• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂದರು ಯೋಜನೆಗಳಿಗೆ ಭಾರತದಿಂದ 82 ಬಿಲಿಯನ್ ಡಾಲರ್ ಹೂಡಿಕೆ: ಮೋದಿ

|

ನವದೆಹಲಿ,ಮಾರ್ಚ್ 02: ದೇಶದ ಬಂದರು ಯೋಜನೆಗಳಿಗಾಗಿ 82 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಂದರುಗಳ ಅಭಿವೃದ್ಧಿಯ ಜೊತೆಗೆ, ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲು ಮತ್ತು ಲೈಟ್ ಹೌಸ್ ಸುತ್ತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುವುದು.

ಕೇಂದ್ರ ಬಜೆಟ್ 2021: ಏಳು ಬಂದರು ಅಭಿವೃದ್ಧಿಗೆ ಯೋಜನೆ

ಸಾಗರಮಾಲಾ ಯೋಜನೆಯಡಿ 574 ಕ್ಕೂ ಹೆಚ್ಚು ಯೋಜನೆಗಳನ್ನು ಗುರುತಿಸಲಾಗಿದೆ. ಇವುಗಳಿಗೆ 82 ಬಿಲಿಯನ್ ಡಾಲರ್ ಅಥವಾ ಆರು ಲಕ್ಷ ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.

ಭಾರತದ ಕರಾವಳಿ ಗಡಿಯಲ್ಲಿ 189 ಲೈಟ್‌ ಹೌಸ್‌ಗಳಿವೆ, ಅದರಲ್ಲಿ 78 ಲೈಟ್‌ ಹೌಸ್‌ಗಳ ಸುತ್ತ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಬಂದರು ಕ್ಷೇತ್ರದಲ್ಲಿ ಶುದ್ಧ ನವೀಕರಿಸಬಹುದಾದ ಇಂಧನ ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ.

ಈ ಯೋಜನೆಗಳ ಕಾಮಗಾರಿ 2015 ಮತ್ತು 2035 ರ ನಡುವೆ ಪೂರ್ಣಗೊಳ್ಳಬೇಕಿದೆ. ಮುಂದಿನ ಹತ್ತು ವರ್ಷಗಳಲ್ಲಿ ದೇಶದಲ್ಲಿ 23 ಜಲಮಾರ್ಗಗಳನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು.

ಕಡಲ ಹಡಗು ಕ್ಷೇತ್ರದಲ್ಲಿ ಆಯೋಜಿಸಲಾದ ಸಾಗರ ಭಾರತ ಶೃಂಗಸಭೆ 2021ಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತೀಯ ಬಂದರುಗಳು, ಹಡಗುಕಟ್ಟೆಗಳು ಮತ್ತು ಜಲಮಾರ್ಗಗಳಲ್ಲಿ ಹೂಡಿಕೆ ಮಾಡಲು ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಿದರು. ಭಾರತದ ಸುದೀರ್ಘ ಕರಾವಳಿಯು ನಿಮಗಾಗಿ ಕಾಯುತ್ತಿದೆ. ಭಾರತದ ಕಷ್ಟಪಟ್ಟು ದುಡಿಯುವ ಜನರು ನಿಮಗಾಗಿ ಕಾಯುತ್ತಿದ್ದಾರೆ.

ನಮ್ಮ ಬಂದರುಗಳಲ್ಲಿ ಹೂಡಿಕೆ ಮಾಡಿ, ನಮ್ಮ ಜನರಲ್ಲಿ ಹೂಡಿಕೆ ಮಾಡಿ, ಭಾರತವು ನಿಮ್ಮ ಆದ್ಯತೆಯ ವ್ಯಾಪಾರ ತಾಣವಾಗಲಿ. ಭಾರತೀಯ ಬಂದರುಗಳು ವ್ಯಾಪಾರ ಮತ್ತು ವಾಣಿಜ್ಯಕ್ಕಾಗಿ ನಿಮ್ಮ ಕರೆ ಬಂದರು ಆಗಿರಲಿ ಎಂದು ಹೇಳಿದರು.

ಅಲ್ಲದೆ ದೇಶೀಯ ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿ ಮಾರುಕಟ್ಟೆಯ ಬಗ್ಗೆಯೂ ಭಾರತ ಸರ್ಕಾರ ಗಮನ ಹರಿಸುತ್ತಿದೆ. ಕೇಂದ್ರ ಸರ್ಕಾರ ದೇಶೀಯ ಹಡಗು ನಿರ್ಮಾಣವನ್ನು ಉತ್ತೇಜಿಸಲು ಸಾಕಷ್ಟು ಯೋಜನೆಗಳನ್ನು ಕೈಗೊಂಡಿದೆ. ಭಾರತೀಯ ಶಿಪ್‌ಯಾರ್ಡ್‌ಗಳಿಗೆ ಹಡಗು ನಿರ್ಮಾಣ ಹಣಕಾಸು ನೆರವು ನೀತಿಯನ್ನು ಅನುಮೋದಿಸಲಾಗಿದೆ ಎಂದು ಹೇಳಿದರು.

English summary
India will invest USD 82 billion in port projects by 2035, raise share of clean renewable energy source in maritime sector, develop waterways and boost tourism around lighthouses as part of port-led development, Prime Minister Narendra Modi said on Tuesday(Mar 2)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X