ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ವಾಡ್ ನಾಯಕರ ಸಭೆ: ಪ್ರಧಾನಿ ಮೋದಿ ಭಾಗಿ

|
Google Oneindia Kannada News

ನವದೆಹಲಿ, ಮಾರ್ಚ್ 3: ಇಂದು ರಾತ್ರಿ ಕ್ವಾಡ್ ನಾಯಕರ ಸಭೆ ನಡೆಯಲಿದ್ದು, ಇಂಡೋ ಪೆಸಿಫಿಕ್‌ನಲ್ಲಿ ಯುದ್ಧದ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಇಂದು ಸಂಜೆ 7.30ಕ್ಕೆ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಇಂಡೋ ಫೆಸಿಫಿಕ್​ನಲ್ಲಿ ಉಕ್ರೇನ್​ ಮೇಲೆ ಯುದ್ಧದ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕ್ವಾಡ್​ನಲ್ಲಿರುವ ಅಮೆರಿಕ, ಭಾರತ, ಜಪಾನ್, ಆಸ್ಟ್ರೇಲಿಯಾ ದೇಶಗಳು.

ಉಕ್ರೇನ್​ನಿಂದ ವಾಪಸಾದ ವಿದ್ಯಾರ್ಥಿಗಳ ಜತೆ ಮೋದಿ ಮಾತುಕತೆ ನಡೆಸಿದ್ದಾರೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿದ್ಯಾರ್ಥಿಗಳ ಜತೆ ಮಾತನಾಡಿದ್ದು ಉಕ್ರೇನ್​​ನಲ್ಲಿನ ಅನುಭವಗಳನ್ನ ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.

"ಉಕ್ರೇನ್‌ನಲ್ಲಿ ನಮ್ಮವರು ಸಿಲುಕಿರುವಾಗ ಪ್ರಚಾರದಲ್ಲೇ ಮೋದಿ ಬ್ಯುಸಿ"

ಕ್ವಾಡ್‌ನ ಸಮಕಾಲೀನ ಮತ್ತು ಸಕಾರಾತ್ಮಕ ಕಾರ್ಯಸೂಚಿಗಳ ಭಾಗವಾಗಿ ಪ್ರಕಟಿಸಿದ ಯೋಜನೆಗಳ ಅನುಷ್ಠಾನದ ಪ್ರಯತ್ನಗಳ ಕುರಿತ ಕೂಡ ಸಭೆಯಲ್ಲಿ ಪರಾಮರ್ಶೆ ನಡೆಸಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

PM Modi To Join Other Quad Leaders In Virtual Meeting

ರಷ್ಯಾವನ್ನು ದುರ್ಬಲಗೊಳಿಸು ಯುಎಎಸ್ ಆ ದೇಶದ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಜಪಾನ್​ ಕೂಡ ಇದೇ ನೀತಿ ಮುಂದುವರಿಸಿದ್ದು, ಆಸ್ಟ್ರೇಲಿಯಾವೂ ಸಹ ರಷ್ಯಾದ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. ಆದರೆ ಭಾರತ ರಷ್ಯಾದೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದೆ. ಹಾಗೇ, ಇನ್ನೊಂದೆಡೆ ರಷ್ಯಾ ವಿರುದ್ಧ ಪ್ರಬಲವಾಗಿ ನಿಂತಿರುವ ಯುಎಸ್ ಜತೆಗೂ ಒಳ್ಳೆಯ ಬಾಂಧವ್ಯ ಹೊಂದಿದೆ. ಈ ಎಲ್ಲ ಕಾರಣಗಳಿಂದ ರಷ್ಯಾ-ಉಕ್ರೇನ್​ ಯುದ್ಧದ ವಿಚಾರದಲ್ಲಿ ತುಂಬ ಜಾಣತನದಿಂದ ವರ್ತಿಸುತ್ತಿದೆ.

ಇಂದಿನ ವರ್ಚ್ಯುವಲ್​ ಶೃಂಗಸಭೆಯಲ್ಲಿ ಇಂಡೋ-ಪೆಸಿಫಿಕ್​​ ಬೆಳವಣಿಗೆಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದೂ ತಿಳಿಸಿದೆ. ರಷ್ಯಾ-ಉಕ್ರೇನ್​ ಮಧ್ಯೆ ನಡೆಯುತ್ತಿರುವ ಕ್ವಾಡ್​ ನಾಯಕರ ವರ್ಚ್ಯುವಲ್​ ಸಭೆ ಮಹತ್ವ ಪಡೆದುಕೊಂಡಿದೆ.

ಸದ್ಯ ನಡೆಯುತ್ತಿರುವ ರಷ್ಯಾ-ಉಕ್ರೇನ್​ ಯುದ್ಧದ ವಿಚಾರದಲ್ಲಿ ಭಾರತ ತಟಸ್ಥ ನೀತಿ ಅನುಸರಿಸಿದೆ. ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯಕ್ಕೆ ಮತದಾನದಿಂದ ದೂರವೇ ಉಳಿದಿದೆ. ಅಂದರೆ ಪರವಾಗಿಯೂ ಮತ ಹಾಕಲಿಲ್ಲ. ವಿರುದ್ಧವಾಗಿಯೂ ಮತ ಹಾಕಲಿಲ್ಲ. ಆದರೆ ಕ್ವಾಡ್​​ನ ಉಳಿದ ಮೂರು ರಾಷ್ಟ್ರಗಳಾದ ಆಸ್ಟ್ರೇಲಿಯಾ, ಜಪಾನ್​ ಮತ್ತು ಯುಎಸ್​ಗಳು ಉಕ್ರೇನ್​ಗೆ ಬೆಂಬಲ ವ್ಯಕ್ತಪಡಿಸಿವೆ.

ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆ ನಾಲ್ಕು ದೇಶಗಳ ಕ್ವಾಡ್ ಸಭೆ ನಡೆಯಲಿದೆ. ವರ್ಚುವಲ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಅವರು ಭಾಗವಹಿಸಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಅವರ ಜತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ.

ಈ ನಾಲ್ಕು ದೇಶಗಳ ನಾಯಕರು 2021ರ ಸೆಪ್ಟೆಂಬರ್‌ನಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಕೊನೆಯ ಬಾರಿ ಸಭೆ ಸೇರಿದ್ದರು. ಇದರ ಬಳಿಕದ ನಾಲ್ಕು ದೇಶಗಳ ಮಾತುಕತೆಯನ್ನು ಮುಂದುವರಿಸಲು ವೇದಿಕೆ ಸಿದ್ಧವಾಗಿದೆ. ಇಂಡೋ- ಪೆಸಿಫಿಕ್ ಭಾಗದಲ್ಲಿನ ಮಹತ್ವದ ಬೆಳವಣಿಗೆಗಳ ಬಗ್ಗೆ ನಾಯಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ ಮತ್ತು ಪರಾಮರ್ಶೆ ನಡೆಸಲಿದ್ದಾರೆ.

English summary
Prime Minister Narendra Modi will on Thursday participate in a virtual meeting of the Quad leaders along with US President Joe Biden and the prime ministers of Japan and Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X