ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ ನಲ್ಲಿ ಮತ್ತೊಮ್ಮೆ ಚೀನಾ ಅಧ್ಯಕ್ಷರ ಭೇಟಿ ಮಾಡಲಿದ್ದಾರೆ ಮೋದಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 15: ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮುಂದಿನ ತಿಂಗಳು (ನವೆಂಬರ್) ಅರ್ಜೆಂಟಿನಾದಲ್ಲಿ ಭೇಟಿ ಆಗಲಿದ್ದಾರೆ ಎಂದು ಸೋಮವಾರ ಚೀನಾ ರಾಯಭಾರಿ ತಿಳಿಸಿದ್ದಾರೆ.

ಜಿ20 ಸಮಾವೇಶದ ಜತೆಗೆ ಈ ಭೇಟಿ ಕಾರ್ಯಕ್ರಮವು ನಿಗದಿಯಾಗಿದೆ ಎಂದು ಆಫ್ಘನ್ ರಾಜತಾಂತ್ರಿಕರಿಗಾಗಿ ಆಯೋಜಿಸಿದ್ದ ಇಂಡೋ-ಚೀನಾ ತರಬೇತಿ ಕಾರ್ಯಕ್ರಮದಲ್ಲಿ ಅವರು ನೀಡಿದ್ದಾರೆ.

ಭಾರತಕ್ಕೆ ಚೀನಾ ಸೆಡ್ಡು: ವಿಮಾನ ನಿಲ್ದಾಣ ವಾಯುನೆಲೆಯಾಗಿ ಪರಿವರ್ತನೆಭಾರತಕ್ಕೆ ಚೀನಾ ಸೆಡ್ಡು: ವಿಮಾನ ನಿಲ್ದಾಣ ವಾಯುನೆಲೆಯಾಗಿ ಪರಿವರ್ತನೆ

ಕಳೆದ ಜುಲೈನಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ಕ್ಸಿ ಜಿನ್ ಪಿಂಗ್ ಅವರನ್ನು ಮೋದಿ ಭೇಟಿ ಆಗಿದ್ದರು. ಭಾರತ ಹಾಗೂ ಚೀನಾ ಮಧ್ಯೆ ಸ್ನೇಹ ವೃದ್ಧಿ ಆಗಬೇಕು ಎಂಬ ಕಾರಣಕ್ಕೆ ಆ ಭೇಟಿ ಮಾಡಿದ್ದರು. ಬ್ರಿಕ್ಸ್ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮೋದಿ ಅವರು, ಕಳೆದ ನಾಲ್ಕು ತಿಂಗಳಲ್ಲಿ ಮೂರನೇ ಸಲಕ್ಕೆ ಭೇಟಿ ಆಗಿದ್ದರು.

PM Modi, Xi Jinping to meet in Argentina in November

ನನ್ನ ಬಗ್ಗೆ ಭಾರತೀಯರು ಹೆಮ್ಮೆ ಪಡುತ್ತಾರೆ: ಇದು ಮೋದಿ ಮಾತು ನನ್ನ ಬಗ್ಗೆ ಭಾರತೀಯರು ಹೆಮ್ಮೆ ಪಡುತ್ತಾರೆ: ಇದು ಮೋದಿ ಮಾತು

ಏಪ್ರಿಲ್ ನಲ್ಲಿ ಚೀನಾದ ವುಹಾನ್ ನಗರದಲ್ಲಿ ನಡೆದ ಎರಡು ದಿನಗಳ ಸಮಾವೇಶದಲ್ಲಿ ಇಬ್ಬರು ನಾಯಕರು ಅನೌಪಚಾರಿಕವಾಗಿ ಭೇಟಿ ಆಗಿದ್ದರು. ಶಾಂಘೈ ಸಹಕಾರ ಸಂಸ್ಥೆ ಸಮಾವೇಶ ನಡೆದ ವೇಳೆ ಜೂನ್ ನಲ್ಲಿ ಕೂಡ ಮತ್ತೊಮ್ಮೆ ಭೇಟಿ ಆಗಿದ್ದರು.

English summary
Prime Minister Narendra Modi and China President Xi Jinping will meet in Argentina next month, Chinese ambassador to India said today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X