ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಪರಿಸ್ಥಿತಿ; ಕಮಲ ಹ್ಯಾರಿಸ್ ಜೊತೆ ಮೋದಿ ಮಾತುಕತೆ

|
Google Oneindia Kannada News

ನವದೆಹಲಿ, ಜೂನ್ 03; ಅಮೆರಿಕದ ಉಪಾಧ್ಯಕ್ಷೆ ಕಮಲ ಹ್ಯಾರಿಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ನೇರ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದರು. ಕಮಲ ಹ್ಯಾರಿಸ್ ಸೂಚನೆಯಂತೆ ಈ ಕರೆ ಬಂದಿತ್ತು ಎಂದು ಎಎನ್‌ಐ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕಮಲ ಹ್ಯಾರಿಸ್ ಕೋವಿಡ್ ಪರಿಸ್ಥಿತಿ, ಕೋವಿಡ್ ವಿರುದ್ಧದ ಲಸಿಕೆಯ ವಿಚಾರದಲ್ಲಿ ಭಾರತ ಮತ್ತು ಅಮೆರಿಕದ ಸಹಭಾಗಿತ್ವದ ಬಗ್ಗೆ ಮಾತುಕತೆಯನ್ನು ನಡೆಸಿದ್ದಾರೆ.

ಕೊರೊನಾ ವಿರುದ್ಧ ಹೋರಾಟ: ಭಾರತಕ್ಕೆ ಕಮಲಾ ಹ್ಯಾರಿಸ್ ಸಂದೇಶ ಕೊರೊನಾ ವಿರುದ್ಧ ಹೋರಾಟ: ಭಾರತಕ್ಕೆ ಕಮಲಾ ಹ್ಯಾರಿಸ್ ಸಂದೇಶ

ಅಮೆರಿಕ ಜಾಗತಿಕ ಲಸಿಕೆ ಹಂಚಿಕೆಯ ಭಾಗವಾಗಿ ಭಾರತಕ್ಕೆ ಕೊರೊನಾ ಸೋಂಕಿನ ವಿರುದ್ಧದ ಲಸಿಕೆ ಸರಬರಾಜು ಮಾಡುವ ಭರವಸೆಯನ್ನು ನೀಡಿದೆ. ಈ "ಭರವಸೆಯನ್ನು ನಾನು ಶ್ಲಾಘಿಸುತ್ತೇನೆ. ಭಾರತ ಮತ್ತು ಅಮೆರಿಕ ನಡುವಿನ ಲಸಿಕೆ ತಯಾರಿಕೆ ಸಹಭಾಗಿತ್ವ ಇದರಿಂದ ಇನ್ನಷ್ಟು ಬಲಗೊಳ್ಳಲಿದೆ" ಎಂದು ಮೋದಿ ಹೇಳಿದ್ದರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ತಿಳಿಸಿದೆ.

ಜೋ ಬೈಡನ್, ಕಮಲಾ ಹ್ಯಾರಿಸ್‌ಗೆ ಪ್ರಧಾನಿ ಮೋದಿ ಅಭಿನಂದನೆಜೋ ಬೈಡನ್, ಕಮಲಾ ಹ್ಯಾರಿಸ್‌ಗೆ ಪ್ರಧಾನಿ ಮೋದಿ ಅಭಿನಂದನೆ

PM Modi Speaks To US Vice President Kamala Harris In A Direct Call

ಜಾಗತಿಕ ಆರೋಗ್ಯ ಪರಿಸ್ಥಿತಿ ಸಾಮಾನ್ಯ ಪರಿಸ್ಥಿತಿಗೆ ಬಂದ ಕೂಡಲೇ ಅಮೆರಿಕದ ಉಪಾಧ್ಯಕ್ಷೆ ಕಮಲ ಹ್ಯಾರಿಸ್‌ರನ್ನು ಭಾರತಕ್ಕೆ ಸ್ವಾಗತಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ಕೊರೊನಾ ಸೋಂಕಿನ ಮೂಲ ಹುಡುಕುವ ಅಮೆರಿಕ ನಿರ್ಧಾರಕ್ಕೆ ಭಾರತ ಬೆಂಬಲ ಕೊರೊನಾ ಸೋಂಕಿನ ಮೂಲ ಹುಡುಕುವ ಅಮೆರಿಕ ನಿರ್ಧಾರಕ್ಕೆ ಭಾರತ ಬೆಂಬಲ

ಕಮಲ ಹ್ಯಾರಿಸ್ ಜೊತೆ ಮಾತುಕತೆ ನಡೆಸಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ವಿಶ್ವದಲ್ಲಿ ಕೋವಿಡ್ ಸೋಂಕಿತರು ಹೆಚ್ಚಿರುವ ದೇಶದಲ್ಲಿ ಭಾರತ ಮತ್ತು ಅಮೆರಿಕ ಎರಡೂ ಇವೆ. ಸೋಂಕಿನ ವಿರುದ್ಧ ಲಸಿಕೆ ಉತ್ಪಾದನೆಯಲ್ಲಿ ಭಾರತ ಮತ್ತು ಅಮೆರಿಕ ಕೈ ಜೋಡಿಸುವ ಸಾಧ್ಯತೆಯೂ ಇದೆ.

English summary
America vice president Kamala Harris spoke with prime minister Narendra Modi in a direct call. She underscored the India-US partnership. I deeply appreciate the assurance of vaccine supplies to India as part of the US Strategy for global vaccine sharing said Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X