ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ 4 ಘೋಷಿಸಿ ಜನರ ಮೆದುಳಿಗೆ ಇನ್ನಷ್ಟು ಹುಳಬಿಟ್ಟ ಪ್ರಧಾನಿ ಮೋದಿ

|
Google Oneindia Kannada News

ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಯಾವಾಗ ಐನೂರು, ಸಾವಿರ ರೂಪಾಯಿ ನೋಟನ್ನು ಬ್ಯಾನ್ ಮಾಡಿದ ಘೋಷಣೆಯನ್ನು ಮಾಡಿದರೋ, ಅಂದಿನಿಂದ, ರಾಷ್ಟ್ರವನ್ನು ಉದ್ದೇಶಿಸಿ ಮೋದಿ ಮಾತಾಡುತ್ತಾರೆಂದರೆ ಅದೇನೋ ಕುತೂಹಲ, ಗೊಂದಲ, ಆತಂಕ.

Recommended Video

ದೇಶದ ಜನರಿಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿ ದೊಡ್ಡ ಸಂದೇಶ ಕೊಟ್ಟ ಮೋದಿ | Narendra Modi

ಕೂರೊನಾ ದಾಳಿಯ ನಂತರ ಮೂರನೇ ಲಾಕ್ ಡೌನ್ ಮುಕ್ತಾಯಕ್ಕೆ ಐದು ದಿನಗಳ ಮುನ್ನ, ಮೋದಿ, ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆಂದರೆ, ಜನರಿಗಿದ್ದ ಕುತೂಹಲ, ವಿಶೇಷ ಪ್ಯಾಕೇಜ್ ಮೇಲೆಲ್ಲ ಎನ್ನುವುದು ವಾಸ್ತವತೆ.

20 ಲಕ್ಷ ಕೋಟಿ ಘೋಷಿಸಿದ ಪ್ರಧಾನಿಯನ್ನು ಕೊಂಡಾಡಿದ ಸಚಿವ ಸಿ.ಟಿ.ರವಿ20 ಲಕ್ಷ ಕೋಟಿ ಘೋಷಿಸಿದ ಪ್ರಧಾನಿಯನ್ನು ಕೊಂಡಾಡಿದ ಸಚಿವ ಸಿ.ಟಿ.ರವಿ

ಯಾಕೆಂದರೆ, ಸಾರ್ವಜನಿಕರು ನಿರೀಕ್ಷಿಸಿದ್ದು ಲಾಕ್ ಡೌನ್ ಬಗ್ಗೆ ಮೋದಿ ಏನಾದರೂ ಘೋಷಣೆ ಮಾಡುತ್ತಾರೆಂದು. ಆದರೆ, ಪ್ರಧಾನಿಗಳು ವಿಶೇಷ ಪ್ಯಾಕೇಜ್, ಸ್ವದೇಶಿ ವಸ್ತುಗಳ ಬಗ್ಗೆ ವಿಶೇಷ ಒತ್ತನ್ನು ನೀಡಿದರು.

20 ಲಕ್ಷ ಕೋಟಿ ನವಭಾರತ ನಿರ್ಮಾಣಕ್ಕೆ ನಾಂದಿ ಎಂದ ಡಿಸಿಎಂ 20 ಲಕ್ಷ ಕೋಟಿ ನವಭಾರತ ನಿರ್ಮಾಣಕ್ಕೆ ನಾಂದಿ ಎಂದ ಡಿಸಿಎಂ

ಲಾಕ್ ಡೌನ್ 4 ಘೋಷಿಸಿದ ಪ್ರಧಾನಿ ಮೋದಿ, ಇದು ಹಿಂದಿನ ಮೂರು ಲಾಕ್ ಡೌನ್ ರೀತಿಯಲ್ಲಿ ಇರುವುದಿಲ್ಲ ಎಂದು ಹೇಳುವ ಮೂಲಕ, ಜನರ ಮೆದುಳಿಗೆ ಇನ್ನಷ್ಟು ಕೆಲಸವನ್ನು ನೀಡಿದ್ದಾರೆ. ಅದಕ್ಕೆ ಕಾರಣ ಇಲ್ಲದಿಲ್ಲ:

