ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗಾ ತಟದಲ್ಲಿ ಪೌರ ಕಾರ್ಮಿಕರ ಪಾದ ತೊಳೆದ ಪ್ರಧಾನಿ ಮೋದಿ

ಗಂಗಾ ತಟದಲ್ಲಿ ಪೌರ ಕಾರ್ಮಿಕರ ಪಾದ ತೊಳೆದ ಪ್ರಧಾನಿ ಮೋದಿ

|
Google Oneindia Kannada News

Recommended Video

ಗಂಗಾ ತಟದಲ್ಲಿ ಪೌರ ಕಾರ್ಮಿಕರ ಪಾದ ತೊಳೆದ ಪ್ರಧಾನಿ ಮೋದಿ | Oneindia Kannada

ಪ್ರಯಾಗರಾಜ್, ಫೆ 24: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುಂಭಮೇಳದಲ್ಲಿ ಭಾಗವಹಿಸಿ ಗಂಗಾನದಿಗೆ ಗಂಗಾರತಿ ಮಾಡಿದ ಪ್ರಧಾನಿ ಮೋದಿ, ಪೌರ ಕಾರ್ಮಿಕರ ಪಾದತೊಳೆದದ್ದು ವಿಶೇಷವಾಗಿತ್ತು.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆಗೆ ಆಗಮಿಸಿದ ಮೋದಿ, ಗಂಗಾ ನದಿಯಲ್ಲಿ ಪುಣ್ಯಸ್ನಾನವನ್ನೂ ಮಾಡಿದರು. ಇದಾದ ನಂತರ ಸಂಗಂ ಘಾಟ್ ನಲ್ಲಿ ಗಂಗಾನದಿಗೆ ಪೂಜೆ ಸಲ್ಲಿಸಿದರು.

ಇದಾದ ನಂತರ ಓರ್ವ ಮಹಿಳೆಯೂ ಸೇರಿದಂತೆ ಪೌರ ಕಾರ್ಮಿಕರ ಪಾದವನ್ನು ಪ್ರಧಾನಿ ತೊಳೆದರು. ತನ್ನ ಪಾದವನ್ನು ತೊಳೆದ ಬಗ್ಗೆ ಮಹಿಳೆ ಪ್ರತಿಕ್ರಿಯಿಸಿ, ಇದು ಕನಸೋ ನನಸೋ ಎಂದು ಗೊತ್ತಾಗುತ್ತಿಲ್ಲ. ಮೋದಿ ಇನ್ನೊಂದು ಅವಧಿಗೂ ಪ್ರಧಾನಿಯಾಗಬೇಕೆಂದು ಆಶಿಸಿದರು.

ಕಾಲಜ್ಞಾನ ಸ್ವಾಮೀಜಿ ನುಡಿದ ಪ್ರಧಾನಿ ಮೋದಿಯ ಭವಿಷ್ಯಕಾಲಜ್ಞಾನ ಸ್ವಾಮೀಜಿ ನುಡಿದ ಪ್ರಧಾನಿ ಮೋದಿಯ ಭವಿಷ್ಯ

ಕುಂಭಮೇಳದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿದ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಈ ಮಹಾನ್ ಮೇಳವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ನನ್ನ ಹೃದಯದ ನಮಸ್ಕಾರಗಳು ಎಂದರು.

PM Modi Washes Feet of Sanitation Workers At Kumbh, Performs Ganga Arti

ಇಷ್ಟೊಂದು ಸ್ವಚ್ಚ ಗಂಗೆಯನ್ನು ನಾನು ನೋಡುತ್ತಿರುವುದು ಇದೇ ಮೊದಲು, ಇದೆಲ್ಲಾ ಸಾಧ್ಯವಾಗಿದ್ದು ಪೌರಕಾರ್ಮಿಕರಿಂದ. ನಿಮ್ಮ ಈ ಒಳ್ಲೆ ಕೆಲಸವನ್ನು ದೇಶದೆಲ್ಲಡೆ ಜನತೆಗೆ ವಿವರಿಸುತ್ತೇನೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಅಚ್ಛೇ ದಿನ್ ಎಲ್ಲಿ, ಮೋದಿಗೆ ಸಿದ್ದರಾಮಯ್ಯ ಟ್ವೀಟ್ ಬಾಣಅಚ್ಛೇ ದಿನ್ ಎಲ್ಲಿ, ಮೋದಿಗೆ ಸಿದ್ದರಾಮಯ್ಯ ಟ್ವೀಟ್ ಬಾಣ

ಇದಕ್ಕೂ ಮೊದಲು 75 ಸಾವಿರ ಕೋಟಿಯ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಮೊದಲ ಹಂತದಲ್ಲಿ ಎರಡು ಸಾವಿರ ಕೋಟಿ ರೂಪಾಯಿಯನ್ನು ಗೋರಖಪುರ ಮತ್ತು ಪ್ರಯಾಗರಾಜ್ ನಲ್ಲಿ ರೈತರಿಗೆ ವಿತರಿಸಿದರು.

English summary
Prime Minister Narendra Modi on Sunday (Feb 24) performed Ganga Arti and washed the feet of sanitation workers during his visit to Prayagraj to attend the Kumbh Mela.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X