ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4 ನೇ ವಾರ್ಷಿಕೋತ್ಸವಕ್ಕೆ ಪ್ರಜೆಗಳಿಗೆ ತಲೆಬಾಗಿದ ಮೋದಿ

|
Google Oneindia Kannada News

ನವದೆಹಲಿ, ಮೇ 26: "2014 ರ ಈ ದಿನ ಭಾರತದ ಪರಿವರ್ತನೆಯ ನಮ್ಮ ಪಯಣ ಆರಂಭವಾದ ದಿನ" ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

ಕೇಂದ್ರದಲ್ಲಿ ಎನ್ ಡಿಎ ನೇತೃತ್ವದ ಮೈತ್ರಿ ಸರ್ಕಾರ ಬಹುಮತ ಪಡೆದು ಅಧಿಕಾರಕ್ಕೆ ಬಂದು ಇಂದಿಗೆ ಬರೋಬ್ಬರಿ ನಾಲ್ಕು ವರ್ಷಗಳಾಗಿವೆ. 2014 ರ ಮೇ 27 ರಂದು ನರೇಂದ್ರ ಮೋದಿಯವರು ಪ್ರಧಾನಿ ಪಟ್ಟ ಅಲಂಕರಿಸಿದ್ದರು. ಅದರ ಸವಿನೆನಪಿಗಾಗಿ ದೇಶದಾದ್ಯಂತ ಮೋದಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಸರ್ಕಾರಕ್ಕೆ ಬಹುಮತ ನೀಡಿ, ನಾಲ್ಕು ವರ್ಷಗಳ ಕಾಲ ಸುಭದ್ರ ಆಡಳಿತ ನೀಡಲು ಸಹಕರಿಸಿದ ದೇಶಬಾಂಧವರಿಗೆ ಮೋದಿ ಟ್ವೀಟ್ ಮೂಲಕ ತಲೆಬಾಗಿದ್ದಾರೆ.

PM Modi tweet on 4th year anniversary of NDA government

ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ: ಹರ್ಷವೋ, ನಿರಾಶೆಯೋ?!ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ: ಹರ್ಷವೋ, ನಿರಾಶೆಯೋ?!

"2014 ರ ಈ ದಿನ ಭಾರತದ ಪರಿವರ್ತನೆಯ ನಮ್ಮ ಪಯಣ ಆರಂಭವಾದ ದಿನ. ಕಳೆದ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿಯೆಂಬುದು ಒಂದು ಕ್ರಾಂತಿಯೇ ಆಗಿದೆ. ಪ್ರತಿಯೊಬ್ಬ ಭಾರತೀಯನೂ ಈ ಕ್ರಾಂತಿಯಲ್ಲಿ ಸಮರ್ಥ ಪಾತ್ರವಹಿಸಿದ್ದಾನೆ. 125 ಕೋಟಿ ಭಾರತೀಯರು ಭಾರತವನ್ನು ಹೊಸ ಔನ್ನತ್ಯಕ್ಕೆ ಒಯ್ದಿದ್ದಾರೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮೋದಿ ಸಾಧನೆ ಪ್ರಚಾರಕ್ಕೆ ಬಿಜೆಪಿಯಿಂದ ತರಹೇವಾರಿ ಯೋಜನೆ!ಮೋದಿ ಸಾಧನೆ ಪ್ರಚಾರಕ್ಕೆ ಬಿಜೆಪಿಯಿಂದ ತರಹೇವಾರಿ ಯೋಜನೆ!

"ನಮ್ಮ ಸರ್ಕಾರದ ಬಗ್ಗೆ ಅಚಲ ನಂಬಿಕೆ ಹೊಂದಿರುವ ನನ್ನೆಲ್ಲ ಭಾರತೀಯ ನಾಗರಿಕರಿಗೆ ನಾನು ತಲೆಬಾಗುತ್ತೇನೆ. ನಿಮ್ಮ ಈ ಪ್ರೀತಿ ಮತ್ತು ಬೆಂಬಲವೇ ನಮ್ಮ ಇಡೀ ಸರ್ಕಾರಕ್ಕೆ ದೊಡ್ಡ ಸ್ಪೂರ್ತಿ. ನಾವು ಇದೇ ರೀತಿಯ ಸಮರ್ಪಣಾ ಭಾವ ಮತ್ತು ಹುರುಪಿನಿಂದ ಈ ದೇಶದ ಜನರ ಸೇವೆ ಮಾಡುತ್ತೇವೆ" ಎಂದು ಸಹ ಮೋದಿ ಟ್ವೀಟ್ ಮಾಡಿದ್ದಾರೆ.

ಮೋದಿ ಸರ್ಕಾರದ ನಾಲ್ಕು ವರ್ಷದ ಸಾಧನೆಯನ್ನು ಜನಸಾಮಾನ್ಯರಿಗೆ ತಿಳಿಸುವ ಸಲುವಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಇಂದಿನಿಂದ 15 ದಿನಗಳ ಕಾಲ ರಾಷ್ಟ್ರದಾದ್ಯಂತ ಓಡಾಡಿ ಸಾಧನೆಯ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಿದೆ.

English summary
On 4th anniversary of his government Prime minister Narendra Modi tweeted, "On this day in 2014, we began our journey of working towards India’s transformation. Over the last four years, development has become a vibrant mass movement, with every citizen feeling involved in India's growth trajectory. 125 crore Indians are taking India to great heights!"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X