ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಮೋದಿ ಭಾಷಣ ಎಂದಾಕ್ಷಣ ಟ್ವಿಟ್ಟರ್‌ನಲ್ಲಿ ರಿಯಾಕ್ಷನ್ ಹೇಗಿತ್ತು?

|
Google Oneindia Kannada News

ನವದೆಹಲಿ, ಮೇ 12: ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಇಂದು ಸಂಜೆ 8 ಗಂಟೆಗೆ ಮಾತನಾಡಲಿದ್ದಾರೆ.

ಈ ಸುದ್ದಿ ಬರುತ್ತಿದ್ದಂತೆ ಒಂದು ಗಂಟೆಯೊಳಗೆ ಟ್ವಿಟ್ಟರ್‌ನಲ್ಲಿ 4 ಸಾವಿರ ಪ್ರತಿಕ್ರಿಯೆಗಳು ಬಂದಿವೆ.ಕೆಲವರು ಲೈಟ್ , ಕ್ಯಾಮರಾ, ಆಕ್ಷನ್ ಎಂದು ಬರೆದರೆ ಇನ್ನೂ ಕೆಲವರು ಹೃದಯ ವೇಗವಾಗಿ ಬಡಿದುಕೊಳ್ಳುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮೇ 12 ರ ರಾತ್ರಿ 8ಕ್ಕೆ ಭಾಷಣದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮೇ 12 ರ ರಾತ್ರಿ 8ಕ್ಕೆ ಭಾಷಣ

ಸೋಮವಾರ ಸತತ 7 ಗಂಟೆಗಳ ಕಾಲ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಮ್ಯಾರಥಾನ್ ಸಭೆ ನಡೆಸಿದ್ದರು. ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳಿಸುವುದರ ಬಗ್ಗೆ ಪ್ರಧಾನಿಯವರು ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿದ್ದರು.

PM Modi Will Address Nation Today How Twitter Reacted To News

ಭಾರತದಲ್ಲಿ 54 ದಿನಗಳಿಂದ ಲಾಕ್‌ಡೌನ್ ಇದೆ. ಎರಡು ಬಾರಿ ಲಾಕ್‌ಡೌನ್ ವಿಸ್ತರಿಸಲಾಗಿತ್ತು. ಮೇ 17ಕ್ಕೆ ಲಾಕ್‌ಡೌನ್ ವಿಸ್ತರಣೆ ಪೂರ್ಣಗೊಳ್ಳಲಿದೆ.

ಭಾರತ ಲಾಕ್ ಡೌನ್ ಸಡಿಲಿಕೆ ಸುಳಿವು ಕೊಟ್ಟರಾ ಪ್ರಧಾನಮಂತ್ರಿ ಮೋದಿ?ಭಾರತ ಲಾಕ್ ಡೌನ್ ಸಡಿಲಿಕೆ ಸುಳಿವು ಕೊಟ್ಟರಾ ಪ್ರಧಾನಮಂತ್ರಿ ಮೋದಿ?

ಆದರೆ ಟ್ವೀಟಿಗರಿಗೆ ಲಾಕ್‌ಡೌನ್ ತೆರವುಗೊಳಿಸುತ್ತಾರಾ ಅಥವಾ ವಿಸ್ತರಣೆ ಮಾಡುತ್ತಾರಾ ಎಂಬುದೇ ಕುತೂಹಲದ ಸಂಗತಿಯಾಗಿದೆ.

PM Modi Will Address Nation Today How Twitter Reacted To News

3ನೇ ಹಂತದ ಲಾಕ್ ಡೌನ್ ಇದೇ ಭಾನುವಾರ ಮೇ 17ರಂದು ಕೊನೆಗೊಳ್ಳಲಿದ್ದು ಅದರ ಸಡಿಲಿಕೆ ಕಾರ್ಯತಂತ್ರ ಬಗ್ಗೆ ಮತ್ತು ಕೊರೋನಾ ನಿಯಂತ್ರಣ ಬಗ್ಗೆ ನಿನ್ನೆ ಪ್ರಧಾನಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಸಂವಾದ ನಡೆಸಿದ್ದರು.

ಅದರಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದಿದ್ದವು. ಈ ನಿಟ್ಟಿನಲ್ಲಿ ಇಂದು ಮೋದಿಯವರು ಮಾಡುತ್ತಿರುವ ಭಾಷಣ ಮಹತ್ವದ್ದಾಗಿದ್ದು ಲಾಕ್ ಡೌನ್ ಸಡಿಲಿಕೆ ಬಗ್ಗೆ ಪ್ರಧಾನಿ ಏನು ಹೇಳುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

English summary
As soon as Prime Minister's office made the announcement about the address that is expected to spell out at 8 pm today about the future course of action amid COVID-19 outbreak and lockdown, netizens explode Twitter with reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X