಮನ ಕಬೀರರ ಸಂದೇಶಗಳನ್ನು ಮತ್ತು ಅವರ ಇಲ್ಲಿನ ಕೊನೆಯ ದಿನಗಳ ಕುರಿತ ತಿಳಿವಳಿಕೆಯನ್ನು ಎಲ್ಲೆಡೆ ಪಸರಿಸಲಿದೆ ಎನ್ನುತ್ತಾರೆ ಮಹಾಂತ ವಿಚಾರ ದಾಸ್.

English summary
Prime minister Narendra Modi to visit Maghar district of Uttar Pradesh on Thursday, the place where Saint Kabir has breathed his last breathe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X