ರಾಷ್ಟ್ರವನ್ನು ಉದ್ದೇಶಿಸಿ ಮೋದಿ ಭಾಷಣ

ರಾಷ್ಟ್ರವನ್ನು ಉದ್ದೇಶಿಸಿ ಮೋದಿ ಭಾಷಣ

ಪ್ರಧಾನಿ ಮೋದಿಯವರು ತಮ್ಮ ಸುಮಾರು ಮೂವತ್ತು ನಿಮಿಷಗಳ ಭಾಷಣದಲ್ಲಿ ಆರ್ಥಿಕತೆ, ಸ್ವಾವಲಂಬಿ ಭಾರತ, ಸ್ವದೇಶಿ ವಸ್ತು.. ಈ ಮುಂತಾದ ವಿಚಾರಗಳನ್ನು ಪ್ರಸ್ತಾವಿಸಿದರು. ಜನರು ಕಣ್ಣಿಗೆ ಕಣ್ಣು ಬಿಟ್ಟು ಪಿಎಂ ಭಾಷಣ ಕೇಳುತಿದ್ದದ್ದು, ಲಾಕ್ ಡೌನ್ ಮತ್ತೆ ಮುಂದುವರಿಯುತ್ತಾ, ಇಲ್ಲವೋ ಎನ್ನುವುದು.

ಡಿಟೇಲ್ಡ್ ಆಗಿ ನಿರ್ಮಲಾ ಸೀತರಾಮನ್ ಮಾತನಾಡುತ್ತಾರೆ

ಡಿಟೇಲ್ಡ್ ಆಗಿ ನಿರ್ಮಲಾ ಸೀತರಾಮನ್ ಮಾತನಾಡುತ್ತಾರೆ

ದೇಶವೇ ಆಶ್ಚರ್ಯ ಪಡುವಂತೆ, ಪ್ರಧಾನಿಗಳು 20 ಲಕ್ಷ ಕೋಟಿಯ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದರು. ಇದರ ಬಗ್ಗೆ ಡಿಟೇಲ್ಡ್ ಆಗಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಾತನಾಡುತ್ತಾರೆ ಎಂದು ಮೋದಿ ಹೇಳಿದರು. ಸ್ವಾವಲಂಬಿ ಭಾರತಕ್ಕೆ ಪಂಚ ಸ್ಥಂಭದ ಆಧಾರದ ಬಗ್ಗೆ ವಿವರಿಸಿದರು.

ಲಾಕ್ ಡೌನ್

ಲಾಕ್ ಡೌನ್

ನಾಲ್ಕನೇ ಲಾಕ್ ಡೌನ್ ಸೋಮವಾರದಿಂದ (ಮೇ 18) ಆರಂಭವಾಗಲಿದೆ ಎಂದು ಹೇಳಿದ ಪ್ರಧಾನಿಗಳು, ಇದು ಈ ಹಿಂದಿನ ಲಾಕ್ ಡೌನ್ ರೀತಿಯಲ್ಲಿ ಇರುವುದಿಲ್ಲ. ಹೊಸ ನಿಯಮಗಳು ಇರಲಿವೆ, ಅದರ ರೂಪುರೇಷೆಗಳನ್ನು ಸೋಮವಾರದೊಳಗೆ ಪ್ರಕಟಿಸುವುದಾಗಿ ಹೇಳಿದ್ದಾರೆ.

ಕೊರೊನೊ ಜೊತೆಜೊತೆ ಮುಂದೆ ಸಾಗಬೇಕು

ಕೊರೊನೊ ಜೊತೆಜೊತೆ ಮುಂದೆ ಸಾಗಬೇಕು

ಕೊರೊನೊ ಜೊತೆಜೊತೆ ಮುಂದೆ ಸಾಗಬೇಕು, ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಮೋದಿ ಹೇಳಿರುವುದರಿಂದ, ಈ ಹಿಂದಿನ ಲಾಕ್ ಡೌನ್ ನಲ್ಲಿ ಇದ್ದಂತೆ ಕಠಿಣ ಕಾನೂನು ಮುಂದೆ ಇರುವ ಸಾಧ್ಯತೆ ಕಮ್ಮಿ ಎನ್ನುವ ಸುಳಿವನ್ನು ನೀಡಿದ್ದಾರೆ. ಆದರೂ, ನಾಲ್ಕನೇ ಲಾಕ್ ಡೌನ್ ಹೇಗಿರಬಹುದು ಎನ್ನುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ.

English summary
People Are Curious About PM Modi Address To Nation, Whether Lockdown Will Extend Or Not,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X