ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಜಾನ್ ಮೊಳಗಿದಾಗ ಮೋದಿಯ ಮೌನಕ್ಕೆ ಟೀಕೆಯೇಕೆ?

|
Google Oneindia Kannada News

ನವಸಾರಿ(ಗುಜರಾತ್), ನವೆಂಬರ್ 30: ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಆಜಾನ್ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಗುಜರಾತಿನ ನವರಾಸಿಯಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಆಜಾನ್ (ಮುಸ್ಲಿಮರ ಪ್ರಾರ್ಥನೆ) ಕೇಳುತ್ತಿದ್ದಂತೆಯೇ ಮಾತನ್ನು ಅರ್ಧಕ್ಕೇ ನಿಲ್ಲಿಸಿ ಆಜಾನ್ ಮುಗಿಯುವವರೆಗೂ ಕಾದರು.

ಇದಕ್ಕೂ ಮೊದಲೂ ಒಮ್ಮೆ, ಪಶ್ಚಿಮ ಬಂಗಾಳದ ಖಾರಗ್ಪುರದಲ್ಲಿಯೂ ಮಾತನಾಡುತ್ತಿದ್ದ ಮೋದಿ, ಆಜಾನ್ ಕೇಳುತ್ತಿದ್ದಂತೆಯೇ ತಮ್ಮ ಮಾತನ್ನು ನಿಲ್ಲಿಸಿ, ಪ್ರಾರ್ಥನೆಗೆ ಗೌರವ ಸಲ್ಲಿಸಿದ್ದರು.

ಗುಜರಾತ್: ಆಜಾನ್ ಗಾಗಿ ಮಾತನ್ನು ಅರ್ಧಕ್ಕೇ ನಿಲ್ಲಿಸಿ ಮೌನರಾದ ಮೋದಿ!ಗುಜರಾತ್: ಆಜಾನ್ ಗಾಗಿ ಮಾತನ್ನು ಅರ್ಧಕ್ಕೇ ನಿಲ್ಲಿಸಿ ಮೌನರಾದ ಮೋದಿ!

ಗುಜರಾತಿನಲ್ಲಿ ಡಿಸೆಂಬರ್ 9 ಮತ್ತು 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ದಿನದಿನವೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಿರುವ ಮೋದಿ, ಇಂದು(ನ.30) ಆಜಾನ್ ಕೇಳುತ್ತ ಮೌನವಾಗಿದ್ದು ಹಲವು ಟೀಕೆಗಳನ್ನೂ ಹುಟ್ಟುಹಾಕಿದೆ.

ಮೊರ್ಬಿಯಲ್ಲಿ ಮೂಗುಮುಚ್ಚಿಕೊಂಡು ಇಂದಿರಾರನ್ನು ಅಣಕಿಸಿದ ಮೋದಿ! ಮೊರ್ಬಿಯಲ್ಲಿ ಮೂಗುಮುಚ್ಚಿಕೊಂಡು ಇಂದಿರಾರನ್ನು ಅಣಕಿಸಿದ ಮೋದಿ!

ಕೆಲವರು ಪ್ರಧಾನಿ ಮೋದಿಯವರು ಸರ್ವಮತಗಳನ್ನೂ ಗೌರವಿಸುತ್ತಾರೆ, ಅವರು ಜಾತ್ಯಾತೀತರು ಎಂದು ಹೊಗಳಿದ್ದರೆ, ಮತ್ತಷ್ಟು ಜನ, ಇವೆಲ್ಲ ಚುನಾವಣೆಯ ಗಿಮಿಕ್ ಎಂದಿದ್ದಾರೆ. ಒಟ್ಟಿನಲ್ಲಿ ಪ್ರಧಾನಿಯ ಪ್ರತಿಯೊಂದು ನಡೆಯೂ ಸುದ್ದಿಯಾಗುವುದಂತೂ ಸತ್ಯ!

ಸಾವಿರ ಹಿಂದುಗಳ ಮತ ಕಳೆದುಕೊಂಡಿದ್ದಾರೆ!

