ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಜಪಾನ್ ಪ್ರಧಾನಿ ಭಾರತ ಭೇಟಿ, ಅಹಮದಾಬಾದ್ ನಲ್ಲಿ ಭವ್ಯ ಸ್ವಾಗತ

By Sachhidananda Acharya
|
Google Oneindia Kannada News

ಅಹಮದಾಬಾದ್, ಸೆಪ್ಟೆಂಬರ್ 13: ಜಪಾನ್-ಭಾರತ 12ನೇ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಪ್ರಧಾನಿ ಶಿಂಜೋ ಅಬೆ ಇಂದು ಅಹಮದಾಬಾದ್ ಗೆ ಆಗಮಿಸಲಿದ್ದಾರೆ. ಅವರಿಗೆ ಭವ್ಯ ಸ್ವಾಗತ ಕೋರಲು ಅಹಮದಾಬಾದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಕಾತರದಿಂದ ಕಾಯುತ್ತಿದ್ದಾರೆ.

ಬುಲೆಟ್‌ ಟ್ರೈನ್ ಯೋಜನೆಗೆ ಗುರುವಾರ ಪ್ರಧಾನಿ ಅಡಿಗಲ್ಲುಬುಲೆಟ್‌ ಟ್ರೈನ್ ಯೋಜನೆಗೆ ಗುರುವಾರ ಪ್ರಧಾನಿ ಅಡಿಗಲ್ಲು

ಸರಿಯಾಗಿ ಮೂರು ವರ್ಷಗಳ ಕೆಳಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊದಲ ವಿದೇಶಿ ಪ್ರವಾಸವನ್ನು ಜಪಾನಿನಿಂದ ಆರಂಭಿಸಿದಾಗ ಇದೇ ರೀತಿ ಶಿಂಜೋ ಅಬೆ ಮೋದಿಯವರಿಗೆ ಭವ್ಯ ಸ್ವಾಗತ ಕೋರಿದ್ದರು. ಇದೀಗ ಪ್ರಧಾನಿ ಮೋದಿಯವರ ಸರದಿ.

PM Modi to welcome his Japanese PM Shinzo Abe in Ahmedabad today

ಅಹಮದಾಬಾದ್ ವಿಮಾನ ನಿಲ್ದಾಣದಿಂದ ಅಬೆಯವರನ್ನು ಸ್ವತಃ ಮೋದಿ ತೆರೆದ ಜೀಪಿನಲ್ಲಿ ಸಾಬರಮತಿ ಆಶ್ರಮಕ್ಕೆ ರೋಡ್ ಶೋ ಮೂಲಕ ಕರೆದೊಯ್ಯಲಿದ್ದಾರೆ. ಈ ವೇಳೆ 28 ರಾಜ್ಯಗಳ ಟ್ಯಾಬ್ಲೋಗಳು, ಶಾಲಾ ಮಕ್ಕಳು ರೋಡ್ ಶೋಗೆ ಕಳೆ ತುಂಬಲಿದ್ದಾರೆ.

ರೋಡ್ ಶೋ ಹಿನ್ನಲೆಯಲ್ಲಿ ನರೇಂದ್ರ ಮೋದಿ ಮತ್ತು ಶಿಂಜೋ ಅಬೆಯವರ ಹೋರ್ಡಿಂಗ್ ಮತ್ತು ಫ್ಲೆಕ್ಸ್ ಗಳನ್ನು ದಾರಿ ತುಂಬಾ ಹಾಕಲಾಗಿದೆ.

ನಮಗೆ ವಂದೇ ಮಾತರಂ ಹೇಳಲು ಹಕ್ಕು ಇದೆಯೇ? : ಮೋದಿ ಪ್ರಶ್ನೆನಮಗೆ ವಂದೇ ಮಾತರಂ ಹೇಳಲು ಹಕ್ಕು ಇದೆಯೇ? : ಮೋದಿ ಪ್ರಶ್ನೆ

ಮಹಾತ್ಮ ಗಾಂಧಿಯವರ ಸಾಬರಮತಿ ಆಶ್ರಮದಿಂದ ಉಭಯ ನಾಯಕರು 16ನೇ ಶತಮಾನದ ಸಿದಿ ಸಯ್ಯದ್ ಕಿ ಜಾಲಿ ಮಸೀದಿಗೆ ಭೇಟಿ ನೀಡಲಿದ್ದಾರೆ. ನಂತರ ಉಭಯ ನಾಯಕರು ಅಹಮದಾಬಾದ್ ನ ಖ್ಯಾತ ರೆಸ್ಟೋರೆಂಟ್ ನಲ್ಲಿ ರಾತ್ರಿಯ ಊಟ ಮಾಡಲಿದ್ದಾರೆ.

ನಂತರ 100 ವರ್ಷ ಹಳೆಯ ಸಾಬರಮತಿಯ ಎಲ್ಲಿಸ್ ಸೇತುವೆಯ ಮೇಲೆ ಉಭಯ ನಾಯಕರು ರಾತ್ರಿಯ ವಾಕ್ ಮಾಡಲಿದ್ದಾರೆ. ಭೇಟಿ ಹಿನ್ನಲೆಯಲ್ಲಿ ಸೇತುವೆಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.

ಈ ಭೇಟಿಯ ಕವರೇಜ್ ಗೆ ದೂರದರ್ಶನ ವಾಹಿನಿ 100 ಕ್ಯಾಮೆರಾಗಳನ್ನು ಮತ್ತು 300 ಸಿಬ್ಬಂದಿಗಳನ್ನು ನೇಮಿಸಿದೆ. ಇದರಲ್ಲಿ 40 ಕ್ಯಾಮೆರಾಗಳು ಮೋದಿಯವರ ರೋಡ್ ಶೋ ಕವರ್ ಮಾಡಲಿವೆ.

ಗುರುವಾರ ಉಭಯ ನಾಯಕರು ಗಾಂಧಿನಗರ ಮಹಾತ್ಮಾ ಮಂದಿರದಲ್ಲಿ ನಡೆಯಲಿರುವ ಭಾರತ-ಜಪಾನ್ ನ 12 ನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿ, ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಇಲ್ಲಿ ತೆಗೆದುಕೊಳ್ಳಲಾಗುತ್ತದೆ.

ಇನ್ನು ಮಹತ್ವಾಕಾಂಕ್ಷಿ ಬುಲೆಟ್ ರೈಲು ಯೋಜನೆಗೆ ಚಾಲನೆ, ಬಹಿರಂಗ ಸಭೆಗಳೂ ಗುರುವಾರ ಆಯೋಜನೆಯಾಗಿವೆ.

English summary
PM Narendra Modi will today welcome Shinzo Abe at Ahmedabad in Gujarat. Abe is coming to India on a two-day visit to attend the India-Japan annual summit meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X