ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು

|
Google Oneindia Kannada News

ನವದೆಹಲಿ ಫೆಬ್ರವರಿ 07: ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದು, ದೇಶದ ವಾಣಿಜ್ಯೋದ್ಯಮಿಗಳನ್ನು ಕೊರೊನಾ ರೂಪಾಂತರಗಳು ಎಂದು ಕರೆಯುವುದು ಸರಿಯಲ್ಲ ಎಂದಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಗೆ ಸೋಮವಾರ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿಯವರ ಹೇಳಿಕೆಗೆ ತಿರುಗೇಟು ನೀಡಿದರು. ರಾಹುಲ್ ಗಾಂಧಿ ಅವರು ದೇಶದ ಉದ್ಯಮಿಗಳನ್ನು ಕೊರೋನವೈರಸ್‌ನ ರೂಪಾಂತರ ಎಂದು ಕರೆದರು.

ನಮ್ಮ ದೇಶದ ಉದ್ಯಮಿಗಳು ಕೊರೊನಾ ವೈರಸ್‌ನ ರೂಪಾಂತರಗಳೇ? ನಾವು ಯಾರಿಗಾಗಿ ಮಾತನಾಡುತ್ತಿದ್ದೇವೆ? ನಿಮಗೆ ಏನಾಗಿದೆ ಎಂದು ನಮಗೆ ತಿಳಿಸಿ ಎಂದು ಪ್ರಧಾನಿ ಮೋದಿ ಹೇಳಿದರು. ಇಂತಹ ಹೇಳಿಕೆಗಳಿಂದ ಕಾಂಗ್ರೆಸ್ ತನ್ನದೇ ಹಾನಿ ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಯಾರು ಇತಿಹಾಸದಿಂದ ಪಾಠ ಕಲಿಯುವುದಿಲ್ಲವೋ ಅವರು ಇತಿಹಾಸದಲ್ಲಿ ಕಳೆದು ಹೋಗುತ್ತಾರೆ ಎಂದು ಪ್ರಧಾನಿ ಹೇಳಿದರು.

100 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ; ಮೋದಿ
ರಾಹುಲ್ ಗಾಂಧಿ ಹೇಳಿದ್ದೇನು?

ಫೆಬ್ರವರಿ 3 ರಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ ಇಬ್ಬರು ದೊಡ್ಡ ಉದ್ಯಮಿಗಳು ಕೊರೋನದ ರೂಪಾಂತರಗಳಂತೆ ಎಂದು ಹೇಳಿದರು. ಈ ಎರಡೂ ಕೈಗಾರಿಕೋದ್ಯಮಿಗಳು ಡಬಲ್-ಎ (ಎಎ) ರೂಪಾಂತರಗಳು ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ರೂಪಾಂತರಗಳು ದೇಶದ ಆರ್ಥಿಕತೆಯನ್ನು ತನ್ನ ಹಿಡಿತದಲ್ಲಿ ತೆಗೆದುಕೊಳ್ಳುತ್ತಿವೆ. ಮೋದಿ ಸರ್ಕಾರವು ಎಲ್ಲಾ ಬಂದರುಗಳು, ವಿಮಾನ ನಿಲ್ದಾಣಗಳು, ಗಣಿಗಳು, ವಿದ್ಯುತ್ ಸ್ಥಾವರಗಳು ಇತ್ಯಾದಿಗಳನ್ನು ಅದಾನಿಗೆ ನೀಡಿದೆ ಎಂದು ಅವರು ತಮ್ಮ ಆರೋಪಗಳಲ್ಲಿ ಹೇಳಿದ್ದರು. ಆದರೆ ಅಂಬಾನಿ ಪೆಟ್ರೋಕೆಮಿಕಲ್, ಟೆಲಿಕಾಂ, ಚಿಲ್ಲರೆ ಮತ್ತು ಇ-ಕಾಮರ್ಸ್‌ನಲ್ಲಿ ಏಕಸ್ವಾಮ್ಯ ಹೊಂದಿದ್ದಾರೆ, ಆದ್ದರಿಂದ ಸಂಪೂರ್ಣ ಹಣ ಆಯ್ಕೆಯಾದ ಜನರ ಕೈಗೆ ಹೋಗುತ್ತದೆ ಎಂದು ದೂರಿದ್ದರು.