ಆಜಾನ್ ಗೆ ಗೌರವ ನೀಡುವ ಮೂಲಕ ನರೇಂದ್ರ ಮೋದಿ ಒಂದು ಅಥವಾ ಎರಡು ಮುಸ್ಲಿಂ ಮತ ಪಡೆಯಬಹುದು. ಆದರೆ ಆ ನಡೆಯಿಂದ ಅವರು ಸಾವಿರಾರು ಹಿಂದುಗಳ ಮತಕಳೆದುಕೊಂಡಿದ್ದಾರೆ ಎಂದು ಮೋಹನ್ ರಾಮ್ಚಂದಾನಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಮೋದಿ ಗೌರವ ಹುಟ್ಟುವಂಥ ಕೆಲಸ ಮಾಡಿದ್ದಾರೆ

ಮೋದಿಯವರ ಈ ನಡೆಯಿಂದ, ಹಿಂದುಗಳು ಎಲ್ಲಾ ಮತಗಳನ್ನೂ ಗೌರವಿಸುತ್ತಾರೆ ಎಂಬುದು ಸಾಬೀತಾಗಿದೆ. ಈ ನಡೆಯಿಂದ ಮೋದಿಯವರ ಮೇಲೆ ಗೌರವ ಹೆಚ್ಚಾಗಿದೆ ಎಂದು ರಾಮ್ ಪ್ರಕಾಶ್ ಸಿಂಗ್ ಎಂಬುವವರು ಮೋದಿ ನಡೆಯನ್ನು ಬೆಂಬಲಿಸಿದ್ದಾರೆ.

ಮೋದಿ ಬಾಯಿಮುಚ್ಚಿಸೋಕೆ ಹೊಸ ದಾರಿ ಸಿಕ್ಕಿತು!

ಅಂದರೆ ಮೋದಿಯವರ ಬಾಯಿಮುಚ್ಚಿಸುವುದಕ್ಕೆ ನಮಗೊಂದು ದಾರಿ ಸಿಕ್ಕಿತು! ಇಂದಿನಿಂದ ಅವರು ಮಾತು ಶುರುಮಾಡುತ್ತಿದ್ದಂತೆಯೇ ಆಜಾನ್ ಶುರುಮಾಡೋಣ ಎಂದು ಅಕ್ಷಯ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಮೌನವಾಗಿದ್ದುದಕ್ಕೆ ಕಾರಣ ಬೇರೆಯೇ ಇದೆ!

ಮೋದಿ ಮೌನವಾಗಿದ್ದುದು ಆಜಾನ್ ಗೆ ಗೌರವ ನೀಡುವುದಕ್ಕಲ್ಲ. ಬಹುಶಃ 22 ವರ್ಷಗಳ ಅಭಿವೃದ್ಧಿ ಕಾರ್ಯವನ್ನು ಹೇಳಿ ಎಂದು ಜನ ದುಂಬಾಲು ಬಿದ್ದಿರಬೇಕು, ಆಗ ಹೇಳುವುದಕ್ಕೆ ಏನೂ ಇಲ್ಲ ಎಂಬುದು ನೆನಪಾಗಿ ಮೌನವಾಗಿದ್ದರು ಅನ್ನಿಸುತ್ತೆ ಎಂದು ಸಂದೀಪ್ ನಾಯರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಎಲ್ಲಾ ಮುಸ್ಲಿಂ ಮತಕ್ಕಾಗಿ..!

ಇವೆಲ್ಲ ಮುಸ್ಲಿಂ ಮತಕ್ಕಾಗಿ. ಇದನ್ನು ಮುಸ್ಲಿಂ ವೋಟ್ ಮಾಸ್ಟರ್ ಸ್ಟ್ರೋಕ್ ಎಂದು ಕರೆದಿದ್ದಾರೆ ಮೊಹ್ಮದ್ ರಾಹೆಲ್ ಫಿಡ್ವಿ!

ನಿಜವಾದ ಸಹಿಷ್ಣುತೆ

ಇದೇ ನಿಜವಾದ ಸಹಿಷ್ಣುತೆ. ಎಲ್ಲಾ ನಂಬಿಕೆ, ಮತಗಳನ್ನೂ ಗೌರವಿಸುವುದು ಎಂದರೆ ಇದೇ. ಹ್ಯಾಟ್ಸ್ ಆಫ್ ಟು ಮೋದಿಜೀ ಎಂದು ಡಾ.ಗುಪ್ತೇಶ್ವರ ಶರ್ಮಾ ಟ್ವೀಟ್ ಮಾಡಿದ್ದಾರೆ.

English summary
Prime Minister of India, Narendra Modi, while addressing a rally at Navsari in Gujarat, halted for a while during the Azaan. The prime minister resumed after it ended. The gesture has become a debating issue now!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X