ಪ್ರಧಾನಿ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆ ಮಾಡಿದ್ದೇನು?

Written By:
Subscribe to Oneindia Kannada

ಅಹಮದಾಬಾದ್, ಮಾ 8: ವಿಶ್ವಮಹಿಳಾ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರನ್ನು ಬಲವಂತವಾಗಿ ಸಭಾಂಗಣದಿಂದ ಹೊರಹಾಕಿದ ಘಟನೆ ವರದಿಯಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಸಭಾಂಗಣದಿಂದ ಹೊರಹಾಕಲ್ಪಟ್ಟ ಮಹಿಳೆಯ ಹೆಸರು ಶಾಲಿನಿ, ಈಕೆ ದೆಹಲಿ ಹೊರವಲಯದ ಗ್ರೇಟರ್ ನೋಯ್ಡದವರು ಎನ್ನಲಾಗುತ್ತಿದೆ. (ಮಹಿಳಾ ದಿನಾಚರಣೆಯಂದು ಮೋದಿ ಹೇಳಿದ್ದು)

ಮಹಿಳಾ ದಿನಾಚರಣೆಯ ಪ್ರಯುಕ್ತ, ಬುಧವಾರ (ಮಾ 8) ಗಾಂಧೀನಗರದಲ್ಲಿ ಗುಜರಾತಿನ ಮಹಿಳಾ ಸರಪಂಚರಿಗೆ ಸ್ವಚ್ಚ ಶಕ್ತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

PM Narendra Modi's Women's Day event in Gujarat, a woman dragged out of venue

ಪ್ರಧಾನಿ ಪ್ರಶಸ್ತಿ ನೀಡುತ್ತಿದ್ದ ಸಂದರ್ಭದಲ್ಲಿ ಬಲವಂತವಾಗಿ ವೇದಿಕೆ ನುಗ್ಗಲು ಯತ್ನಿಸಿದ ಮಹಿಳೆಯನ್ನು ಭದ್ರತಾ ಅಧಿಕಾರಿಗಳು ಸಭೆಯಿಂದ ಹೊರಹಾಕಿದ್ದಾರೆ.

ಮಹಿಳೆ ಈ ರೀತಿ ನಡೆದುಕೊಳ್ಳಲು ಯಾರಾದರೂ ಆಕೆಗೆ ಪ್ರೇರಣೆ ನೀಡಿದ್ದರೇ ಅಥವಾ ಸಭೆಯಿಂದ ಹೊರಹಾಕಿದ ನಂತರ ಮಹಿಳೆಯನ್ನು ಬಂಧಿಸಲಾಗಿದೆಯೇ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ, ನಿಜವಾದ ಭಾರತ ಇರುವುದು ಹಳ್ಳಿಗಳಲ್ಲಿ ಎಂದು ಮಹಾತ್ಮಾ ಗಾಂಧೀಜಿ ಹೇಳುತ್ತಿದ್ದರು. 2019ರ ವರ್ಷ ಮಹಾತ್ಮ ಗಾಂಧಿ ಅವರ 150ನೇ ಜನ್ಮ ವರ್ಷಾಚರಣೆಯ ವರ್ಷ. ಅದನ್ನು ಸ್ಮರಣೀಯವಾಗಿ ನಡೆಸುತ್ತೇವೆ ಎಂದು ಮೋದಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi's Women's Day event in Gujarat, a woman dragged out of venue, India Today report.
Please Wait while comments are loading...