• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರ್ಚ್ 12ರಂದು ಮೊದಲ 'ಕ್ವಾಡ್' ಸಮ್ಮೇಳನ: ಮೋದಿ-ಬೈಡನ್ ಭೇಟಿ

|

ನವದೆಹಲಿ, ಮಾರ್ಚ್ 10: ನಾಲ್ಕು ದೇಶಗಳ ಕಾರ್ಯಯೋಜನೆ ಚೌಕಟ್ಟಿನ ಕುರಿತಾದ ನಾಯಕರ ಮೊದಲ ಸಭೆ (ಕ್ವಾಡ್) ಮಾರ್ಚ್ 12ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಈ ಅನ್‌ಲೈನ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಈ ನಾಲ್ಕು ದೇಶಗಳ ನಾಯಕರು ಹಂಚಿಕೆಯಾದ ಹಿತಾಸಕ್ತಿಗಳ ಜಾಗತಿಕ ಹಾಗೂ ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲಿದ್ದಾರೆ. ಜತೆಗೆ ಮುಕ್ತ, ತೆರೆದ ಹಾಗೂ ಒಳಗೊಳ್ಳುವಿಕೆಯ ಇಂಡೋ-ಪೆಸಿಫಿಕ್ ಪ್ರದೇಶವನ್ನು ನಿಭಾಯಿಸುವತ್ತ ಸಹಕಾರದ ಕುರಿತಾದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.

ಭಾರತದ ಬಗ್ಗೆ ರಷ್ಯಾ ಮುನಿಸು: ನನೆಗುದಿಗೆ ಬಿದ್ದ ವಾರ್ಷಿಕ ಸಮ್ಮೇಳನಭಾರತದ ಬಗ್ಗೆ ರಷ್ಯಾ ಮುನಿಸು: ನನೆಗುದಿಗೆ ಬಿದ್ದ ವಾರ್ಷಿಕ ಸಮ್ಮೇಳನ

ಪೂರೈಕೆ ಸರಪಳಿಯ ಚೇತರಿಕೆ, ಹೊಸ ಸೃಷ್ಟಿ ಹಾಗೂ ಮಹತ್ವದ ತಂತ್ರಜ್ಞಾನಗಳು, ಸಮುದ್ರತೀರ ಭದ್ರತೆ ಮತ್ತು ಹವಾಮಾನ ವೈಪರೀತ್ಯ ಸೇರಿದಂತೆ ಸಮಕಾಲೀನ ಸವಾಲುಗಳ ಕುರಿತು ಸಹ ಅಭಿಪ್ರಾಯಗಳ ವಿನಿಮಯಕ್ಕೆ ಸಮಾವೇಶದಲ್ಲಿ ಅವಕಾಶ ಸಿಗಲಿದೆ.

ಇದಲ್ಲದೆ ಮುಖ್ಯವಾಗಿ ಕೋವಿಡ್-19 ಸಾಂಕ್ರಾಮಿಕವನ್ನು ಎದುರಿಸುವ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸುರಕ್ಷಿತ, ಪರಿಣಾಮಕಾರಿ ಹಾಗೂ ಕಡಿಮೆ ದರದಲ್ಲಿ ಲಸಿಕೆಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಪಾಲುದಾರಿಕೆ ಹೊಂದುವುದರ ಕುರಿತು ಚರ್ಚೆ ನಡೆಯಲಿದೆ.

ಇದಕ್ಕೂ ಮುನ್ನ ಜಪಾನ್ ಪ್ರಧಾನಿ ಯೊಶಿಹಿಡೆ ಅವರ ಜತೆಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮಾತುಕತೆ ನಡೆಸಿದರು. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಸಂಬಂಧ ಕ್ವಾಡ್ ಚೌಕಟ್ಟಿನಲ್ಲಿ ಹಾಗೂ ದ್ವಿಪಕ್ಷೀಯವಾಗಿ ಸಹಭಾಗಿತ್ವವನ್ನು ತೀವ್ರಗೊಳಿಸುವುದರ ಬಗ್ಗೆ ಸಮಾಲೋಚನೆ ನಡೆಸಿದರು.

English summary
PM Narendra Modi, Australian PM Scott Morrison, Japanese PM Yoshihide Suga and US President Joe Biden will take part of first leaders summit of Quadrilateral Framework on March 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X