ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ 'ಮನ್‌ ಕಿ ಬಾತ್' ಕಾರ್ಯಕ್ರಮದಿಂದ ಸರ್ಕಾರಕ್ಕೆ ಕೋಟಿ ಕೋಟಿ ಹಣ

|
Google Oneindia Kannada News

ನವದೆಹಲಿ, ನವೆಂಬರ್ 17: ಪ್ರಧಾನಿ ನರೇಂದ್ರ ಮೋದಿಯವರ ಮನ್‌ ಕಿ ಬಾತ್ ಕಾರ್ಯಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಬಂದು ಸೇರುತ್ತಿದೆ.

ಮೋದಿ ಜನರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಬಂದಾಗ ದೇಶದಲ್ಲಿ ಬಹಳ ಜನಪ್ರಿಯವಾಗಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದರ ಹೊರತಾಗಿಯೂ ಈ ಕಾರ್ಯಕ್ರಮದ ಬಗ್ಗೆ ಹಲವು ರೀತಿಯ ಆರೋಪಗಳು ಕೇಳಿಬರುತ್ತಿದ್ದು ಸರ್ಕಾರದ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು.

ಮಕ್ಕಳಿಗೆ ಕಥೆ ಹೇಳುವ ಮಹತ್ವವನ್ನು ಮನ್ ಕೀ ಬಾತ್‌ನಲ್ಲಿ ಹೇಳಿದ ಮೋದಿಮಕ್ಕಳಿಗೆ ಕಥೆ ಹೇಳುವ ಮಹತ್ವವನ್ನು ಮನ್ ಕೀ ಬಾತ್‌ನಲ್ಲಿ ಹೇಳಿದ ಮೋದಿ

ತಿಂಗಳಿಗೊಮ್ಮೆ ಪಿಎಂ ಮೋದಿ ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' (Mann Ki Baat) ಮೂಲಕ ಜನರೊಂದಿಗೆ ಮಾತನಾಡುತ್ತಾರೆ. ಈ ಕಾರ್ಯಕ್ರಮವು ನಿರಂತರವಾಗಿ ನಡೆಯುತ್ತಿದೆ.

PM Modis Mann Ki Baat Helps AIR Generate Over Rs 30 Crore

ಆದರೆ ಈಗ ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ಕಾರ್ಯಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಆದಾಯ ಹೆಚ್ಚಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಮೂರು ಪಟ್ಟು ಆದಾಯ :ಆರ್‌ಟಿಐ ಮೂಲಕ ಹೊರಬಂದ ಮಾಹಿತಿಯ ಪ್ರಕಾರ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲು ಜಾಹೀರಾತಿಗಾಗಿ ಖರ್ಚು ಮಾಡುತ್ತಿರುವ ಹಣಕ್ಕಿಂತ ಮೂರು ಪಟ್ಟು ಹೆಚ್ಚು ಆದಾಯ ಬರುತ್ತಿದೆ ಎಂದು ತಿಳಿದುಬಂದಿದೆ. ಬಹಿರಂಗವಾಗಿರುವ ಆದಾಯದ ಅಂಕಿ ಅಂಶಗಳ ಪ್ರಕಾರ
2014-15ರಲ್ಲಿ 1.16 ಕೋಟಿ ರೂ.
2015-16ರಲ್ಲಿ 2.81 ಕೋಟಿ ರೂ.
2016-17ರಲ್ಲಿ 5.12 ಕೋಟಿ ರೂ.
2017-18ರಲ್ಲಿ 10.58 ಕೋಟಿ ರೂ.
2018-19ರಲ್ಲಿ 7.47 ಕೋಟಿ ರೂ.
2019-20ರಲ್ಲಿ 2.56 ಕೋಟಿ ರೂ.
ಮತ್ತು 2020 ರವರೆಗೆ 58 ಲಕ್ಷ ರೂಪಾಯಿಗಳು ಆದಾಯ ರೂಪದಲ್ಲಿ ಬಂದಿವೆ. ಒಟ್ಟಾರೆ ಈ ಅಂಕಿ ಅಂಶವು 30 ಕೋಟಿ ರೂಪಾಯಿಗಳಿಗಿಂತ ಹೆಚ್ಚು.

ಅನಿಕೇತ್ ಗೌರವ್ ಎಂಬ ವ್ಯಕ್ತಿ ಆರ್‌ಟಿಐ (RTI) ಮೂಲಕ ಕೇಳಲಾದ ಪ್ರಶ್ನೆಗೆ ಸೂಚನಾ ಮತ್ತು ಮಾಹಿತಿ ಸಚಿವಾಲಯದ ಅಧೀನದಲ್ಲಿರುವ ಬ್ಯೂರೋ ಆಫ್ ಔಟ್ರೀಚ್ ಮತ್ತು ಸಂವಹನ ವಿಭಾಗವು ಉತ್ತರಿಸಿದ್ದು ರೇಡಿಯೋ, ಟೆಲಿವಿಷನ್, ಆನ್‌ಲೈನ್ ಮತ್ತು 'ಮನ್ ಕಿ ಬಾತ್' ಕಾರ್ಯಕ್ರಮದ ಇತರ ವಿಧಾನಗಳ ಮೂಲಕ ಜಾಹೀರಾತಿಗಾಗಿ ಎಷ್ಟು ಖರ್ಚು ಮಾಡಲಾಗಿದೆ ಎಂಬುದನ್ನು ಆರ್‌ಟಿಐ ಮೂಲಕ ಬಹಿರಂಗಪಡಿಸಲಾಗಿದೆ.

ಆರ್‌ಟಿಐಗೆ ಪ್ರತಿಕ್ರಿಯೆಯಾಗಿ 2014 ರಿಂದ 2020 ರವರೆಗೆ ಮುದ್ರಣ ಮಾಧ್ಯಮದಲ್ಲಿ 7,29,88,765 ರೂ.ಗಳ ಖರ್ಚು ಮಾಡಲಾಗಿದೆ ಎಂದು ತಿಳಿಸಲಾಯಿತು. ಟಿವಿ ಅಥವಾ ಇತರ ವಿಧಾನಗಳ ಮೂಲಕ ಜಾಹೀರಾತುಗಾಗಿ ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ 'ಮನ್ ಕಿ ಬಾತ್' ಕಾರ್ಯಕ್ರಮಕ್ಕೆ ಕೋಟ್ಯಂತರ ಮಂದಿ ಪ್ರೇಕ್ಷಕರಿದ್ದಾರೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಜನರ ಸಮಸ್ಯೆಗಳನ್ನು ಆಲಿಸುತ್ತಾರೆ.

ಹಲವು ವಿಷಯಗಳ ಬಗ್ಗೆ ಅವರು ದೇಶದ ಜನರಿಂದ ಸಲಹೆಗಳನ್ನು ಕೇಳುತ್ತಾರೆ. ಈಗ ಈ ಕಾರ್ಯಕ್ರಮವು ಸರ್ಕಾರದ ಖಜಾನೆಯನ್ನೂ ತುಂಬುತ್ತಿದೆ ಎಂಬುದು ಉತ್ತಮ ವಿಷಯವಾಗಿದೆ.

English summary
Prime Minister's Mann ki Baat helped state-owned radio broadcaster generate four times the revenue the government spent on its advertisement, according to a Right to Information reply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X