ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 21ರಂದು ಭಾರತೀಯ ಅಂಚೆ ಪಾವತಿ ಬ್ಯಾಂಕ್ ಗೆ ಪ್ರಧಾನಿ ಚಾಲನೆ

|
Google Oneindia Kannada News

ನವದೆಹಲಿ, ಆಗಸ್ಟ್ 5: ಇದೇ ತಿಂಗಳ 21ನೇ ತಾರೀಕಿನಂದು ಬಹು ನಿರೀಕ್ಷಿತ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಶಾಖೆಯನ್ನು ಹೊಂದಿರುವುದು ಮತ್ತು ಗ್ರಾಮೀಣ ಪ್ರದೇಶದ ಆರ್ಥಿಕ ಸೇವೆಗಳ ಕಡೆ ಗಮನ ಹರಿಸುವುದು ಈ ಯೋಜನೆ ಮೂಲ ಉದ್ದೇಶ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ ಇಪ್ಪತ್ತೊಂದನೇ ತಾರೀಕಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಾವತಿ ಬ್ಯಾಂಕ್ ನ ಅಧಿಕೃತ ಚಾಲನೆಗೆ ಸಮಯ ನೀಡಿದ್ದಾರೆ. ಈಗಾಗಲೇ ಬ್ಯಾಂಕ್ ನ ಎರಡು ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಬಾಕಿ 648 ಶಾಖೆಗಳನ್ನು ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಆರಂಭಿಸಲಾಗುವುದು ಎಂದು ಮಾಹಿತಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಂಚೆ ದಿನ: ಮನೆ ಮನೆಗೆ ಸೈಕಲ್ ತುಳಿಯುವ ಅಂಚೆಯಣ್ಣನ ಕಥೆಯಿದು..ಅಂಚೆ ದಿನ: ಮನೆ ಮನೆಗೆ ಸೈಕಲ್ ತುಳಿಯುವ ಅಂಚೆಯಣ್ಣನ ಕಥೆಯಿದು..

ಭಾರತೀಯ ಅಂಚೆ ಇಲಾಖೆಯು ದೇಶಾದ್ಯಂತ ಇರುವ 1.55 ಲಕ್ಷ ಅಂಚೆ ಕಚೇರಿ ಶಾಖೆಗಳ ಮೂಲಕ ಈ ವರ್ಷದ ಕೊನೆ ಹೊತ್ತಿಗೆ ಸೇವೆ ತಲುಪುವ ಗುರಿ ಹೊಂದಿದೆ. ಹಾಗಾದಲ್ಲಿ ಇದು ದೇಶದ ಅತಿ ದೊಡ್ಡ ಬ್ಯಾಂಕಿಂಗ್ ಜಾಲವಾಗಲಿದ್ದು, ನೇರವಾಗಿ ಗ್ರಾಮ ಮಟ್ಟದಲ್ಲಿ ತಲುಪುವಂತೆ ಆಗುತ್ತದೆ.

India Post

ಅಂದಹಾಗೆ, ಭಾರತೀಯ ಅಂಚೆ ಪಾವತಿ ಬ್ಯಾಂಕ್ ದೇಶದಲ್ಲಿ ಅನುಮತಿ ಪಡೆದ ಮೂರನೇ ಪಾವತಿ ಬ್ಯಾಂಕ್. ಇದಕ್ಕೂ ಮುಂಚೆ ಏರ್ ಟೆಲ್ ಹಾಗೂ ಪೇಟಿಎಂಗೆ ಅನುಮತಿ ಸಿಕ್ಕಿದೆ. ಪೇಮೆಂಟ್ ಬ್ಯಾಂಕ್ ಗಳು ಪ್ರತಿ ಖಾತಿಯಿಂದ ಒಂದು ಲಕ್ಷದವರೆಗೆ ಠೇವಣಿ ಸ್ವೀಕರಿಸುತ್ತದೆ.

ಜತೆಗೆ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಆರ್ ಟಿಜಿಎಸ್, ಎನ್ ಇಎಫ್ ಟಿ, ಐಎಂಪಿಎಸ್ ವ್ಯವಹಾರಗಳನ್ನು ಸಹ ಹೊದಿದ್ದು, ಗ್ರಾಹಕರು ಯಾವುದೇ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ, ಸ್ವೀಕೃತಿ ಮಾಡಬಹುದು. ಸರಕಾರವು ಈ ಪಾವತಿ ಬ್ಯಾಂಕ್ ಮೂಲಕ ನರೇಗಾ ಕೂಲಿ, ಸಬ್ಸಿಡಿ, ಪಿಂಚಣಿ ಮೊದಲಾದವು ವಿತರಿಸಬಹುದು.

ಐಪಿಪಿಬಿ ಅಪ್ಲಿಕೇಷನ್ ಕೂಡ ಅದೇ ದಿನದಂದು ಆರಂಭವಾಗುವ ಸಾಧ್ಯತೆ ಇದ್ದು, ಆ ಮೂಲಕ ಫೋನ್ ರೀಚಾರ್ಜ್, ಬಿಲ್ ಪಾವತಿ, ಡಿಟಿಎಚ್ ಸೇವೆ, ಕಾಲೇಜು ಶುಲ್ಕ ಇತ್ಯಾದಿಯನ್ನು ಪಾವತಿಸಬಹುದು.

English summary
Prime Minister Narendra Modi on August 21 will launch long-awaited India Post Payments Bank (IPPB) that will have at least one branch in every district and focus on financial services in rural areas, a senior official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X