PM Modi’s Rebuttal on Rahul Gandhi’s Statement

ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರನ್ನು ಸ್ಮರಿಸಬೇಕು. ಕಳೆದ 2 ವರ್ಷದಲ್ಲಿ ಬಹುದೊಡ್ಡ ಮಹಾಮಾರಿಯನ್ನು ಎದುರಿಸಿದ್ದೇವೆ. ಭಾರತದಲ್ಲಿ ಶೇ.80ರಷ್ಟು ಜನರಿಗೆ 2 ಡೋಸ್​ ಲಸಿಕೆ ನೀಡಲಾಗಿದೆ. ಕೊರೊನಾದಲ್ಲೂ ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಕೊರೊನಾ ಕಾಲದಲ್ಲೂ ಕಾಂಗ್ರೆಸ್ ಹದ್ದು ಮೀರಿ ವರ್ತಿಸಿದೆ. ಕೊರೊನಾ ವೇಳೆ ಜನರ ವಲಸೆಗೆ ಕಾಂಗ್ರೆಸ್​ ಟಿಕೆಟ್ ನೀಡಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಲೋಕಸಭೆಯಲ್ಲಿ ವಿಪಕ್ಷಗಳು ಅಡ್ಡಿಪಡಿಸಿವೆ.

ಹಲವಾರು ಚುನಾವಣೆಗಳಲ್ಲಿ ಹಲವು ಸೋಲುಗಳನ್ನು ಕಂಡರೂ ಕಾಂಗ್ರೆಸ್ ಇನ್ನೂ ದುರಹಂಕಾರದಿಂದ ಹೊರಬಂದಿಲ್ಲ. ಅವರಲ್ಲಿ ಇನ್ನೂ ಕೆಲವರು "2014ರಲ್ಲಿ ಸಿಲುಕಿಕೊಂಡಿದ್ದಾರೆ". ಅವರು ವಾಸ್ತವದೊಂದಿಗೆ ಸಂಪರ್ಕ ಕಡಿದುಕೊಂಡಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಹಲವಾರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡರೂ ಅವರು ಇನ್ನೂ ಭ್ರಮೆಯಿಂದ ಹೊರಬಂದಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. ಇನ್ನು 100 ವರ್ಷವಾದರೂ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್​ ಪಕ್ಷಕ್ಕೆ ಅಧಿಕಾರ ನೀಡದಿರಲು ಜನ ನಿರ್ಧರಿಸಿದ್ದಾರೆ. ದೇಶದಲ್ಲಿ ಬಡವರನ್ನು ಹಸಿವಿನಿಂದ ನರಳದಂತೆ ಮಾಡಿದ್ದೇವೆ. 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ನೀಡಿದ್ದೇವೆ. ಗಾಂಧೀಜಿಯವರ ಸ್ವದೇಶಿ ಕನಸಿಗೆ ಕಾಂಗ್ರೆಸ್​ ಅಡ್ಡಿಯಾಗಿದೆ. ಆತ್ಮನಿರ್ಭರ ಭಾರತಕ್ಕೆ ಕಾಂಗ್ರೆಸ್​ ವಿರುದ್ಧವಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ ಪ್ರಧಾನಿ ಉತ್ತರ ನೀಡಿದ್ದಾರೆ. ಹಣದುಬ್ಬರ ನಿಯಂತ್ರಿಸಲು ಕಾಂಗ್ರೆಸ್ ವಿಫಲವಾಗಿತ್ತು. ಕೊವಿಡ್ ಸಂಕಷ್ಟದಲ್ಲೂ ನಾವು ಹಣದುಬ್ಬರ ನಿಯಂತ್ರಿಸಿದ್ದೇವೆ. ಜನಸಾಮಾನ್ಯರನ್ನು ಚಿದಂಬರಂ ಅಣಕವಾಡಿದ್ದಾರೆ. ಕಾಂಗ್ರೆಸ್​ನವರು ದೇಶದ ಉದ್ಯಮಿಗಳನ್ನೇ ವೈರಸ್ ಅಂತಿದ್ದಾರೆ. ನಮ್ಮ ಉದ್ಯಮಿಗಳನ್ನ ಕೊರೊನಾ ವೈರಸ್ ಅಂದ್ರೆ ಹೇಗೆ? ಇತಿಹಾಸದಿಂದ ಪಾಠ ಕಲಿಯದಿದ್ದರೆ ಉಳಿಗಾಲ ಇಲ್ಲ. ಕಾಂಗ್ರೆಸ್ ಪಕ್ಷ ಇತಿಹಾಸದಲ್ಲಿಯೇ ಕಳೆದು ಹೋಗುತ್ತದೆ ಎಂದು ಮೋದಿ ಹೇಳಿದ್ದಾರೆ.

Recommended Video

ಮದರಸಾಗೆ ಹೇಗ್ ಹೋಗ್ಬೇಕು ಅಂತಾ ಪ್ರತಾಪ್ ಸಿಂಹ ಹೇಳಿಕೊಡ್ಬೇಕಾಗಿಲ್ಲ | Oneindia Kannada

English summary
Prime Minister Narendra Modi on Monday replied to the discussion on the Motion of Thanks to the President's address in the Lok Sabha. During this, during the entire speech, PM Modi kept on attacking the Congress party fiercely.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X