• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏ.7 ರಂದು ಪರೀಕ್ಷಾ ಪೇ ಚರ್ಚಾ: ಪ್ರಧಾನಿ ಮೋದಿ ಜತೆ ಸಂವಾದದಲ್ಲಿ ಪಾಲಕರಿಗೂ ಅವಕಾಶ

|

ನವದೆಹಲಿ, ಏಪ್ರಿಲ್ 7: ಪ್ರಧಾನಿ ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾ ಏಪ್ರಿಲ್ 7 ರಂದು ಸಂಜೆ 7 ಗಂಟೆಗೆ ನಡೆಯಲಿದೆ.

ಈ ಬಾರಿ ವಿದ್ಯಾರ್ಥಿಗಳ ಜತೆಗೆ ಮೋದಿ ಜತೆಗಿನ ಸಂವಾದದಲ್ಲಿ ಪಾಲಕರು ಕೂಡ ಭಾಗವಹಿಸಬಹುದಾಗಿದೆ. ವಿದ್ಯಾರ್ಥಿಗಳನ್ನು ಮೋದಿಯವರು ಪರೀಕ್ಷಾ ವಾರಿಯರ್ಸ್ ಎಂದು ಕರೆದಿದ್ದಾರೆ.

ಭಾರತದ ಕೊರೊನಾ ಕಥೆ: ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಈ ಬಾರಿ ವಿದ್ಯಾರ್ಥಿಗಳ ಜತೆ, ಪಾಲಕರು, ಶಿಕ್ಷಕರು ಕೂಡ ಚರ್ಚೆಯಲ್ಲಿ ಭಾಗವಹಿಸಲಿದ್ದು, ವಿಭಿನ್ನವಾಗಿರಲಿದೆ. ನಾಲ್ಕು ವರ್ಷಗಳಿಂದ ಕೇವಲ ವಿದ್ಯಾರ್ಥಿಗಳೊಂದಿಗೆ ಮಾತ್ರ ಸಂವಾದ ನಡೆಸುತ್ತಿರುವ ನರೇಂದ್ರ ಮೋದಿ, ಈ ಬಾರಿ ಅವರ ಪಾಲಕರೊಂದಿಗೆ ಕೂಡ ಚರ್ಚೆ ನಡೆಸುತ್ತಿರುವುದು ವಿಶೇಷವಾಗಿದೆ.

ಪರೀಕ್ಷಾ ಪೇ ಚರ್ಚಾ ವರ್ಚ್ಯುವಲ್ ಆಗಿ ನಡೆಯಲಿದ್ದು, ಪಾಲ್ಗೊಳ್ಳುವವರು ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ ಮಾರ್ಚ್ 14 ಆಗಿತ್ತು. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಈವರೆಗೆ 10.39 ಲಕ್ಷ ವಿದ್ಯಾರ್ಥಿಗಳು ಪಿಪಿಸಿ 2021ಗೆ ನೋಂದಣಿ ಮಾಡಿಕೊಂಡಿದ್ದಾರೆ.

ಹಾಗೆಯೇ 2.62 ಲಕ್ಷ ಶಿಕ್ಷಕರು, 93,000 ಪೋಷಕರು ಕೂಡ ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಪೆ ಚರ್ಚಾ ಮೂಲಕ ವಿದ್ಯಾರ್ಥಿಗಳಲ್ಲಿ ಇರುವ ಭಯವನ್ನು ಹೋಗಲಾಡಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನ ಪಡುತ್ತಿದ್ದಾರೆ. ಈ ಪರೀಕ್ಷಾ ಪೆ ಚರ್ಚಾ ನನ್ನ ಹೃದಯಕ್ಕೆ ಹತ್ತಿರವಾದ ಕಾರ್ಯಕ್ರಮ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

English summary
Prime Minister Narendra Modi’s annual interaction Pariksha Pe Charcha programme will be held on Wednesday at 7 pm. Nearly 10.27 lakh students, 2.58 lakh teachers and 91,000 parents have so far registered for the programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X