ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಟ್ ಫಾರ್ ಟ್ಯಾಟ್: ಮೋದಿಯ INS ಟೀಕೆಗೆ ಕಾಂಗ್ರೆಸ್ಸಿನ IAF ಉತ್ತರ

|
Google Oneindia Kannada News

ನವದೆಹಲಿ, ಮೇ 9: ಲೋಕಸಭಾ ಚುನಾವಣೆಯ ಎರಡು ಹಂತದ ಮತದಾನ ಬಾಕಿಯಿರುವ ಹೊತ್ತಿನಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಆರೋಪ, ಪ್ರತ್ಯಾರೋಪ ಇನ್ನೊಂದು ಮಜಲಿನತ್ತ ಸಾಗುತ್ತಿದೆ.

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ವಿರುದ್ದ ಟೀಕೆಯನ್ನು ಮುಂದುವರಿಸಿರುವ ಪ್ರಧಾನಿ ಮೋದಿ, ಐಎನ್ಎಸ್ ವಿಕ್ರಾಂತ್ ನೌಕಾಪಡೆಯ ಹಡಗನ್ನು, ಲಕ್ಷದ್ವೀಪಕ್ಕೆ ಮೋಜು ಮಾಡಲು ರಾಜೀವ್ ಬಳಸಿಕೊಂಡಿದ್ದರು ಎಂದು ಮೋದಿ ಆರೋಪಿಸಿದ್ದರು.

'ಐಎನ್‌ಎಸ್ ವಿರಾಟ್‌ನಲ್ಲಿ ರಜೆಯ ಮೋಜು ಅನುಭವಿಸಿದ್ದ ರಾಜೀವ್ ಕುಟುಂಬ: ಮೋದಿ 'ಐಎನ್‌ಎಸ್ ವಿರಾಟ್‌ನಲ್ಲಿ ರಜೆಯ ಮೋಜು ಅನುಭವಿಸಿದ್ದ ರಾಜೀವ್ ಕುಟುಂಬ: ಮೋದಿ

ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಭಾರತೀಯ ವಾಯುಪಡೆಯ ವಿಮಾನಗಳನ್ನು ಮೋದಿ ತಮ್ಮ ಸ್ವಂತ ಟ್ಯಾಕ್ಸಿಯಂತೆ ಬಳಸಿಕೊಂಡಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.

PM Modi used IAF jets for election campaigning by paying nominal amount: Congress tweet

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ, ಕೇವಲ 744 ರೂಪಾಯಿಗಳನ್ನು ಪಾವತಿಸಿ, ಮೋದಿ ಐಎಎಫ್ ಜೆಟ್ ಗಳನ್ನು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.

ಬೇರೆಯವರ ಬಗ್ಗೆ ಮಾತನಾಡಲು ನಿಮಗೆ ನಾಚಿಕೆಯಾಗಬೇಕು, ನೀವು ಮಾಡಿದ ಪಾಪಗಳ ಭಯ ನಿಮಗೆ ಕಾಡುತ್ತಿದೆ ಎಂದು ಸುರ್ಜೇವಾಲ, ಮೋದಿಯನ್ನು ಟೀಕಿಸಿದ್ದಾರೆ.

ಐಎನ್‌ಎಸ್‌ ವಿರಾಟ್ ನೌಕೆಯನ್ನು ದೇಶದ ಸಮುದ್ರ ತೀರದ ಗಡಿಯಲ್ಲಿ ಕಾವಲು ಕಾಯಲು ನಿಯೋಜಿಸಲಾಗಿತ್ತು. ಆದರೆ, ಅದನ್ನು ರಜೆಯನ್ನು ಕಳೆಯಲು ದ್ವೀಪಕ್ಕೆ ಹೊರಟಿದ್ದ ರಾಜೀವ್ ಗಾಂಧಿ ಮತ್ತು ಅವರ ಕುಟುಂಬವನ್ನು ಕರೆಯೊಯ್ಯಲು ಬಳಸಲಾಯಿತು. ಇದು ರಾಷ್ಟ್ರೀಯ ಭದ್ರತೆಯೊಂದಿಗೆ ಮಾಡಿಕೊಂಡ ರಾಜಿಯಲ್ಲವೇ? ಎಂದು ಮೋದಿ ಪ್ರಶ್ನಿಸಿದ್ದರು.

English summary
Prime Minister Narendra Modi used IAF jets for election campaigning by paying nominal amount: Congress tweet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X